Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Search

Archives

  • August 2026
  • July 2026
  • June 2026
  • May 2026
  • April 2026
  • March 2026
  • February 2026
  • January 2026
  • December 2025
  • November 2025
  • October 2025
  • September 2025
  • August 2025
  • July 2025
  • June 2025
  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022
  • March 2022
  • February 2022
  • January 2022
  • December 2021
  • November 2021
  • October 2021
  • September 2021
  • August 2021
  • July 2021
  • June 2021
  • May 2021
  • April 2021
  • March 2021
  • February 2021
  • January 2021
  • December 2020
  • November 2020
  • October 2020
  • September 2020
  • August 2020
  • July 2020
  • June 2020
  • May 2020
  • April 2020
  • March 2020
  • February 2020
  • January 2020
  • December 2019
  • November 2019
  • October 2019
  • September 2019
  • August 2019
  • July 2019
  • June 2019
  • May 2019
  • April 2019
  • March 2019
  • February 2019
  • January 2019
  • December 2018
  • November 2018
  • October 2018
  • September 2018
  • August 2018
  • July 2018
  • June 2018
  • May 2018
  • April 2018
  • March 2018
  • February 2018
  • January 2018
  • December 2017
  • November 2017
  • October 2017
  • September 2017
  • August 2017
  • July 2017
  • June 2017
  • May 2017
  • April 2017
  • March 2017
  • February 2017

Categories

  • 31 Districts
  • Advertisement
  • Astrology
  • Automobile
  • Ayodhya Ram Mandir
  • Ayodhya Updates
  • Bagalkot
  • BELAKU
  • Belgaum
  • Bellary
  • Bengaluru City
  • Bengaluru Rural
  • Bidar
  • Big Bulletin
  • Bollywood
  • Chamarajanagar
  • Chikkaballapur
  • Chikkamagaluru
  • Chitradurga
  • Cinema
  • Column
  • Corona
  • Court
  • Cricket
  • Crime
  • Dakshina Kannada
  • Davanagere
  • Delhi Election 2025
  • Dharwad
  • Dina Bhavishya
  • Districts
  • Education
  • Election News
  • Entertainment Videos
  • Explainer
  • Fashion
  • Featured
  • Food
  • Gadag
  • Hassan
  • Haveri
  • Health
  • Kalaburagi
  • Karnataka
  • Karnataka Budget 2022
  • Karnataka Budget 2023
  • Karnataka Budget 2024
  • Karnataka Election
  • Karnataka Election 2023
  • Kodagu
  • Kolar
  • Koppal
  • Latest
  • Main Post
  • Mandya
  • Monsoon
  • Most Shared
  • Mysuru
  • National
  • News Videos
  • Non Veg
  • Other Sports
  • Out of the box
  • Photos
  • Political News
  • Public Hero
  • Raichur
  • Ramanagara
  • Rameshwaram Cafe
  • Sandalwood
  • Shivamogga
  • Smartphones
  • South cinema
  • Special
  • Sports
  • States
  • Stories
  • Tech
  • Telangana
  • Telecom
  • Top Stories
  • Travel
  • Tumakuru
  • TV Shows
  • Udupi
  • Uncategorized
  • Uttara Kannada
  • Veg
  • Videos
  • Vijayapura
  • World
  • Yadgir
  • ಆತ್ಮಹತ್ಯೆ
  • ಟ್ರೆಂಡಿಂಗ್ ನ್ಯೂಸ್ ( Trending News )
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.
Reading: PUBLiC TV Explainer| ಕೊನೆಗೂ ಕರುನಾಡ ರೈಲು ಜಾಲಕ್ಕೆ ಸೇರಿದ ಮಂಗಳೂರು – ಕೇರಳ ಲಾಬಿಗೆ ಬ್ರೇಕ್!
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
© Public TV. Design Company Knowtable. All Rights Reserved.

Home | Districts | PUBLiC TV Explainer| ಕೊನೆಗೂ ಕರುನಾಡ ರೈಲು ಜಾಲಕ್ಕೆ ಸೇರಿದ ಮಂಗಳೂರು – ಕೇರಳ ಲಾಬಿಗೆ ಬ್ರೇಕ್!

Districts

PUBLiC TV Explainer| ಕೊನೆಗೂ ಕರುನಾಡ ರೈಲು ಜಾಲಕ್ಕೆ ಸೇರಿದ ಮಂಗಳೂರು – ಕೇರಳ ಲಾಬಿಗೆ ಬ್ರೇಕ್!

