ಲಂಡನ್: ಪಾಕಿಸ್ತಾನ ಮೂಲದ ಪುರುಷರ ಗುಂಪೊಂದು (Grooming Gangs) ಬ್ರಿಟನ್‌ನ 2.5 ಲಕ್ಷಕ್ಕೂ ಅಧಿಕ ಮಕ್ಕಳು ಮತ್ತು ಸ್ತ್ರೀಯರ ಮೇಲೆ ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಲೈಂಗಿಕ ಶೋಷಣೆ ಬಗ್ಗೆ ಬ್ರಿಟನ್ ಸಂಸದ ರೂಪರ್ಟ್ ಲೋವ್ (Rupert Lowe) ಸಂಸತ್ತಿನಲ್ಲಿ ಪ್ರಸ್ತಾಪಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ಮಾತನಾಡಿದ ಅವರು, ಸ್ವತಂತ್ರ ತನಿಖೆಗಳ ವರದಿಗಳನ್ನು ಉಲ್ಲೇಖಿಸಿ, ಸಾವಿರಾರು ಬಾಲಕಿಯರು ಮತ್ತು ಮಹಿಳೆಯರು ಈ ಶೋಷಣೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದವರಲ್ಲಿ ಬಹುತೇಕರು ಪಾಕಿಸ್ತಾನ (Pakistan)ಮೂಲದ ಟ್ಯಾಕ್ಸಿ ಚಾಲಕರು ಹಾಗೂ ಸಣ್ಣ ವ್ಯಾಪಾರಿಗಳಾಗಿದ್ದರು ಎಂದು ತಿಳಿಸಿದ್ದಾರೆ.
3 ವರ್ಷದಲ್ಲಿ 700 ಜನರಿಂದ ರೇಪ್:
ಕಳೆದ 3 ವರ್ಷದಲ್ಲಿ 700 ಪಾಕಿಸ್ತಾನಿಗಳಿಂದ ಅತ್ಯಾಚಾರ ಕೃತ್ಯ ನಡೆದಿದೆ ಎಂದು ಬ್ರಿಟನ್‌ನ ಸಂಸದ ತಿಳಿಸಿದ್ದಾರೆ. ಸಂಸತ್ತಿನಲ್ಲಿ ಸಂತ್ರಸ್ತೆಯರ ಹೇಳಿಕೆಗಳನ್ನು ಕೇಳಿಸಲಾಯಿತು. ಒಬ್ಬ ಮಹಿಳೆ, ತನ್ನ ಮೇಲೆ 13ನೇ ವಯಸ್ಸಿನಿಂದಲೇ ದೌರ್ಜನ್ಯ ಆರಂಭವಾಗಿತ್ತು. ಹಲವು ವರ್ಷಗಳ ಕಾಲ ನಿರಂತರವಾಗಿ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ ಎಂದು ವಿವರಿಸಿದ್ದಾಳೆ.
ಇನ್ನೊಬ್ಬ ಸಂತ್ರಸ್ತೆ, ಬಾಲ್ಯದಲ್ಲೇ ಅಮಾನವೀಯ ಹಿಂಸೆಗೆ ಒಳಗಾಗಿ, ಗಂಭೀರ ಗಾಯಗಳಾಗಿದ್ದರೂ ಭಯದಿಂದ ವೈದ್ಯರ ಮುಂದೆ ಸತ್ಯ ಹೇಳಲು ಸಾಧ್ಯವಾಗಿರಲಿಲ್ಲ ಎಂದು ಆಕೆ ತಿಳಿಸಿದ್ದಾಳೆ.ಇದನ್ನೂ ಓದಿ: 28,350 ಕೋಟಿ ಪರಿಹಾರ, ಇರಾನ್ ಮೇಲಿನ ನಿರ್ಬಂಧ ತೆರವು – 14 ಅಂಶಗಳ ಶಾಂತಿ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ
ಮತ್ತೊಬ್ಬ ಮಹಿಳೆ, ತಮ್ಮನ್ನು ಬಂಧಿಸಿ ಹಿಂಸೆ ನೀಡಲಾಗುತ್ತಿತ್ತು. ಘಟನೆ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಹಾಗೂ ಕುಟುಂಬಕ್ಕೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು ಎಂದು ಆರೋಪಿಸಿದ್ದಾಳೆ.
ನಾಯಿಗಳಿಂದಲೂ ದೌರ್ಜನ್ಯ:
ನಮ್ಮನ್ನು ಪಂಜರದೊಳಗೆ ಬಂಧಿಸಿ ಇಡಲಾಗುತ್ತಿತ್ತು. ಸುತ್ತಲಿದ್ದ ಪುರುಷರು ಸಹಾಯ ಮಾಡುವ ಬದಲು, ನಾಯಿಗಳ ಮೂಲಕವೂ ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಬಳಿಕ ಅವರೂ ಸರದಿಯಲ್ಲಿ ಬಂದು ಶೋಷಣೆ ಮಾಡುತ್ತಿದ್ದರು. ನಂತರ ಮನಬಂದಂತೆ ಥಳಿಸುತ್ತಿದ್ದರು. ಈದ್ ಹಬ್ಬ ಹಾಗೂ ರಜಾ ದಿನಗಳಲ್ಲಿ ಇಂತಹ ಕೃತ್ಯಗಳು ಮತ್ತಷ್ಟು ಹೆಚ್ಚಾಗುತ್ತಿದ್ದವು ಎಂದು ಸಂತ್ರಸ್ತೆಯೊಬ್ಬಳು ಹೇಳಿದ್ದಾರೆ.
ಈ ಪ್ರಕರಣಗಳು ಬ್ರಿಟನ್‌ನಲ್ಲಿ ಹಲವು ವರ್ಷಗಳಿಂದ ಚರ್ಚೆಗೆ ಗ್ರಾಸವಾಗಿವೆ. ಮಕ್ಕಳ ಸುರಕ್ಷತೆ, ವಲಸೆ ನೀತಿ, ಪೊಲೀಸ್ ತನಿಖೆ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತಂತೆ ಮತ್ತೆ ಪ್ರಶ್ನೆಗಳು ಎದ್ದಿವೆ. ಇದನ್ನೂ ಓದಿ: ಶಾಂತಿ ಒಪ್ಪಂದಕ್ಕೆ ಅಮೆರಿಕ – ಇರಾನ್ ಸಹಿ; ತಕ್ಷಣದಿಂದಲೇ ಹಾರ್ಮುಜ್ ಜಲಸಂಧಿ ಓಪನ್
ಸಂಸದ ರೂಪರ್ಟ್ ಲೋವ್, ಸಂತ್ರಸ್ತೆಯರಿಗೆ ನ್ಯಾಯ ದೊರಕಬೇಕು ಮತ್ತು ಪ್ರಕರಣಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಪ್ರಕರಣಗಳ ಬಗ್ಗೆ ಸಂಪೂರ್ಣ ಮತ್ತು ಪಾರದರ್ಶಕ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
