– ನಟ ದ್ವಾರಕೀಶ್ ಸೊಸೆಯಿಂದ ದಾಖಲಾಗಿದ್ದ ಅಟ್ರಾಸಿಟಿ ಕೇಸ್
ಬೆಂಗಳೂರು: ದಿ. ನಟ ದ್ವಾರಕೀಶ್ ಸೊಸೆ ದಾಖಲಿಸಿದ್ದ ಅಟ್ರಾಸಿಟಿ ಪ್ರಕರಣದಲ್ಲಿ (Atrocity Case – ಜಾತಿ ನಿಂದನೆ ಪ್ರಕರಣ) ಮಹತ್ವದ ಬೆಳವಣಿಗೆ ಕಂಡುಬಂದಿದೆ. ಆರೋಪಿಗಳನ್ನ ಪ್ರಕರಣದಿಂದ ಕೈಬಿಡಲು ತಲಾ 50,000 ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಇಬ್ಬರು ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ.
ಪ್ರಕರಣದಿಂದ ಕೈಬಿಡಲು ಪ್ರತಿ ಆರೋಪಿಯಿಂದ 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಡಿಯೋ ಲಭ್ಯವಾಗಿದೆ. ಈ ಬೆನ್ನಲ್ಲೇ ಡಿಸಿಆರ್‌ಇ ಡಿವೈಎಸ್ಪಿ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: 2.5 ಲಕ್ಷ ಬ್ರಿಟನ್ ಹುಡುಗಿಯರ ಮೇಲೆ 700 ಪಾಕಿಸ್ತಾನಿಗಳಿಂದ ಅತ್ಯಾಚಾರ: ಸಂಸದ ರೂಪರ್ಟ್ ಲೋವ್
ಡಿಸಿಆರ್ ಇ ಡಿವೈಎಸ್ಪಿ ಮಹೇಶ್ವರ ಗೌಡ ಹಾಗೂ ಕಾನ್ಸ್‌ಟೇಬಲ್ ಬಸವರಾಜ್ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ (Lokayukta Police Station) ಪ್ರಕರಣ ದಾಖಲಾಗಿದೆ.

ಏನಿದು ಕೇಸ್?
ಇದೇ ವರ್ಷ ಫೆಬ್ರವರಿಯಲ್ಲಿ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಸುಕನ್ಯಾ ಹಾಗೂ ಅವರ ಕುಟುಂಬ ಮತ್ತು ಸ್ನೇಹಿತರು ಸೇರಿ ಒಟ್ಟು 19 ಮಂದಿಯ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಾಗಿತ್ತು. ಬೆಂಗಳೂರು ಡಿಸಿಆರ್ ಇ ಪೊಲೀಸರು ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದರು. ಆದ್ರೆ ಆರೋಪಿಗಳನ್ನ ಕೈಬಿಡಲು ತಲಾ 50,000 ರೂ.ನಂತೆ 19 ಆರೋಪಿಗಳಿಂದ 9.50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಆಡಿಯೋ ಕೂಡ ಲಭ್ಯವಾಗಿದೆ.
ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 28,350 ಕೋಟಿ ಪರಿಹಾರ, ಇರಾನ್ ಮೇಲಿನ ನಿರ್ಬಂಧ ತೆರವು – 14 ಅಂಶಗಳ ಶಾಂತಿ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ
ಆಡಿಯೋ ಸಂಭಾಷಣೆಯಲ್ಲೇನಿದೆ?
ಪೊಲೀಸ್ – ನೋಡಿ, ಅವರು ಅಷ್ಟು ಹೇಳಿದ್ದಾರೆ.. ಸಾಹೇಬ್ರು ಇಷ್ಟು ಹೇಳಿದ್ದಾರೆ, ಎಲ್ಲರು ಕೂಡಿ ಕೇಳೋಣ, ಹೆಚ್ಚುಕಡಿಮೆ ಮಾಡಿ ಮುಗಿಸೋಣ