Last updated: August 27, 2026 10:13 pm
By
Public TV
Share
8 Min Read
Mangaluru Rail Network Officially Merged with Mysuru Division

ಬರೋಬ್ಬರಿ 119 ವರ್ಷಗಳ ದೀರ್ಘ ಕಾಯುವಿಕೆ ಮತ್ತು ನಿರಂತರ ಹೋರಾಟಕ್ಕೆ ಕೊನೆಗೂ ಐತಿಹಾಸಿಕ ಜಯ ಸಿಕ್ಕಿದೆ. ದಕ್ಷಿಣ ರೈಲ್ವೆಯ ಹಿಡಿತದಿಂದ ಮುಕ್ತವಾಗಿರುವ ಕರ್ನಾಟಕದ ಕರಾವಳಿ ಹೆಬ್ಬಾಗಿಲು ಮಂಗಳೂರು(Mangaluru) ಈಗ ಅಧಿಕೃತವಾಗಿ ನೈಋತ್ಯ ರೈಲ್ವೆಯ ಮೈಸೂರು(Mysuru) ವಿಭಾಗಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕನ್ನಡಿಗರ ಬಹುದಿನಗಳ ಅಸ್ಮಿತೆಯ ಕನಸು ನನಸಾಗಿದೆ. ಮಲತಾಯಿ ಧೋರಣೆಯ ಅಧ್ಯಾಯ ಮುಗಿದು, ಕರಾವಳಿ-ಮೈಸೂರು ನಡುವಿನ ಬಾಂಧವ್ಯಕ್ಕೆ ಹೊಸ ರೈಲ್ವೆ ಗರಿ ಮೂಡಿದೆ. ಇದು ಕೇವಲ ಒಂದು ಆಡಳಿತಾತ್ಮಕ ಬದಲಾವಣೆಯಲ್ಲ, ಕನ್ನಡಿಗರ ಸ್ವಾಭಿಮಾನ ಮತ್ತು ಸಮಗ್ರ ಅಭಿವೃದ್ಧಿಯ ಮಹತ್ವದ ಮೈಲುಗಲ್ಲು. ಕರ್ನಾಟಕದ ಅಭಿವೃದ್ಧಿ ಇದರ ಅಗತ್ಯ ಏನು? ಕೇರಳ ವಿರೋಧಿಸುತ್ತಿರುವುದು ಯಾಕೆ? ಇತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹಿನ್ನೆಲೆ ಏನು?
ಬ್ರಿಟಿಷರ ಆಳ್ವಿಕೆಯಲ್ಲಿ ಮಂಗಳೂರಿನ ಅತ್ತಾವರದಲ್ಲಿ 1907 ರಲ್ಲಿ ರೈಲು ನಿಲ್ದಾಣ ನಿರ್ಮಿಸಿ, ನೇತ್ರಾವತಿ ನದಿಗೆ ಸೇತುವೆ ಕಟ್ಟಿ ಕೇರಳ-ಮದ್ರಾಸ್ ಮಾರ್ಗಕ್ಕೆ ಸಂಪರ್ಕ ಕಲ್ಪಿಸಲಾಯಿತು. 1951ರಲ್ಲಿ ಸ್ವತಂತ್ರ ಭಾರತದಲ್ಲಿ ದಕ್ಷಿಣ ರೈಲ್ವೆ ವಲಯ ರಚನೆಯಾದಾಗ ಮಂಗಳೂರು, ಬೆಂಗಳೂರು ಹಾಗೂ ಮೈಸೂರು ಈ ವಲಯಕ್ಕೆ ಒಳಪಟ್ಟವು. 2003 ರಲ್ಲಿ ಹುಬ್ಬಳ್ಳಿಯನ್ನು ಕೇಂದ್ರವಾಗಿಸಿಕೊಂಡು ಸ್ವತಂತ್ರ ನೈಋತ್ಯ ರೈಲ್ವೆ ವಲಯ ರಚನೆಯಾದಾಗ ಬೆಂಗಳೂರು-ಮೈಸೂರು ಇದಕ್ಕೆ ಸೇರಿದರೂ, ಮಂಗಳೂರು ಮಾತ್ರ ಚೆನ್ನೈ/ಪಾಲಕ್ಕಾಡ್(Palakkad) ವಿಭಾಗದಲ್ಲೇ ಉಳಿದು ಅನ್ಯಾಯಕ್ಕೊಳಗಾಯಿತು.

The Gazette Notification is here!

Once again I thank our Union Railway Ministry led by Shri @AshwiniVaishnaw @VSOMANNA_BJP for enabling this long sought change.

Mangaluru & all its Railway enthusiasts and passengers looked forward to it for years now.

May this change to… pic.twitter.com/BqNIlhdq0E

— Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ (@CaptBrijesh) August 22, 2026

ಕೇರಳ ಲಾಬಿ ಹೇಗೆ?
ಮಂಗಳೂರು ಸೆಂಟ್ರಲ್ (Mangaluru Central) ಹಾಗೂ ಜಂಕ್ಷನ್‌ಗಳಲ್ಲಿ ಮಲಯಾಳಂ ಪ್ರಾಬಲ್ಯವಿದ್ದು, ಕರಾವಳಿ ಕನ್ನಡಿಗರ ಬೇಡಿಕೆಗಳಿಗಿಂತ ಕೇರಳದ ಪ್ರಯಾಣಿಕರ ಹಿತಾಸಕ್ತಿಗೆ ಆದ್ಯತೆ ಸಿಗುತ್ತಿತ್ತು. ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಾತಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಸೂಕ್ತ ಅವಕಾಶ ಸಿಗುತ್ತಿರಲಿಲ್ಲ. ಇಲ್ಲಿಗೆ ಬರುವ ಬಹುತೇಕ ರೈಲುಗಳು ಕನ್ನಡಿಗರ ಅಗತ್ಯಕ್ಕಿಂತ ಕೇರಳದ ಪ್ರಯಾಣಿಕರ ಹಿತಾಸಕ್ತಿಗೇ ಆದ್ಯತೆ ನೀಡುತ್ತಿದ್ದವು.

More Read

Avocado Sandwich 2
10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಆವಕಾಡೊ ದಹಿ ಸ್ಯಾಂಡ್‌ವಿಚ್
Onion Price Hike
ಕೆ.ಜಿಗೆ 25 ರೂ.ಯಿದ್ದ ಈರುಳ್ಳಿ ಬೆಲೆ ಈಗ 65ಕ್ಕೆ – ಯಾಕೆ ಈ ಹೆಚ್ಚಳ? ಮತ್ತೆ ಇಳಿಕೆಯಾಗುತ್ತಾ?
WhatsApp Image 2026 08 27 at 19.38.31
ನಿನ್ನ ಪತ್ರಗಳು ತಡವಾಗುತ್ತಿವೆ.. ಭಾವಗಳಲ್ಲ..!

ಮಂಗಳೂರು ನಗರದ ಸುತ್ತಮುತ್ತಲೇ ಮೂರು ಆಡಳಿತಗಳಿದ್ದವು—ಉಳ್ಳಾಲ, ಮಂಗಳೂರು ಸೆಂಟ್ರಲ್/ಜಂಕ್ಷನ್‌ಗಳು (ದಕ್ಷಿಣ ರೈಲ್ವೆ), ಫರಂಗಿಪೇಟೆ-ಪುತ್ತೂರು ಮಾರ್ಗ (ನೈಋತ್ಯ ರೈಲ್ವೆ) ಹಾಗೂ ತೋಕೂರು-ಸುರತ್ಕಲ್ ಮಾರ್ಗ (ಕೊಂಕಣ ರೈಲ್ವೆ). ಇದರಿಂದ ರೈಲುಗಳ ವೇಳಾಪಟ್ಟಿ ಮತ್ತು ಅಭಿವೃದ್ಧಿ ಸಮನ್ವಯತೆ ಹಳಿ ತಪ್ಪಿತ್ತು.ಎಲ್ಲಕ್ಕಿಂತ ಹೆಚ್ಚಾಗಿ, ಕರಾವಳಿ ತಂದುಕೊಡುತ್ತಿದ್ದ ಕೋಟ್ಯಂತರ ರೂಪಾಯಿ ಆದಾಯವೆಲ್ಲ ಪಾಲಕ್ಕಾಡ್ ವಿಭಾಗದ ತಿಜೋರಿ ಸೇರುತ್ತಿತ್ತು.

 

indian railways southern railway 1

ಹೊಸ ಗಡಿ ಬದಲಾವಣೆ
ತೋಕೂರು: ಇನ್ನು ಮುಂದೆ ನೈಋತ್ಯ ರೈಲ್ವೆ (ಮೈಸೂರು ವಿಭಾಗ) ಮತ್ತು ಕೊಂಕಣ ರೈಲ್ವೆಯ ಗಡಿ ನಿಲ್ದಾಣವಾಗಲಿದೆ.
ಉಳ್ಳಾಲ: ದಕ್ಷಿಣ ದಿಕ್ಕಿನಲ್ಲಿ ನೈಋತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆ (ಪಾಲಕ್ಕಾಡ್) ನಡುವಿನ ಗಡಿಯಾಗಿ ಕಾರ್ಯನಿರ್ವಹಿಸಲಿದೆ.

