ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಐದು ಅಂತಸ್ತಿನ ಕಟ್ಟಡವೊಂದು ಕುಸಿದು 7 ಮಂದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಪಿಜಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಹಾಗೂ ಗುತ್ತಿಗೆದಾರರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಸುಧಾಂಶು ಎಂದು ಗುರುತಿಸಲಾಗಿದ್ದು, ಪಿಜಿ ನಿರ್ವಹಣೆ ಮಾಡುತ್ತಿದ್ದ. ಜೊತೆಗೆ ಕಾರ್ಮಿಕ ಗುತ್ತಿಗೆದಾರನಾಗಿದ್ದ ಸನೋಜ್ ಎಂಬಾತನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ದಲಿತ ನಾಯಕರ ಏಳಿಗೆ ಸಹಿಸಲು ಬಿಜೆಪಿಗೆ ಆಗುತ್ತಿಲ್ಲ- ಜಾರಕಿಹೊಳಿ ಪರ ಡಿಕೆಶಿ ಬ್ಯಾಟಿಂಗ್
ಇದಕ್ಕೂ ಮುನ್ನ ಬಂಧಿಸಲ್ಪಟ್ಟಿದ್ದ ಪಿಜಿ ಮಾಲೀಕ ಹರಿರಾಮ್ ಬನ್ಸಲ್ ಅವರ ಮಗನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ 2025ರ ಆಗಸ್ಟ್ನಿಂದ ತಾವು ಈ ಕಟ್ಟಡವನ್ನು ಶುಭಮ್ ತ್ಯಾಗಿ ಮತ್ತು ಸುಧಾಂಶು ಎಂಬ ಇಬ್ಬರಿಗೆ ಗುತ್ತಿಗೆ ನೀಡಿದ್ದೆವು. ಬಳಿಕ ಗುತ್ತಿಗೆ ಪಡೆದ ಆ ಆಸ್ತಿಯನ್ನು ಪಿಜಿಯಾಗಿ (ವಸತಿ ಗೃಹ) ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಸಂಬಂಧ ಮಾಲೀಕ ಹರಿರಾಮ್ ಗುಪ್ತಾ, ಅವರ ಪತ್ನಿ ಉರ್ಮಿಳಾ ಗುಪ್ತಾ ಹಾಗೂ ಮಗ ಮಹೇಶ್ ಗುಪ್ತಾ ಅವರನ್ನು ಬಂಧಿಸಲಾಗಿದೆ. ಆರಂಭದಲ್ಲಿ ಹರಿರಾಮ್ ಮಾಲೀಕರು ಎನ್ನಲಾಗಿತ್ತು. ಆದರೆ ದಾಖಲೆಗಳ ಪ್ರಕಾರ, ಉರ್ಮಿಳಾ ಅವರು ಕಟ್ಟಡದ ಮಾಲೀಕರೆಂದು ಹಾಗೂ ಹರಿರಾಮ್ ಹಾಗೂ ಮಹೇಶ್ ಪಿಜಿಯನ್ನು ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ದಕ್ಷಿಣ ವಲಯದ ಉಪ ಆಯುಕ್ತ ರಾಕೇಶ್ ಕುಮಾರ್ ಮತ್ತು ನಾಲ್ವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ.ಇದನ್ನೂ ಓದಿ: ರೀಲ್ಸ್ ವಿಚಾರಕ್ಕೆ ಗಲಾಟೆ; ಬೆಂಗಳೂರಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ
