Connect with us

Crime

9 ವರ್ಷದ ಮಗಳ ಮೇಲೆ ಹಲವು ತಿಂಗಳು ನಿರಂತರ ಅತ್ಯಾಚಾರ ಎಸಗಿದ ತಂದೆ

Published

on

– ಕುಡಿದು ಮಗಳ ಮೇಲೆ ಬೇಕಾಬಿಟ್ಟಿ ಹಲ್ಲೆ

ಮುಂಬೈ: ತನ್ನ 9 ವರ್ಷದ ಮಗಳ ಮೇಲೆಯೇ ಹಲವು ತಿಂಗಳುಗಳ ಕಾಲ ನಿರಂತರ ಅತ್ಯಾಚಾರ ಎಸಗಿ, ಹಲ್ಲೆ ನಡೆಸಿ ಕಾಮುಕ ತಂದೆ ವಿಕೃತಿ ಮೆರೆದಿದ್ದಾನೆ.

ಪೊಲೀಸರ ರಕ್ಷಣಾ ಕಾರ್ಯಾಚರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, 9 ವರ್ಷದ ಬಾಲಕಿಯನ್ನು ರಕ್ಷಿಸಿ, 48 ವರ್ಷದ ಕಾಮುಕ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆ ಮೇಲೆ ಅತ್ಯಾಚಾರ ಹಾಗೂ ಹಲ್ಲೆ ಮಾಡುತ್ತಿದ್ದ ತಂದೆಯ ವಿಕೃತಿ ಕಂಡು ಮಹಿಳೆ ರಕ್ಷಣಾ ಕಾರ್ಯಾಚರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ತನಿಖೆ ಆರಂಬಿಸಿದ್ದು, ಈ ವೇಳೆ ಬಾಲಕಿ ಸಹ ತನ್ನ ಕಾಮುಕ ತಂದೆಯ ಕುರಿತು ಪೊಲೀಸರಿಗೆ ವಿವರಿಸಿದ್ದಾಳೆ.

ಬಹುತೇಕ ಅತ್ಯಾಚಾರ ಪ್ರಕರಣಗಳು ಸಂತ್ರಸ್ತರ ಪರಿಚಯಸ್ಥರು ಹಾಗೂ ಸಂಬಂಧಿಕರಿಂದಲೇ ನಡೆಯುತ್ತಿವೆ ಎಂಬುದನ್ನು ಅರಿತ ಮಹಿಳೆ, ಪೊಲೀಸರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ತಂದೆ ತನ್ನ ಮಗಳೆ ಮೇಲೆಯೇ ಅತ್ಯಾಚಾರ ಎಸಗಿ, ಹಲ್ಲೆ ಮಾಡುತ್ತಿರುವ ಕುರಿತು ನನಗೆ ತಿಳಿದಿದೆ ಎಂದು ತಿಳಿಸಿದ್ದಾಳೆ.

ಕಾಮುಕ ತಂದೆಯ ಕುರಿತು ಮಹಿಳೆ ಪೊಲೀಸರಿಗೆ ತಿಳಿಸುತ್ತಿದ್ದಂತೆ, ಆರೋಪಿಯ ಮನೆಗೆ ಪೊಲೀಸರ ತಂಡ ತೆರಳಿದೆ. ಈ ವೇಳೆ ವಿವಸ್ತ್ರವಾಗಿದ್ದ ಕಾಮುಕ ತಂದೆಯನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆತಂದಿದ್ದಾರೆ.

ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, 9 ವರ್ಷದ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿ ಮದ್ಯ ವ್ಯಸನಿಯಾಗಿದ್ದ. ಅಲ್ಲದೆ ನನ್ನ ಮೇಲೆ ಹಲ್ಲೆ ನಡೆಸಿ, ಬಲತ್ಕಾರ ಮಾಡುತ್ತಿದ್ದ ಎಂದು ಬಾಲಕಿ ಪೊಲೀಸರಿಗೆ ವಿವರಿಸಿದ್ದಾಳೆ.

ಆರೋಪಿ ಇತರ ಹೆಣ್ಣು ಮಕ್ಕಳ ಮೇಲೆಯೂ ಇದೇ ರೀತಿ ಕೃತ್ಯ ಎಸಗಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಐಪಿಸಿಯ ವಿವಿಧ ಸೆಕ್ಷನ್‍ಗಳಡಿ ಹಾಗೂ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.

Click to comment

Leave a Reply

Your email address will not be published. Required fields are marked *