ಕನ್ನಡಿಗರಿಗೆ ಲಾಭ ಏನು?
ಮಂಗಳೂರು ಜಾಲ ಮತ್ತು ಪಣಂಬೂರು ಬಂದರಿನ ಸರಕು ಸಾಗಣೆ ಆದಾಯ ಇನ್ನು ನೇರವಾಗಿ ಮೈಸೂರು ವಿಭಾಗಕ್ಕೆ ಸೇರ್ಪಡೆ. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಸೇರಿದಂತೆ ಹೆಚ್ಚುವರಿ ರೈಲುಗಳ ಬೇಡಿಕೆಗೆ ತಕ್ಷಣದ ಸ್ಪಂದನೆ ಸಿಗಲಿದೆ. ಮಂಗಳೂರು-ಬೆಂಗಳೂರು ಮಾರ್ಗದ ಹಳಿ ದ್ವಿಪಥ ಕಾಮಗಾರಿ ಹಾಗೂ ವಿದ್ಯುದ್ದೀಕರಣ ಯೋಜನೆಗಳಿಗೆ ವೇಗ ಸಿಗಲಿದೆ. ಸ್ಥಳೀಯ ರೈಲ್ವೆ ನೇಮಕಾತಿ ಮತ್ತು ಗ್ರೂಪ್-ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ. ಮೂರು ವಲಯಗಳ ಗೊಂದಲ ನಿವಾರಣೆಯಾಗಿ, ರೈಲುಗಳ ಸಂಚಾರ ವೇಳಾಪಟ್ಟಿ ಸುಲಲಿತವಾಗಲಿದೆ.

ಈ ಹಿಂದೆ ಮಂಗಳೂರು ಪಾಲಕ್ಕಾಡ್ ವಿಭಾಗದ ಅಧೀನದಲ್ಲಿದ್ದಾಗ, ಬೆಂಗಳೂರಿನಿಂದ ಮಂಗಳೂರಿಗೆ ಹೊಸ ರೈಲುಗಳನ್ನು ಘೋಷಿಸಲು ಅಥವಾ ಸಮಯ ಬದಲಾವಣೆ ಮಾಡಲು ಕೇರಳದ ಒಪ್ಪಿಗೆ ಬೇಕಾಗಿತ್ತು. ಈಗ ಸಂಪೂರ್ಣ ನಿಯಂತ್ರಣ ಕರ್ನಾಟಕದ ಕೈಗೆ ಬರುವುದರಿಂದ ಹಗಲು ಮತ್ತು ರಾತ್ರಿ ವೇಳೆಯ ಹೆಚ್ಚುವರಿ ಎಕ್ಸ್‌ಪ್ರೆಸ್ ರೈಲುಗಳನ್ನು ಸುಲಭವಾಗಿ ಆರಂಭಿಸಬಹುದು. ಕರಾವಳಿಯ ಪ್ರಮುಖ ನಗರಗಳಾದ ಮಂಗಳೂರು, ಉಡುಪಿ ಮತ್ತು ಕಾರವಾರ ನಡುವೆ ಹೆಚ್ಚಿನ ಮೆಮು (MEMU) ಅಥವಾ ಕನೆಕ್ಟಿವಿಟಿ ರೈಲುಗಳನ್ನು ಓಡಿಸಲು ನೆರವಾಗುತ್ತದೆ.

ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ಮತ್ತು ಸುರತ್ಕಲ್ ರೈಲು ನಿಲ್ದಾಣಗಳು ಇನ್ನು ಮುಂದೆ ನೈಋತ್ಯ ರೈಲ್ವೆಯ ಕೋಟ್ಯಂತರ ರೂಪಾಯಿ ಅನುದಾನದಡಿ ಆಧುನೀಕರಣಗೊಳ್ಳಲಿವೆ. ಪ್ಲಾಟ್‌ಫಾರ್ಮ್‌ಗಳ ವಿಸ್ತರಣೆ ಮತ್ತು ಪ್ರಯಾಣಿಕರ ಸೌಲಭ್ಯಗಳು ವೇಗವಾಗಿ ನಡೆಯಲಿವೆ. ಕರ್ನಾಟಕದ ಒಳನಾಡಿಗೆ (ಹಾಸನ, ಮೈಸೂರು, ಬೆಂಗಳೂರು, ಚಿತ್ರದುರ್ಗ) ಕಚ್ಚಾ ವಸ್ತುಗಳು ಮತ್ತು ಸರಕುಗಳನ್ನು ಸಾಗಿಸುವುದು ಸುಲಭವಾಗುತ್ತದೆ. ಇದರಿಂದ ರಾಜ್ಯದ ಕೈಗಾರಿಕಾ ವಲಯಕ್ಕೆ ಭಾರಿ ಲಾಭವಾಗಲಿದೆ. ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿ, ಕೊಲ್ಲೂರು ಹಾಗೂ ಕರಾವಳಿಯ ಬೀಚ್‌ಗಳಿಗೆ ಬೆಂಗಳೂರು ಮತ್ತು ಮೈಸೂರಿನಿಂದ ಬರುವ ಪ್ರವಾಸಿಗರಿಗೆ ಅತ್ಯುತ್ತಮ ರೈಲು ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ.

