CinemaKarnatakaLatestMain PostSandalwood

‘ರಾಜಕುಮಾರಿ’ಯ ಲುಕ್ ನಲ್ಲಿ ಮಿಂಚಿದ ಖ್ಯಾತ ನಟಿ ಕಾರುಣ್ಯ ರಾಮ್

ನಾಡಿನಾದ್ಯಂತ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸ್ಯಾಂಡಲ್ ವುಡ್ ನಲ್ಲೂ ದಸರಾ ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸುತ್ತಿದ್ದಾರೆ. ನಟಿ ಕಾರುಣ್ಯ ರಾಮ್ (Karunya Ram) ಇದೇ ಸಂದರ್ಭದಲ್ಲಿ ಫೋಟೋ ಶೂಟ್ ಮಾಡಿಸಿದ್ದು, ರಾಜಕುಮಾರಿ ಲುಕ್ ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ದಸರಾಗೂ ಮತ್ತು ಅರಮನೆಗೂ ನಂಟಿರುವ ಕಾರಣದ ಕಾನ್ಸೆಪ್ಟ್ ನಲ್ಲಿ ಈ ಫೋಟೋ ಶೂಟ್ (Photoshoot) ನಡೆದಿದೆ. ಅಂಥದ್ದೇ ಲೋಕೇಶ್ ಹುಡುಕಿ ಅಲ್ಲಿಯೇ ಫೋಟೋಗಳನ್ನು ಸೆರೆ ಹಿಡಿದಿರುವುದು ವಿಶೇಷ.

ಇದು ವಿಶೇಷವಾಗಿ ನವರಾತ್ರಿಗೆಂದೇ ಮಾಡಲಾದ ಫೋಟೋ ಶೂಟ್. ಕಾನ್ಸೆಪ್ಟ್ ಹಾಗೂ ಡಿಸೈನ್ ಬಿಂದು ರೆಡ್ಡಿ (Bindu Reddy) ಅವರು ಮಾಡಿದ್ದು, ಮಧುರಾ (Madhura) ಅವರ ಫೋಟೋಗ್ರಫಿ ಹಾಗೂ  ನಿಖಿತಾ ಆನಂದ್ (Nikita Anand) ಮೇಕಪ್  ಮಾಡಿದ್ದಾರೆ. ಇದೊಂದು ನನ್ನ ಜೀವನದ ಸುಂದರ ಕ್ಷಣ. ಎಲ್ಲ ಫೋಟೋಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಅಂತಾರೆ ಕಾರುಣ್ಯ. ಇದನ್ನೂ ಓದಿ:ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

ಮೊನ್ನೆಯಷ್ಟೇ ಕಾರುಣ್ಯ ರಾಮ್ ನಟನೆಯ ಪೆಟ್ರೊಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿದೆ. ಕಾರುಣ್ಯ ನಿರ್ವಹಿಸಿದ ಪಾತ್ರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಅಲ್ಲದೇ, ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾದಲ್ಲಿ ಕಾರುಣ್ಯ ನಟಿಸಿದ್ದು, ಈ ಸಿನಿಮಾದಲ್ಲಿ ಅವರು ಪ್ರಿಯಾ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಆ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ.

ನಾನಾ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಕಾರುಣ್ಯ ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ ಸೇರಿದಂತೆ ಪ್ರಯೋಗಾತ್ಮಕ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಮನೆ ಮಾರಾಟಕ್ಕಿದೆ ಸಿನಿಮಾದ ನಟನೆಗಾಗಿ ಇವರು ಸೈಮಾ ಪ್ರಶಸ್ತಿ ಕೂಡ ದೊರೆತಿದೆ. ಸಿನಿಮಾಗಳಲ್ಲಿ ಮಾತ್ರವಲ್ಲ, ಕಿರುತೆರೆ ಹಲವಾರು ಶೋಗಳಲ್ಲಿ ಕಾರುಣ್ಯ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಕೂಡ ಇವರಾಗಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ತಮಿಳಿನ ಎರಡು ಚಿತ್ರಗಳಲ್ಲೂ ಕಾರುಣ್ಯ ನಟಿಸಿದ್ದಾರೆ. ಆ ಮೂಲಕ ತಮಿಳು ಪ್ರೇಕ್ಷಕರಿಗೂ ಇವರು ಹತ್ತಿರವಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂವಾದಿಸುವ ಇವರು, ಟ್ರಾವೆಲ್ ಪ್ರಿಯೆ. ಸದಾ ದೇಶಗಳನ್ನು ಸುತ್ತುತ್ತಲೇ ಇರುತ್ತಾರೆ. ಅವುಗಳ ಮಾಹಿತಿಯನ್ನೂ ಹಂಚಿಕೊಳ್ಳುತ್ತಾರೆ.

Live Tv

Leave a Reply

Your email address will not be published. Required fields are marked *

Back to top button