Thursday, 5th December 2019

Recent News

ಅಣ್ಣಾ ನೀವು ಎವರ್‌ಗ್ರೀನ್‌ ಸಿಎಂ ಎಂದಿದ್ದಕ್ಕೆ ಏ ಹೋಗೋ ಮೂದೇವಿ ಎಂದ ಸಿದ್ದು

ಮೈಸೂರು: ನೀವು ಎವರ್ ಗ್ರೀನ್ ಸಿಎಂ ಎಂದ ಅಭಿಮಾನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಏ ಹೋಗೋ ಮೂದೇವಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಇಂದು ಕಾರ್ಯಕರ್ತರ ಸಭೆಗಾಗಿ ಮೈಸೂರಿನ ಜೆ.ಪಿ ಫಾರ್ಚುನ್ ಹೋಟೆಲಿಗೆ ಆಗಮಿಸಿದ್ದರು. ಸಿದ್ದರಾಮಯ್ಯ ಕಾರಿನಿಂದ ಇಳಿಯುತ್ತಿದ್ದಂತೆ ಅಭಿಮಾನಿ ಅವರನ್ನು ನೋಡಿ, ‘ಅಣ್ಣ ನೀವು ಎವರ್‌ಗ್ರೀನ್‌ ಸಿಎಂ’ ಎಂದು ಹೇಳಿದ್ದಾರೆ.

ಅಭಿಮಾನಿ ಆ ರೀತಿ ಹೇಳುತ್ತಿದ್ದಂತೆ ಸಿದ್ದರಾಮಯ್ಯ ಏ ಹೋಗೋ ಮೂದೇವಿ ಎಂದು ಅಭಿಮಾನಿಯ ಕೆನ್ನೆಗೆ ಪ್ರೀತಿಯಿಂದ ತಟ್ಟಿದ್ದಾರೆ. ಸಿದ್ದರಾಮಯ್ಯ ಹೋಟೆಲಿಗೆ ಬರುವಾಗ ಗೋಲ್ಡನ್ ಕಲರ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್ ಆಗಿ ಬಂದಿದ್ದರು.

ಸಿದ್ದರಾಮಯ್ಯ ಅವರನ್ನು ಕಂಡ ಅಭಿಮಾನಿ ಪುಳಕಿತನಾಗಿ ಎವರ್ ಗ್ರೀನ್ ಸಿಎಂ ಎಂದು ಹೇಳಿದ್ದಾನೆ.

Leave a Reply

Your email address will not be published. Required fields are marked *