ಮಡಿಕೇರಿ: ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ವಿಶ್ರಾಂತಿ ಪಡೆಯಲು ತಮಿಳುನಾಡಿನ (Tamil Nadu) ಮಾಜಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (M.K Stalin) ಹಾಗೂ ಅವರ ಮಗ ಉದಯನಿಧಿ (Udhayanidhi Stalin) ಕುಟುಂಬಸ್ಥರು ಕೊಡಗಿಗೆ (Kodagu) ಆಗಮಿಸಿದ್ದಾರೆ.

ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್ ಒಂದರಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿದ್ದಾರೆ. ಸ್ಟಾಲಿನ್ ಪತ್ನಿ ದುರ್ಗಾ ಮತ್ತಿತರ ಕುಟುಂಬ ಸದಸ್ಯರು ಅವರೊಂದಿಗೆ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಅವರು ಕೊಡಗಿನ ಪ್ರಕೃತಿ ಮಡಿಲಲ್ಲಿ ವಿಶ್ರಾಂತಿ ಮೂಡ್‌ನಲ್ಲಿ ಇದ್ದಾರೆ. ಇದನ್ನೂ ಓದಿ: ಡಿಕೆಶಿ ಪಟ್ಟಾಭಿಷೇಕಕ್ಕೆ ರಾಮನಗರದಿಂದ 50 ಸಾವಿರ ಜನ!
ಇಂದು ಮತ್ತೆ ನಾಳೆ ಕೊಡಗಿನ ಕೆಲ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ ಮೂಲಗಳು ತಿಳಿಸಿವೆ. ಬಳಿಕ ತಮಿಳುನಾಡಿನತ್ತ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ಟಾಲಿನ್ ಒಂದು ತಿಂಗಳಿಗೂ ಹೆಚ್ಚು ಕಾಲ ತಮಿಳುನಾಡಿನ ರಾಜ್ಯದಾದ್ಯಂತ ಡಿಎಂಕೆ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದರು. ಚುನಾವಣೆಯ ನಂತರ ಸಣ್ಣ ವಿರಾಮಕ್ಕಾಗಿ ಕೊಡಗಿಗೆ ಅಗಮಿಸಿದ್ದಾರೆ. ಇದನ್ನೂ ಓದಿ: Air India, ಇಂಡಿಗೋ 250 ದೇಶೀಯ ವಿಮಾನಗಳ ಹಾರಾಟ ಕಡಿತ – ಮುಂಬೈ, ದೆಹಲಿ, ಬೆಂಗಳೂರಿಗೆ ಎಫೆಕ್ಟ್!