 

indian railways southern railway 2

ಕೊಂಕಣ ರೈಲ್ವೆ ವಿಲೀನವಾಗುತ್ತಾ?
1998ರಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಿದ ಕೊಂಕಣ ರೈಲ್ವೆ ಕಾರ್ಪೊರೇಶನ್ (KRCL) ಮಹಾರಾಷ್ಟ್ರದ ರೋಹಾದಿಂದ ಮಂಗಳೂರಿನ ತೋಕೂರುವರೆಗೆ 756 ಕಿ.ಮೀ. ಮಾರ್ಗ ಹೊಂದಿದೆ. ಇದರಲ್ಲಿ ಕರ್ನಾಟಕದಲ್ಲಿ 251 ಕಿ.ಮೀ ಉದ್ದ ಹಳಿಯಿದೆ. ಪ್ರಸ್ತುತ ಸ್ವತಂತ್ರ ನಿಗಮವಾಗಿರುವ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ, ಕರ್ನಾಟಕದ ಪಾಲನ್ನು ನೈಋತ್ಯ ರೈಲ್ವೆಗೆ ಸೇರಿಸಬೇಕೆಂಬ ಕೂಗು ಬಲಗೊಳ್ಳುತ್ತಿದ್ದು, ಇದರಿಂದ ರಾಜ್ಯದ ಸಮಗ್ರ ರೈಲು ಜಾಲಕ್ಕೆ ಮತ್ತಷ್ಟು ಶಕ್ತಿ ಸಿಗಲಿದೆ.

ಹೊಸ ಗಡಿ ನಿರ್ಧಾರ
ಇದುವರೆಗೆ ದಕ್ಷಿಣ ರೈಲ್ವೆಯ ಪಾಲಕ್ಕಾಡ್‌ ವಿಭಾಗ ಮತ್ತು ಕೊಂಕಣ ರೈಲ್ವೆಯ ಗಡಿಯಾಗಿದ್ದ ತೋಕೂರು ನಿಲ್ದಾಣ ಇನ್ನು ನೈಋುತ್ಯ ರೈಲ್ವೆಯ ಮೈಸೂರು ವಿಭಾಗ ಮತ್ತು ಕೊಂಕಣ ರೈಲ್ವೆಯ ಗಡಿಯಾಗಲಿದೆ. ಕೊಂಕಣ ರೈಲ್ವೆ ಜಾಲ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆ ಪೂರ್ತಿಯಾಗಿ ನೈಋುತ್ಯ ರೈಲ್ವೆ ವಲಯಕ್ಕೆ ಬಂದಂತಾಗಿದೆ. ಉಳ್ಳಾಲವು ದಕ್ಷಿಣ ದಿಕ್ಕಿನಲ್ಲಿ ನೈಋುತ್ಯ ರೈಲ್ವೆ ಮತ್ತು ದಕ್ಷಿಣ ರೈಲ್ವೆಯ ಗಡಿಯಾಗಲಿದೆ.

