ಕಂಠ್ಮಂಡು/ಲಾಸಾ: ಟಿಬೆಟ್‌ನಲ್ಲಿ (Tibet Earthquake) ಬುಧವಾರ 5.3 ತೀವ್ರತೆಯ ಭೂಕಂಪ ಸಂಭವಿಸಿದೆ. ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ಪ್ರಕಾರ, ಭೂಕಂಪವು 35 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ನೇಪಾಳದ ಕೆಲವು ಭಾಗಗಳಲ್ಲೂ ಕಂಪನದ ಅನುಭವವಾಗಿದೆ.
ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಭೀಕರ ಪ್ರವಾಹ ಸಂಭವಿಸಿದ ಕೆಲವೇ ದಿನಗಳ ಬಳಿಕ ಈ ಭೂಕಂಪ ದಾಖಲಾಗಿದೆ. ಎತ್ತರದ ಪ್ರದೇಶದಲ್ಲಿನ ಹಿಮನದಿ ಕುಸಿತದಿಂದ ನೀರು, ಮಣ್ಣು ಮತ್ತು ಶಿಲಾಖಂಡರಾಶಿಗಳ ಪ್ರವಾಹ ಉಂಟಾಗಿ ನೇಪಾಳದ ರಸುವಾ ಜಿಲ್ಲೆ ಹಾಗೂ ಟಿಬೆಟ್‌ನ ಕೆಲವು ಭಾಗಗಳಲ್ಲಿ ಭಾರೀ ಹಾನಿಯಾಗಿತ್ತು.
ಪ್ರವಾಹದಿಂದ ಮನೆಗಳು, ರಸ್ತೆಗಳು ಮತ್ತು ಸೇತುವೆಗಳು ನಾಶವಾಗಿದ್ದವು. ಜಲವಿದ್ಯುತ್ ಮೂಲಸೌಕರ್ಯಗಳಿಗೂ ತೀವ್ರ ಹಾನಿಯಾಗಿದೆ. ಕನಿಷ್ಠ 11 ಜಲವಿದ್ಯುತ್ ಯೋಜನೆಗಳು ಪ್ರವಾಹದಿಂದ ಬಾಧಿತವಾಗಿವೆ.ಇದನ್ನೂ ಓದಿ: ಬಳ್ಳಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಖಾಕಿ ಸರ್ಪಗಾವಲು: 1,200 ಪೊಲೀಸರ ಪಹರೆಯಲ್ಲಿ ಬಿಜೆಪಿ ಪಾದಯಾತ್ರೆ
ಸುರಂಗಗಳ ಒಳಗೆ ಸಿಲುಕಿರುವವರಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ. ಕಷ್ಟಕರವಾದ ಭೂಪ್ರದೇಶ, ಭಾರೀ ಪ್ರಮಾಣದ ಅವಶೇಷಗಳು ಹಾಗೂ ಹಾನಿಗೊಳಗಾದ ಸಂಪರ್ಕ ಮಾರ್ಗಗಳ ನಡುವೆಯೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಭೂಕಂಪದಿಂದ ಯಾವುದೇ ಸಾವು-ನೋವು ಅಥವಾ ದೊಡ್ಡ ಪ್ರಮಾಣದ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿಲ್ಲ. ಇದನ್ನೂ ಓದಿ: ದೆಹಲಿ ಬಿಲ್ಡಿಂಗ್ ಕುಸಿತ ಕೇಸ್ – ಪಿಜಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ, ಗುತ್ತಿಗೆದಾರ ಅರೆಸ್ಟ್
