ಬೀದರ್: ಕೆಪಿಎಸ್‌ಸಿ (KPSC) ಪಶುವೈದ್ಯರ ನೇಮಕಾತಿ ಹಗರಣ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ಬಸವರಾಜ್ ಕನ್ನಾಳೆ (Basavaraj Kannale) ಅತ್ಯಾಪ್ತರಿಗೆ ಸಿಐಡಿ (CID) ಆತಂಕ ಶುರುವಾಗಿದೆ.
ಒಂದು ಕಡೆ ಬಸವರಾಜ್ ಕನ್ನಾಳೆಯ ಸಂಬಂಧಿಕರಿಗೆ ಸಿಐಡಿಯ ನೋಟಿಸ್ ಭಯ ಶುರುವಾಗಿದ್ರೆ ಇತ್ತ ಕನ್ನಾಳೆಯ ಒಡನಾಟ ಹೊಂದಿದ ಅತ್ಯಾಪ್ತರಿಗೂ ಸಿಐಡಿಯ ನಡುಕ ಶುರುವಾಗಿದೆ. ಕನ್ನಾಳೆ ಅಕೌಂಟ್‌ಗೆ ಅಕ್ರಮ ಹಣ ವರ್ಗಾವಣೆ ಮತ್ತು ಹೂಡಿಕೆ ಮಾಡಿರುವ ಶಂಕೆ ಹಿನ್ನೆಲೆ ಅತ್ಯಾಪ್ತರಿಗೆ ಸಿಐಡಿ ಪೊಲೀಸರ ನೋಟಿಸ್ ಮತ್ತು ಬಂಧನದ ಭೀತಿ ಶುರುವಾಗಿದೆ. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಕೇಸ್ – ಅಭ್ಯರ್ಥಿ ಮನೆ ಮೇಲೆ ಸಿಐಡಿ ದಾಳಿ
ಇದೇ ತಿಂಗಳ 5ರಂದು ಸಿಐಡಿ ಪೊಲೀಸರು ಬೀದರ್ ನಗರದ ಚಿದ್ರಿ ಬಳಿ ಇರುವ ಲೈಫ್ ಇನ್ಯೂರೆನ್ಸ್ ಕಂಪನಿ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಿದ್ದರು. ಕನ್ನಾಳೆ ಆಪ್ತರಾಗಿರುವ ಪವನ್ ರೆಡ್ಡಿ, ಕಂಪನಿಯ ಮಾಲೀಕರು ಹಾಗೂ ಆರ್‌ಟಿಓ ಇನ್ಸ್ಪೆಕ್ಟರ್ ಆಗಿರುವ ರಾಜಶೇಖರ್ ಚಿದ್ರಿ, ಭಾಲ್ಕಿಯ ಸಹಕಾರಿ ಬ್ಯಾಕ್‌ನ ನಿರ್ದೇಶಕರಾಗಿರುವ ಓಂಕಾರ್‌ಗೆ ಸಿಐಡಿ ಪೊಲೀಸರ ಢವ ಢವ ಶುರುವಾಗಿದೆ.
ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ ಇನ್ನೂ ಹಲವು ಅತ್ಯಾಪ್ತರಿಗೆ ಸಿಐಡಿ ಪೊಲೀಸರ ಭಯ ಶುರುವಾಗಿದ್ದು, ಯಾವಾಗ ನೋಟಿಸ್ ಕೊಡ್ತಾರೆ? ಯಾವಾಗ ಬಂಧಿಸ್ತಾರೆ ಎಂದು ನಡುಕ ಶುರುವಾಗಿದೆ.ಇದನ್ನೂ ಓದಿ: ದಲಿತ ನಾಯಕರ ಏಳಿಗೆ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ- ಜಾರಕಿಹೊಳಿ ಪರ ಡಿಕೆಶಿ ಬ್ಯಾಟಿಂಗ್
