ಭುವನೇಶ್ವರ: 5 ಕೋಟಿ ರೂ. ಅಕ್ರಮ ಆಸ್ತಿ ಆರೋಪದ ಮೇಲೆ ನಿವೃತ್ತ ಪ್ರಾಂಶುಪಾಲರನ್ನು ಬಂಧಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
ವಿಜಿಲೆನ್ಸ್ ನಿರ್ದೇಶನಾಲಯವು ನಿವೃತ್ತ ಪ್ರಾಂಶುಪಾಲ ರಮೇಶ್ ಚಂದ್ರ ಸಾಹೂ ಅವರ ಮನೆ ಮೇಲೆ ದಾಳಿ ಮಾಡಿದ್ದು, ಈ ವೇಳೆ ರಮೇಶ್ ತಮ್ಮ ಆದಾಯದ ಮೂಲಗಳಿಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂದು ಪತ್ತೆ ಮಾಡಿದೆ. ಈ ಹಿನ್ನೆಲೆ ರಮೇಶ್ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: 40 ಸಾವಿರ ಮೌಲ್ಯದ ಸರ್ಕಾರಿ ಶಾಲೆಯ ಪ್ರೊಜೆಕ್ಟರ್ ಕದ್ದರು!
Advertisement
Advertisement
ಏನಿದು ಪ್ರಕರಣ?
ಒಡಿಶಾದ ಕಲಹಂಡಿ ಜಿಲ್ಲೆ ನಿವಾಸಿ ರಮೇಶ್ ಅವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಅಧಿಕೃತ ಮಾಹಿತಿ ಮೇರೆಗೆ ವಿಜಿಲೆನ್ಸ್ ನಿರ್ದೇಶನಾಲಯ ದಾಳಿ ಮಾಡಿದೆ. ದಾಳಿ ವೇಳೆ ರಮೇಶ್ ಅವರಿಗೆ ಸಂಬಂಧಪಟ್ಟ ಐದು ಸ್ಥಳಗಳಲ್ಲಿ ಆಸ್ತಿಗಾಗಿ ಶೋಧ ಕಾರ್ಯವನ್ನು ಅಧಿಕಾರಿಗಳು ಮಾಡಿದ್ದಾರೆ. ಈ ವೇಳೆ ರಮೇಶ್ ಅವರ ಬಳಿ ಅಕ್ರಮ ಆಸ್ತಿ ಇರುವುದು ಸಾಬೀತಾಗಿದೆ.
Advertisement
ರಮೇಶ್ ಅವರು ಈ ಹಿಂದೆ ಬಿಸ್ವನಾಥಪುರದ ಹಿರಾ ನಿಲಾ ಕಾಲೇಜಿನ ಮಾಜಿ ಪ್ರಾಂಶುಪಾಲರಾಗಿದ್ದರು ಎಂದು ವಿಜಿಲೆನ್ಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಒಂದೇ ಅಂತಸ್ತಿನ ಕಟ್ಟಡ, ಭುವನೇಶ್ವರದಲ್ಲಿ ಮನೆ, ಫ್ಲಾಟ್ ಮತ್ತು 1.94 ಲಕ್ಷ ನಗದು ಸೇರಿದಂತೆ 5 ಕೋಟಿಗೂ ಹೆಚ್ಚು ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳು ಪತ್ತೆಯಾಗಿವೆ. ಆಸ್ತಿ ಪತ್ರಗಳಿಲ್ಲದೆ ಇನ್ನು ಹೆಚ್ಚು ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Advertisement
ರಮೇಶ್ ಅವರ ವಿರುದ್ಧ ಭ್ರಷ್ಟಾಚಾರ ತಡೆ(ತಿದ್ದುಪಡಿ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ವಿಜಿಲೆನ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್