ಒಂದೇ ನಗರ, ಮೂರು ವಲಯಗಳ ಗೊಂದಲ!
ಮಂಗಳೂರು ನಗರ ಮತ್ತು ಅದರ ಸುತ್ತಮುತ್ತಲಿನ ರೈಲ್ವೆ ಜಾಲವು ಮೂರು ಪ್ರತ್ಯೇಕ ವಲಯಗಳ ಅಡಿಯಲ್ಲಿ ಹರಿದು ಹಂಚಿಹೋಗುತ್ತಿದೆ. ಉಳ್ಳಾಲ, ಮಂಗಳೂರು ಸೆಂಟ್ರಲ್ ಹಾಗೂ ಮಂಗಳೂರು ಜಂಕ್ಷನ್ ನಿಲ್ದಾಣಗಳು ದಕ್ಷಿಣ ರೈಲ್ವೆಯ (ಪಾಲಕ್ಕಾಡ್ ವಿಭಾಗ) ಅಧೀನದಲ್ಲಿದ್ದರೆ, ಮಂಗಳೂರು-ಬೆಂಗಳೂರು ಮಾರ್ಗದ ಫರಂಗಿಪೇಟೆಯಿಂದ ಕುಕ್ಕೆ ಸುಬ್ರಹ್ಮಣ್ಯದವರೆಗಿನ ಮಾರ್ಗ ನೈಋತ್ಯ ರೈಲ್ವೆಗೆ (ಮೈಸೂರು ವಿಭಾಗ) ಸೇರಿತ್ತು. ಇನ್ನು ಸಮೀಪದ ತೋಕೂರು, ಸುರತ್ಕಲ್ ಮತ್ತು ಮೂಲ್ಕಿ ನಿಲ್ದಾಣಗಳು ಕೊಂಕಣ ರೈಲ್ವೆಯ ನಿಯಂತ್ರಣದಲ್ಲಿದ್ದವು. ಈ ತ್ರಿವಳಿ ಆಡಳಿತದಿಂದಾಗಿ ಮಂಗಳೂರಿನಿಂದ ಹರಿದುಬರುತ್ತಿದ್ದ ಭಾರಿ ಆದಾಯ ಮೂರು ಕಡೆಗೆ ಹಂಚಿಹೋಗುತ್ತಿದೆ.

I have sent a detailed letter to the Hon’ble Prime Minister of India, Shri Narendra Modi, seeking his urgent personal intervention to freeze and reconsider the Railway Board’s unilateral decision to transfer the Mangaluru area (up to Ullal) from the Palakkad Division of Southern… pic.twitter.com/LiLjN0a5Fz

— V D Satheesan (@vdsatheesan) August 24, 2026

ಕೇರಳದ ವಿರೋಧ ಯಾಕೆ?
ಮಂಗಳೂರು ಭಾಗ ಮತ್ತು ವಿಶೇಷವಾಗಿ ಪಾಣಂಬೂರಿನ ನವ ಮಂಗಳೂರು ಬಂದರು (NMPT) ಪಾಲಕ್ಕಾಡ್ ರೈಲ್ವೆ ವಿಭಾಗಕ್ಕೆ ಅತಿ ಹೆಚ್ಚು ಸರಕು ಸಾಗಣೆ ಆದಾಯ ತಂದುಕೊಡುವ ಪ್ರಮುಖ ಮೂಲ. ಈ ವಿಭಜನೆಯಿಂದಾಗಿ ಪಾಲಕ್ಕಾಡ್ ವಿಭಾಗಕ್ಕೆ ವಾರ್ಷಿಕ ಸುಮಾರು ₹500 ರಿಂದ ₹600 ಕೋಟಿ ರೂಪಾಯಿಗಳಷ್ಟು ಆದಾಯ ನಷ್ಟ ಉಂಟಾಗಬಹುದು ಎಂದು ಕೇರಳ ಆತಂಕ ವ್ಯಕ್ತಪಡಿಸಿದೆ. ಈ ಹಿಂದೆ ಸೇಲಂ ವಿಭಾಗವನ್ನು ಪ್ರತ್ಯೇಕಿಸಿದಾಗ ಪಾಲಕ್ಕಾಡ್ ವಿಭಾಗದ ವ್ಯಾಪ್ತಿ ಕುಗ್ಗಿತ್ತು. ಈಗ ಮಂಗಳೂರು ಕೂಡ ಕೈತಪ್ಪಿದರೆ, ಪಾಲಕ್ಕಾಡ್ ವಿಭಾಗದ ಆಡಳಿತಾತ್ಮಕ ಮತ್ತು ಆರ್ಥಿಕ ಪ್ರಾಮುಖ್ಯತೆ ತೀರಾ ಕಡಿಮೆಯಾಗುತ್ತದೆ ಎಂಬುದು ಕೇರಳದ ವಾದ.

