ಚೆನ್ನೈ: ಮದುವೆ ವಿಚಾರದಲ್ಲಿ ತಂದೆ ಹಾಗೂ ಮಗನ ನಡುವೆ ನಡೆದ ಗಲಾಟೆ ತಾರಕಕ್ಕೇರಿ ಪುತ್ರನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಶಿವಮಣಿ(30) ತಂದೆಯಿಂದಲೇ ಕೊಲೆಯಾದ ಯುವಕ. ಪಾನಮತ್ತರಾಗಿದ್ದ ತಂದೆ-ಮಗ ಮದುವೆ ವಿಚಾರದಲ್ಲಿ ವಾಗ್ವಾದ ನಡೆದಿದೆ. ಇದೇ ಕೊಲೆಗೆ ಕಾರಣ ಎನ್ನಲಾಗಿದೆ.
Advertisement
Advertisement
ಶಿವಮಣಿಗೆ ಇಬ್ಬರು ಸಹೋದರಿಯರಿದ್ದು ಅವರಿಬ್ಬರ ಮದುವೆಯಾಗಿತ್ತು. ಇದೀಗ ತನಗೆ ಮದುವೆ ಮಾಡಿಸುವ ವಿಚಾರದಲ್ಲಿ ಮನೆಯವರು ಅಸಡ್ಡೆ ತೋರುತ್ತಿದ್ದಾರೆ ಎಂದು ಶಿವಮಣಿ ಕ್ಯಾತೆ ತೆಗೆದಿದ್ದಾನೆ. ಇದನ್ನೂ ಓದಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿ ಚಾರ್ಜಿಂಗ್ ವೇಳೆ ಸ್ಫೋಟ- ಓರ್ವ ಸಾವು, ನಾಲ್ವರು ಗಂಭೀರ
Advertisement
ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ಜಗಳ ತಾರಕಕ್ಕೇರಿ ತಂದೆ ತನ್ನ ಮಗನಿಗೆ ಚಾಕುವಿನಿಂದ ಇರಿದುಬಿಟ್ಟಿದ್ದಾರೆ. ಪರಿಣಾಮ ಶಿವಮಣಿ ಸ್ಥಳದಲ್ಲಿಯೇ ಮೃರತಪಟ್ಟಿದ್ದಾನೆ.
Advertisement
ಘಟನೆಯ ಬಳಿಕ ತಂದೆ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.