ಮಹಿಳೆ – ಬೇಲ್‌ಗೆ 50, 50 ಆಗುತ್ತೆ ಅಂತಾ
ಪೊಲೀಸ್ – ಬೇಲ ಅಲ್ಲ 25, 30 ಸಾವಿರ
ಮಹಿಳೆ – ಒಬ್ಬೊಬ್ಬರು 50, 50 ಕೊಟ್ಟುಬಿಡೋಕೆ ಹೇಳಿ ಸಾಹೇಬ್ರು ಹೇಳಿದ್ದಾರಂತ
ಪೊಲೀಸ್ – ಇಲ್ಲಿ ಮುಗಿತು ಅಂದ್ರೆ ಕೋರ್ಟ್‌ಗೆ ಹೋಗಬೇಕಿಲ್ಲ, ಎಲ್ಲವನ್ನು ಇಲ್ಲಿ ಮುಗಿಸಬಿಡ್ತಾರೆ.. ಬೇಲ್‌ಗೆ ದುಡ್ಡುಕೊಡಬೇಕು ಬೇಲ್ ಆಗಿಲ್ಲ ಅಂದ್ರೆ ಚಾರ್ಜ್ಶೀಟ್ ಎಲ್ಲಾ ಆಗುತ್ತೆ, ಸಾಹೇಬ್ರು ಇಲ್ಲಿಯೇ ಮುಗಿಸಿಬಿಡ್ತಾರೆ ಸಾಹೇಬ್ರು ಅಂತ ಹೇಳಿ.. ನಿಜ ಹೇಳಬೇಕು ಅಂದ್ರೆ ಕೇಸ್ ಯಾಕೆ ಬಿಟ್ಟಿದ್ದೀರ ಅಂದ್ರೆ ಎಲ್ಲರಿಗೂ ಕಾರಣ ಕೊಡಬೇಕು.. ನಿಮ್ಗೆ ಅಷ್ಟು ಆಗಲ್ಲ ಅಂದ್ರೆ, ಎಷ್ಟು ಆಗುತ್ತೆ ಅಂತಾ ಸಾಹೇಬ್ರಿಗೆ ಹೇಳ್ತಿನಿ…
ಮಹಿಳೆ – ಒಬ್ಬೊಬ್ಬರು ಒಂದೊಂದು ರೀತಿ ಹೇಳ್ತಿದ್ದಾರೆ.. ಇಷ್ಟು ಅಂತಾ ಅಮೌಂಟ್ ಹೇಳಿದ್ರೆ ಆಗುತ್ತೆ
ಪೊಲೀಸ್ – ನಾವ್ ಹೇಳಿದ್ರೆ ಸಾಹೇಬ್ರು ಒಪ್ಪಲ್ಲ… ಸಾಹೇಬ್ರು ಸಿಗೋದೆ ಕಷ್ಟ… ಎಷ್ಟು ಕೊಡ್ತಿರ ಹೇಳ್ಬಿಡಿ.. ನೀವೆ ಹೇಳ್ಬಿಡಿ
ವ್ಯಕ್ತಿ- ಏನ್ ಹೇಳೋದು ಸರ್ ಎಲ್ಲಾ ತೊಂದರೆಯಲ್ಲಿದ್ದೇವೆ
ಪೊಲೀಸ್ – ಎಲ್ಲರು 35 , 35 ಮಾಡಿಬಿಡಿ… ಅದಕ್ಕಿಂತ ಕೇಳಗಡೆ ಆದ್ರೆ ಆಗಲ್ಲ…
ಮಹಿಳೆ – 50 ಕೊಟ್ಟುಬಿಡ್ರಿ ಒಬ್ಬೊಬ್ಬರಿಗೆ..
ಪೊಲೀಸ್ – ತಲಾ ಒಬ್ಬೊಬ್ಬರಿಗೆ, 30 ಕಳೆದುಕೊಂಡಿದ್ದಾರೆ… 30,40 ಕೊಟ್ಟು ಕಳುಹಿಸಿದ್ದಾರೆ.. ಹೌದಾ..?
ಮಹಿಳೆ – ಹಾ ಸರ್
ಪೊಲೀಸ್ – ಅವರಂತೆ 70, 80 ಬೇಡ..ಅವರು ಏನ್ ಬೇಲ್‌ಗೆ ಖರ್ಚು ಮಾಡಿದ್ದಾರೆ ಅಷ್ಟು ಕೊಡಿ ನೀವು.. ಡಬಲ್ ಕೊಟ್ಟಿದ್ದಾನೆ ನಿಮ್ಮ ಓನರ್..
ಮಹಿಳೆ – ನನಗೆ ಗೊತ್ತಿಲ್ಲ ಸರ್
ಪೊಲೀಸ್ – ಲಾಯರ್ ಎದುರಿಗೆ ಕೇಳಿದೆ.. ನಿನ್ನೆ ಎಷ್ಟು ಕೊಟ್ಟರಂತೆ
ಮಹಿಳೆ – 30 ಅಂತೆ ಸಾರ್..
ಪೊಲೀಸ್ – 30 ಇಬ್ಬರಿಗೆ ಅಂದ್ರೆ 60 ಆಯ್ತಾ..? 60 ಬೇಡ ನನಗೆ,
ಪೊಲೀಸ್ – ನಿಮ್ಮನ್ನ ನೋಡಿದ್ರೆ ಅಮಾಯಕರು, ಸಹಾಯ ಮಾಡಬೇಕು ಅನ್ನಿಸುತ್ತಿದೆ.. ನೀವ್ ಬೇಲ್ ತೆಗೆದುಕೊಳ್ಳಬೇಕಾದ್ರೆ ಕೊಟ್ಟಿದ್ದೀರಾ ಇಲ್ವಾ..?
ಮಹಿಳೆ – ಹಾ ಸರ್
ಪೊಲೀಸ್ – ನೀವು ಅಲ್ಲಿ ಖರ್ಚು ಮಾಡೋದನ್ನ ಇಲ್ಲಿ ಮಾಡಿ.. ನನಗೆ ಬೇರೆ ಏನು ಉದ್ದೇಶ ಇಲ್ಲ… ನಿಮ್ಮ ಹತ್ತಿರ ತೆಗೆದುಕೊಂಡು ನಾನೇನು ಮಾಡ್ಲಿ..