ಮಂಗಳೂರು ಮೈಸೂರು ವಿಭಾಗದ ಪಾಲಾದರೆ, ಕೇರಳದ ಮಲಬಾರ್ ಪ್ರದೇಶಕ್ಕೆ ಬರುವ ಹೊಸ ರೈಲುಗಳ ಸಮಯ ನಿಗದಿ ಹಾಗೂ ಹೊಸ ರೈಲು ಸೇವೆಗಳ ಯೋಜನೆಗಳ ಮೇಲಿನ ನಿಯಂತ್ರಣ ತಪ್ಪುತ್ತದೆ, ಇದರಿಂದ ಕೇರಳದ ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಅಲ್ಲಿನ ನಾಯಕರು ದೂರಿದ್ದಾರೆ. ಇದು ಕೇರಳದ ಹಿತಾಸಕ್ತಿಗಳನ್ನು ಕಡೆಗಣಿಸಿ ಕೇಂದ್ರ ಸರ್ಕಾರ ಕೈಗೊಂಡಿರುವ ಏಕಪಕ್ಷೀಯ ನಿರ್ಧಾರ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮತ್ತು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದು, ಈ ಆದೇಶವನ್ನು ತಡೆಹಿಡಿಯುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಸವಾಲಿನ ನವೀಕರಣ
ಬೆಂಗಳೂರು-ಮಂಗಳೂರು ರೈಲು ಮಾರ್ಗದ ನವೀಕರಣವು ಕರ್ನಾಟಕದ ರೈಲ್ವೆ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮಹತ್ವದ ಮೂಲಸೌಕರ್ಯ ಕ್ರಾಂತಿಯಾಗಿದೆ. ಈ ಮಾರ್ಗವು ಪಶ್ಚಿಮ ಘಟ್ಟಗಳ ಅತ್ಯಂತ ಕಠಿಣ ಭೂಪ್ರದೇಶದ ಮೂಲಕ ಹಾದುಹೋಗುವುದರಿಂದ, ಇದರ ನವೀಕರಣವು ತಾಂತ್ರಿಕವಾಗಿ ಅತ್ಯಂತ ಸವಾಲಿನದ್ದಾಗಿತ್ತು. ಈ ಮಾರ್ಗದ ಅತ್ಯಂತ ಪ್ರಮುಖ ನವೀಕರಣವೆಂದರೆ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ 55 ಕಿಲೋಮೀಟರ್ ಉದ್ದದ ಕಠಿಣ ಘಾಟಿ ಪ್ರದೇಶದ ವಿದ್ಯುದ್ದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಘಾಟಿ ಸೆಕ್ಷನ್ 57 ಸುರಂಗಗಳು (Tunnels), 258 ದೊಡ್ಡ ಸೇತುವೆಗಳು ಮತ್ತು ಅತ್ಯಂತ ಕಡಿದಾದ ತಿರುವುಗಳನ್ನು ಹೊಂದಿದ್ದು ವಿದ್ಯುದ್ದೀಕರಣದಿಂದಾಗಿ ಈಗ ಇಡೀ ಬೆಂಗಳೂರು-ಮಂಗಳೂರು ರೈಲು ಮಾರ್ಗವು 100% ಸಂಪೂರ್ಣ ವಿದ್ಯುದ್ದೀಕರಣಗೊಂಡಿದೆ. ಇದರಿಂದ ರೈಲುಗಳ ವೇಗ ಹೆಚ್ಚಲಿದ್ದು, ಪರಿಸರ ಮಾಲಿನ್ಯ ಮುಕ್ತ ಮತ್ತು ಇಂಧನ ದಕ್ಷತೆಯ ಸಂಚಾರ ಸಾಧ್ಯವಾಗಲಿದೆ.

ಘಾಟಿ ಪ್ರದೇಶದ ವಿದ್ಯುದ್ದೀಕರಣ ಮತ್ತು ತಾಂತ್ರಿಕ ನವೀಕರಣ ಪ್ರಕ್ರಿಯೆಗಳು ಪೂರ್ಣಗೊಂಡಿರುವುದರಿಂದ, ಕರಾವಳಿ ಜನರ ಬಹುದಿನಗಳ ಕನಸಾದ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat) ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಸಜ್ಜಾಗಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇತ್ತೀಚೆಗೆ ಮಹತ್ವದ ಘೋಷಣೆ ಮಾಡಿದ್ದು, ಭವಿಷ್ಯದ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಮತ್ತು ಮಂಗಳೂರು ನಡುವೆ ನಾಲ್ಕು ಪಥದ (Quadruple Rail Corridor) ರೈಲು ಮಾರ್ಗವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಪರಿಗಣಿಸಲಾಗುತ್ತಿದೆ. ಇದು ಜಾರಿಯಾದರೆ ಕರಾವಳಿ ಮತ್ತು ಒಳನಾಡಿನ ನಡುವಿನ ಪ್ರಯಾಣದ ಸಮಯ ಅರ್ಧಕ್ಕರ್ಧ ಕಡಿಮೆಯಾಗಲಿದೆ. ಈ ಎಲ್ಲಾ ನವೀಕರಣಗಳಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 6 ರಿಂದ 7 ಗಂಟೆಗಳಲ್ಲಿ ತಲುಪುವಂತಾಗಲಿದ್ದು, ಸರಕು ಸಾಗಣೆ ಸಾಮರ್ಥ್ಯ ಕೂಡ ದುಪ್ಪಟ್ಟಾಗಲಿದೆ.

