ಬಾಗಲಕೋಟೆ: ಅನ್ಯಕೋಮಿನ ಯುವಕನ ಹೆಸರಿನಲ್ಲಿ ನಕಲಿ ಫೇಸ್‍ಬಯಕ್ ಖಾತೆಯನ್ನು ಕ್ರಿಯೆಟ್ ಮಾಡಿ ಪ್ರಚೋದನಕಾರಿ ಪೋಸ್ಟ್‍ಗಳನ್ನು ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಶಿಂಧಿಕುರಬೇಟ್ ನಿವಾಸಿ ಸಿದ್ದಾರೂಢ ಶ್ರೀಕಾಂತ ಎಂಬವನೇ ಬಂಧಿತ ಆರೋಪಿ. ಇದನ್ನೂ ಓದಿ: JNU ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಜಾಮೀನು ಅರ್ಜಿ ವಜಾ
Advertisement
Advertisement
ಶಿವಮೊಗ್ಗದ ಹಿಂದೂಪರ ಸಂಘಟನೆಗಳ ಕಾರ್ಯಕರ್ತ ಹರ್ಷನ ಕೊಲೆಯ ಬಳಿಕ ಶ್ರೀಕಾಂತ ಎಂಬವನು ಮುಸ್ತಾಕ್ ಅಲಿ ಎಂಬ ಮುಸ್ಲಿಂ ಯುವಕನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಪ್ರಚೋದನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದ.
Advertisement
Advertisement
ಮುಸ್ತಾಕ್ ಅಲಿ ಬಾಗಲಕೋಟೆಯ ನಿವಾಸಿ ಎಂದೂ ಪ್ರೊಫೈಲ್‍ನಲ್ಲಿ ದಾಖಲಿಸಿದ್ದ. ಈ ಬಗ್ಗೆ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಒಂದು ಗುಂಪು ದೂರು ನೀಡಿತ್ತು. ತಕ್ಷಣವೇ ತನಿಖೆ ನಡೆಸಿದ ಬಾಗಲಕೋಟೆ ಪೊಲೀಸರು ಶ್ರೀಕಾಂತ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್
ಹಿಜಬ್, ದಿ ಕಾಶ್ಮೀರಿ ಫೈಲ್ಸ್ ಹಾಗೂ ಹಿಂದೂ ದೇವಾಲಯಗಳ ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎನ್ನುವ ವಿಚಾರ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಪ್ರಕರಣ ಬಯಲಾಗಿದೆ.