ಮಂಗಳೂರು: ಇಲ್ಲಿನ (Mangaluru) ವಿಮಾನ ನಿಲ್ದಾಣಕ್ಕೆ ಬಂದಿದ್ದ ಎರಡು ವಿಮಾನಗಳು ಹವಾಮಾನ ವೈಪರಿತ್ಯದಿಂದಾಗಿ ಅರ್ಧಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ, ತಡವಾಗಿ ಲ್ಯಾಂಡ್ ಆಗಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದೆ. ಏರ್‌ಪೋರ್ಟ್ ಬಳಿಯೂ ಮಳೆಯಾಗುತ್ತಿದ್ದು, ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಸುತ್ತಾಡಿವೆ. ವಿಟ್ಲದ ಬಳಿ ಭಾರೀ ಕೆಲ ಭಾಗದಲ್ಲೇ ವಿಮಾನಗಳು ಸುತ್ತಾಡಿವೆ. ಅರ್ಧಗಂಟೆ ಬಳಿಕ ಎರಡೂ ವಿಮಾನಗಳು ಲ್ಯಾಂಡ್ ಆಗಿವೆ. ಇದನ್ನೂ ಓದಿ: ಬಿರುಗಾಳಿಗೆ ತರಗೆಲೆಯಂತೆ 50 ಅಡಿ ಎತ್ತರಕ್ಕೆ ಹಾರಿದ ವೃದ್ಧ – ವಿಡಿಯೋ ವೈರಲ್
ತೀರ ಕೆಳಭಾಗದಲ್ಲೇ ವಿಮಾನಗಳು ಹಾರಾಟ ನಡೆಸಿದ್ದರಿಂದ ವಿಟ್ಲದ ಜನರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಮಳೆ ಅವಾಂತರ; 104ಕ್ಕೇರಿದ ಸಾವಿನ ಸಂಖ್ಯೆ – ಪ್ರಯಾಗ್‌ರಾಜ್‌ನಲ್ಲೇ ಅತ್ಯಧಿಕ 21 ಜನ ಬಲಿ