ಒಟ್ಟಾರೆಯಾಗಿ, ಮಂಗಳೂರು ರೈಲ್ವೆ ಜಾಲವು ನೈಋತ್ಯ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಂಡಿರುವುದು ಕೇವಲ ಆಡಳಿತಾತ್ಮಕ ಬದಲಾವಣೆಯಷ್ಟೇ ಅಲ್ಲ; ಶತಮಾನದ ಪರಕೀಯತೆಯಿಂದ ಮುಕ್ತಿ ಪಡೆದ ಕರಾವಳಿ ಕನ್ನಡಿಗರ ಸ್ವಾಭಿಮಾನದ ಗೆಲುವು. ಈ ನಿರ್ಧಾರದಿಂದ ಕರಾವಳಿಯ ರೈಲ್ವೆ ಆದಾಯ ರಾಜ್ಯದ ಖಜಾನೆಗೇ ಉಳಿಯಲಿದ್ದು, ಮಂಗಳೂರು-ಬೆಂಗಳೂರು ನಡುವಿನ ಮೂಲಸೌಕರ್ಯ, ಹೊಸ ರೈಲುಗಳ ಬೇಡಿಕೆ ಹಾಗೂ ಸ್ಥಳೀಯ ಉದ್ಯೋಗಾವಕಾಶಗಳಿಗೆ ಹೊಸ ವೇಗ ಸಿಗಲಿದೆ. ಮುಂದಿನ ದಿನಗಳಲ್ಲಿ ಕೊಂಕಣ ರೈಲ್ವೆಯ ವಿಲೀನವೂ ಸಾಕಾರಗೊಂಡರೆ, ಕರ್ನಾಟಕದ ರೈಲ್ವೆ ನಕ್ಷೆ ಸಂಪೂರ್ಣವಾಗಿ ಸ್ವಾವಲಂಬನೆ ಕಾಣುವುದರಲ್ಲಿ ಸಂಶಯವಿಲ್ಲ.

Share This Article
Facebook Whatsapp Whatsapp Telegram Copy Link
Cinema News
Pavana Chikkanna
Photo Gallery | ಚಿಕ್ಕಣ್ಣ ಮದುವೆ ಸಡಗರ – ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ
Chikkanna pavana Haldi Ceremony
ನಟ ಚಿಕ್ಕಣ್ಣ ಮದುವೆ ಸಂಭ್ರಮ – ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ
Chikkanna Lakshmiputra Movie
ಮದುವೆಗೂ ಮುನ್ನ ಗುಡ್ ನ್ಯೂಸ್ ಕೊಟ್ಟ ನಟ ಚಿಕ್ಕಣ್ಣ
Lockdown 21 days
ಲಾಕ್‌ಡೌನ್‌ ಹಿನ್ನೆಲೆಯ ಭಾವನಾತ್ಮಕ ಚಿತ್ರಕ್ಕೆ ಮುಹೂರ್ತ

You Might Also Like

horoscope 111

ದಿನ ಭವಿಷ್ಯ 28-08-2026

15 hours ago
WEATHER 1 e1679398614299 11

ರಾಜ್ಯದ ಹವಾಮಾನ ವರದಿ 28-08-2026

16 hours ago
S 400

ಆಪರೇಷನ್‌ ಸಿಂಧೂರ ವೇಳೆ S-400 ಹುಡುಕಲು ಪಾಕ್‌ ಸ್ಪೈ ನೆಟ್‌ವರ್ಕ್, ಸ್ಲೀಪರ್ ಸೆಲ್‌ ಬಳಕೆ: ಜೀತೇಂದ್ರ ಮಿಶ್ರಾ

8 hours ago
Onion Ginger Garlic Sugar Jaggery

ಹಬ್ಬಗಳ ಹೊಸ್ತಿಲಲ್ಲೇ ದರ ಏರಿಕೆ ಬಿಸಿ – ಶುಂಠಿ, ಈರುಳ್ಳಿ, ಬೆಳ್ಳುಳ್ಳಿ ಬೆಲೆ ಗಗನಮುಖಿ

8 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
© Public TV. Design Company Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact