Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವೀಡಿಯೋದಲ್ಲಿ ನಮ್ಮ ಕುಟುಂದವರೇ ಇದ್ದರೂ ರಕ್ಷಣೆ ಮಾಡಲ್ಲ: ಹೆಚ್‍ಡಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ವೀಡಿಯೋದಲ್ಲಿ ನಮ್ಮ ಕುಟುಂದವರೇ ಇದ್ದರೂ ರಕ್ಷಣೆ ಮಾಡಲ್ಲ: ಹೆಚ್‍ಡಿಕೆ

Bengaluru City

ವೀಡಿಯೋದಲ್ಲಿ ನಮ್ಮ ಕುಟುಂದವರೇ ಇದ್ದರೂ ರಕ್ಷಣೆ ಮಾಡಲ್ಲ: ಹೆಚ್‍ಡಿಕೆ

Public TV
Last updated: May 7, 2024 12:49 pm
Public TV
Share
5 Min Read
HD KUMARASWAMY 1
SHARE

– ಸಿಎಂ, ಡಿಕೆಶಿ ವಿರುದ್ಧ ಮಾಜಿ ಸಿಎಂ ಕಿಡಿ
– ಹೆಣ್ಣು ಮಕ್ಕಳ ರಕ್ಷಣೆ ಸರ್ಕಾರಕ್ಕೆ ಬೇಕಿಲ್ಲ
– ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ
– ರೇವಣ್ಣ ವಿರುದ್ಧ ಕಿಡ್ನಾಪ್ ಕೇಸ್ ಸೃಷ್ಟಿ

ಬೆಂಗಳೂರು: ವೈರಲ್ ಆಗಿರುವ ವೀಡಿಯೋದಲ್ಲಿ ಯಾರೇ ಇದ್ರೂ ಕ್ರಮ. ನಮ್ಮ ಕುಟುಂಬದವರು ಇದ್ದರೂ ರಕ್ಷಣೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

ನಗರದಲ್ಲಿ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇತ್ತೀಚೆಗೆ ಅತ್ಯಂತ ಕೆಟ್ಟ ರೀತಿಯ ಬೆಳವಣಿಗೆ ನಡೆದಿದೆ. ಸಮಾಜದಲ್ಲಿ ಉತ್ತಮ ಬದುಕು ಕಾಣಬೇಕು. ಅಂತಹ ಬದುಕಿಗೆ ಯಾವ ರೀತಿ ಧಕ್ಕೆ ಉಂಟಾಗಿದೆ. ಇದು ನೋವಿನ ಸಂಗತಿಯಾಗಿದೆ. ಏ.21 ರಂದು ಪೆನ್‍ಡ್ರೈವ್ ಅನ್ನು ಇಡೀ ರಾಜ್ಯಾದ್ಯಂತ ಬಿಡುಗಡೆ ಮಾಡಿದ್ರು. ಪೊಲೀಸ್ ಅಧಿಕಾರಿಗಳನ್ನ ಇಟ್ಟು ಹಂಚಿದ್ದಾರೆ. ಮಂಡ್ಯ, ಬೆಂಗಳೂರು ಗ್ರಾಮಾಂತರದಲ್ಲಿ ಸೇರಿ ಹಲವು ಕಡೆ ಮಾಡಿದ್ದಾರೆ ಎಂದು ದೂರಿದರು.

ಪೂರ್ಣ ಚಂದ್ರ ಅಂತ ಪ್ರಜ್ವಲ್ ಏಜೆಂಟ್ ಇದ್ದರು. ಅವರು ಈ ಸಂಬಂಧ ಏಪ್ರಿಲ್ 22 ರಂದು ಹಾಸನ ಡಿಸಿಗೆ ದೂರು ಕೊಟ್ರು. ಚುನಾವಣೆ ಅಧಿಕಾರಿಗಳೂ ದೂರು ಕೊಟ್ಟಿದ್ದಾರೆ. 21 ರಂದು ರಾತ್ರಿ ಪ್ರಜ್ವಲ್ ವಿಡಿಯೋ ಬಿಡುಗಡೆ ಕ್ಷಣಗಣನೆ ಅಂತ ಲಿಂಕ್ ಕೊಟ್ಟಿದ್ದಾರೆ. ವೀಡಿಯೋದಲ್ಲಿ ಯಾರೇ ಇದ್ದರೂ ರಕ್ಷಣೆ ಕೊಡಲ್ಲ. ನಮ್ಮ ಕುಟುಂಬದವರೇ ಆದರು ರಕ್ಷಣೆ ಮಾಡಲ್ಲ ಎಂದು ಹೆಚ್‍ಡಿಕೆ ಖಡಕ್ ಆಗಿ ತಿಳಿಸಿದ್ದಾರೆ.

SIDDARAMAIAH DKSHI

ನೆಲದ ಕಾನೂನು ಪ್ರಕಾರ ಶಿಕ್ಷೆ ಆಗಲಿ. ನಮ್ಮ ನಾಡಿನ ತಾಯಂದಿರ ಮುಂದೆ ಹೇಳ್ತೀನಿ. ಯಾವ ವ್ಯಕ್ತಿಯನ್ನೂ ನಾನು ರಕ್ಷಣೆ ಮಾಡಲ್ಲ. ವೀಡಿಯೋ ಬಿಡುಗಡೆ ಮಾಡ್ತೀನಿ ಅಂತ ನವೀನ್ ಗೌಡ ರಾತ್ರಿ 8ಕ್ಕೆ ಹೇಳಿದ್ದಾನೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಎಫ್‍ಐಆರ್ ದಾಖಲಾಗಿದೆ. ನವೀನ್, ಕಾರ್ತಿಕ್, ಚೇತನ್, ಪುಟ್ಟರಾಜು ಮೇಲೆ ದೂರು ಕೊಟ್ಟರು. ಎಫ್‌ಐಆರ್‌ ಹಾಕಿದ್ರೂ ಈ  ಕ್ಷಣದವರೆಗೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಏ. 24ರಂದು ಚುನಾವಣಾ ಆಯೋಗದವರು ಹಿಂಬರಹವನ್ನು ಕೊಟ್ಟಿದ್ದಾರೆ. ಏಜೆಂಟ್ ದೂರು ಕೊಟ್ಟ ಮೇಲೆ ಸರ್ಕಾರದ ಗಮನಕ್ಕೆ ಹೋಯ್ತು. ಇದಾದ ಮೇಲೆ ಹಾಸನದಲ್ಲಿ 25 ಸಾವಿರಕ್ಕೂ ಹೆಚ್ಚು ಪೆನ್ ಡ್ರೈವ್ ಹಂಚಿಕೆಯಾಗಿದೆ. ಪ್ರಜ್ವಲ್ ಏಜೆಂಟ್ ದೂರು ಕೊಟ್ಟ ಮೇಲೆ ಯಾವುದೇ ಕ್ರಮ ಆಗಿಲ್ಲ. ಇಂತಹ ದೊಡ್ಡ ಪ್ರಕರಣದ ಬಗ್ಗೆ ಈ ಕ್ಷಣದವರೆಗೆ 5 ಜನ ಮೇಲೆ ಆಕ್ಷನ್ ತಗೊಂಡಿಲ್ಲ. ಸಣ್ಣ ಪುಟ್ಟ ಕೇಸ್ ಗೆ ದೊಡ್ಡ ವಿಷಯ ಮಾಡೋರು ಈ ಕೇಸ್ ನಲ್ಲಿ ಕ್ರಮ ಮಾಡಿಲ್ಲ. ಪೆನ್ ಡ್ರೈವ್ ನಲ್ಲಿ ಯಾರ್ ಯಾರ್ ಪಾತ್ರ ಇದೆ. ಸತ್ಯ ಹೊರಗೆ ಬರಬೇಕು ಎಂದು ಹೆಚ್‍ಡಿಕೆ ಕಿಡಿಕಾರಿದರು.

h.d.revanna prajwal revanna

ಪದೇ ಪದೇ ನನ್ನ ಬಗ್ಗೆ ಸಿಎಂ ಮಾತಾಡಿದ್ರು. ಡಿ.ಕೆ ಶಿವಕುಮಾರ್ ಏಕವಚನದಲ್ಲಿ ನನ್ನ ಬಗ್ಗೆ ಮಾತಾಡಿದ್ರು. ಮಹಿಳೆಯರು ಹೋರಾಟ ಮಾಡಿ ಅಂತ ಕರೆ ಕೊಟ್ರು. ಇದೆಲ್ಲ ಆದ ಮೇಲೆ ಏ.26 ಚುನಾವಣೆ ಅಗೋವರೆಗೆ ನಮ್ಮ ಏಜೆಂಟ್ ಕೊಟ್ಟ ದೂರಿನ ಮೇಲೆ ಯಾವುದೇ ಕ್ರಮ ಆಗಿಲ್ಲ. ಏ.25 ರಂದು ಮಹಿಳಾ ಆಯೋಗದ ಅಧ್ಯಕ್ಷೆ ವಿಶೇಷ ತಂಡ ರಚನೆ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ ಎಂದರು.

ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಪೆನ್ ಡ್ರೈವ್ ಬಿಡುಗಡೆ ಮಾಡಿದವರ ಮೇಲೆ ಕ್ರಮ ಆಗಬೇಕು ಅಂತ ಪತ್ರ ಬರೆದರು. ಈ ಪತ್ರದಲ್ಲಿ ರೇವಣ್ಣ (HD Revanna), ಪ್ರಜ್ವಲ್ ರೇವಣ್ಣ (Prajwal Revanna) ಹೆಸರು ಇಲ್ಲ. ಆದರೂ ಸಿಎಂ, ಪ್ರಜ್ವಲ್ ರೇವಣ್ಣ ಅಂತ ಟ್ವೀಟ್ ಮಾಡ್ತಾರೆ. ಏ.27 ರಂದು ಸಿಎಂ ಎಸ್‍ಐಟಿ ರಚನೆ ಮಾಡಿದ್ರು.

28 ರಂದು ಬೆಂಗಳೂರಿನಲ್ಲಿ ಕುಳಿತುಕೊಂಡು ಡಿಜಿಟಲ್ ಮೂಲಕ ಇಲ್ಲಿ ಟೈಪ್ ಮಾಡಿ ಎರಡು ಹೆಣ್ಣು ಮಕ್ಕಳ ಹೆಸರಲ್ಲಿ ಹೊಳೆನರಸೀಪುರ ಸ್ಟೇಷನ್ ಗೆ ಕಳಿಸಿದ್ರು. ಎಸ್‍ಐಟಿ ಕೊಟ್ಟಾಗ ಪಾರದರ್ಶಕವಾಗಿ ನಡೆಯುತ್ತೆ ಅಂತಾ. ಆದರೆ ಆಮೇಲೆ ಗೊತ್ತಾಯ್ತು. ಎಸ್‍ಐಟಿ (SIT) ಅಂದ್ರೆ ಸಿದ್ದರಾಮಯ್ಯ ಇನ್ವೆಸ್ಟಿಕೇಷನ್ ಟೀಂ ಹಾಗೂ ಡಿಕೆಶಿವಕುಮಾರ್ ಇನ್ವೆಸ್ಟಿಂಗ್ ಟೀಂ ಆಗಿದೆ. ಇದು ನಿಜವಾದ ಎಸ್‍ಐಟಿ ಎಂದು ಹೆಚ್‍ಡಿಕೆ ಕಿಡಿಕಾರಿದರು.

PRAJWAL REVANNA

ಸರ್ಕಾರಕ್ಕೆ ಹೆಣ್ಣು ಮಕ್ಕಳ ರಕ್ಷಣೆ ಬೇಕಾಗಿಲ್ಲ: ಪ್ರತಿನಿತ್ಯ ಇವರು ಮಾತುಕತೆ ಮಾಡಿದ್ದಾರೆ. ಇವರು ಮಾತಾಡ್ತಿರೋ ಕಾಲ್ ರೆಕಾರ್ಡ್ ಎಲ್ಲಾ ಹೊರ ಬರಬೇಕು. ಈಗಲೂ ಹೇಳ್ತೀನಿ ಪ್ರಜ್ವಲ್ ವಿಷಯಕ್ಕೆ ಅಡಚಣೆ ಮಾಡಲ್ಲ. ಪ್ರಜ್ವಲ್ ನನ್ನ ನಾನು ವಹಿಸಿಕೊಳ್ಳಲ್ಲ. ಈ ಬಗ್ಗೆ ತನಿಖೆ ಆಗಲಿ. ಆದರೆ ತನಿಖೆ ಹೇಗೆ ಹೋಗ್ತಿದೆ ಅಂದರೆ ಏ.28ಕ್ಕೆ ಹೊಳೆನರಸೀಪುರದಲ್ಲಿ ಕೇಸ್ ಆಗುತ್ತೆ. ಅಲ್ಲಿ ಬೇಲ್ ಆಗೋ ಸೆಕ್ಷನ್ ಹಾಕಿದ್ದಾರೆ. ಬೇಲ್ ಸೆಕ್ಷನ್ ಅಂತ ಬಂತು ಆಗ ಇನ್ನೊಂದು ದೂರು ಮಾಡಿಸಿದ್ರಿ. ಜಿಲ್ಲಾ ಪಂಚಾಯ್ತಿ ಸದಸ್ಯೆಗೆ ಗನ್ ಪಾಯಿಂಟ್ ಇಟ್ಟು ಬೆದರಿಕೆ ಅಂತ ದೂರು ಕೊಟ್ರಿ. ಈ ವಿಷಯಗಳು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದು ಯಾರು?. ತನಿಖೆ ವೇಳೆ ಮಾಹಿತಿ ಸೋರಿಕೆ ಆಗಬಾರದು. ಈ ಸರ್ಕಾರಕ್ಕೆ ಬೇಕಿರೋದು ಹೆಣ್ಣುಮಕ್ಕಳ ರಕ್ಷಣೆ ಅಲ್ಲ. ಯಾರನ್ನು ತೇಜೋವಧೆ ಮಾಡೋಕೆ ಇದು ಬಳಸಿಕೊಂಡಿದ್ದಾರೆ ಎಂದು ಗರಂ ಆದರು.

ಮೇ.2 ರಂದು ದೂರು ಹಾಕಿದ್ರಿ. ದೂರು ಕೊಟ್ಟ ಹೆಣ್ಣು ಮಗಳು ಏ. 28 ಕ್ಕೆ ಬೇಲೂರಿನಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಆರೋಪ ಪ್ರಜ್ವಲ್ ಪಕ್ಕದಲ್ಲಿ ಇರೋ ಹೆಣ್ಣು ಮಗಳು ಯಾರು? ಮೊದಲ ಪೆನ್ ಡ್ರೈವ್ ನಲ್ಲಿ ಬಿಡುಗಡೆಯಾದ ಮಹಿಳೆ 21ಕ್ಕೆ ಪ್ರಜ್ವಲ್ ಜೊತೆ ಪ್ರಚಾರ ಮಾಡಿದ್ರು. 22ಕ್ಕೆ ಅವಳ ವೀಡಿಯೋ ಲಿರೀಸ್ ಮಾಡಿದ್ರಿ. ಈಗ ಗನ್ ಪಾಯಿಂಟ್ ಅಂತ ಇನ್ನೊಂದು ದೂರು. ಇದು ನಿಮ್ಮ ದೂರು. ಡಿಕೆ ಶಿವಕುಮಾರ್ ಅವರೇ, ಸಿಎಂ ಅವರೇ ಇದು ನಿಮ್ಮ ತನಿಖೆ ಎಂದು ಹೆಚ್‍ಡಿಕೆ ವಾಗ್ದಾಳಿ ನಡೆಸಿದರು.

ಯಾರು ರೇವಣ್ಣ ಮೇಲೆ ನೇರವಾಗಿ ದೂರು ಕೊಟ್ಟಿಲ್ಲ. ಅಮೇಲೆ ಕಿಡ್ನಾಪ್ ಅಂತ ಸೃಷ್ಟಿ ಮಾಡಿದ್ರು. ಕಿಡ್ನಾಪ್ ಆದ ಹೆಣ್ಣುಮಗಳನ್ನ ಎಲ್ಲಿಂದ ಕರೆದುಕೊಂಡು ಬಂದ್ರಿ. ತೋಟದ ಮನೆ ಅಂತಾರೆ. ತೋಟದ ಮನೆ ಮಹಜರ್ ಮಾಡಿದ್ರಾ?. ಆಕೆ ಹೇಳಿಕೆ ಕೊಡಲಿಲ್ಲವಾ..?, ನ್ಯಾಯಾಧೀಶರ ಮುಂದೆ ಆಕೆಯನ್ನ ಯಾಕೆ ಪ್ರೊಡ್ಯೂಸ್ ಮಾಡಿಲ್ಲ. ಯಾರನ್ನ ಕರೆದುಕೊಂಡು ಒತ್ತಡ ಹಾಕಿಸಿದ್ದೀರಾ ಎಂದು ಪ್ರಶ್ನಿಸಿದರು.

ಏ. 30ರಂದು ಕಾರ್ತಿಕ್ ಪ್ರೆಸ್ ಮುಂದೆ ಬರದೇ ವೀಡಿಯೋ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ರಿ. ಪೆನ್ ಡ್ರೈವ್ ಸೂತ್ರಧಾರಿ ಕಾರ್ತಿಕ್ ಗೌಡ. ಅವನು ಎಲ್ಲಿ ಇದ್ದಾನೆ ಅಂತ ಎಸ್‍ಐಟಿ ಹುಡುಕಿಲ್ಲ. ಸರ್ಕಾರಕ್ಕೆ ಕೇಳ್ತೀನಿ ಈ ಕೇಸ್ ರೇವಣ್ಣ, ಪ್ರಜ್ವಲ್ ಮೇಲೆ ಮಾತ್ರ ಮಾಡ್ತಿರೋದೋ ಅಥವಾ ಮಹಿಳಾ ಆಯೋಗ ಪತ್ರ ಬರೆದ ರಾಜಕಾರಣಿ ಮೇಲೋ ಅಥವಾ ಪೆನ್ ಡ್ರೈವ್ ಬಿಡುಗಡೆ ಮಾಡಿರೋರ ಮೇಲೆ ತನಿಖೆ ಆಗುತ್ತೋ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು. ಅಲ್ಲದೇ 21 ರಂದು ವಿಡಿಯೋ ಬಿಡುಗಡೆ ಮಾಡ್ತೀನಿ ಎಂದ ನವೀನ್ ಗೌಡ ಯಾಕೆ ಬಂಧನ ಮಾಡಿಲ್ಲ. 14 ದಿನ ಆಗಿದೆ. ಪೆನ್ ಡ್ರೈವ್ ಅನ್ನ ಬಿಡುಗಡೆ ಮಾಡಿದ್ದೇನೆ ಅಂತಾನೆ ಎಂದು ನವೀನ್ ಗೌಡ ಆಡಿಯೋವನ್ನು ಕುಮಾರಸ್ವಾಮಿ ರಿಲೀಸ್ ಮಾಡಿದರು.

TAGGED:bengaluruhd kumaraswamyPendrive Caseprajwal revannaಪೆನ್‌ಡ್ರೈವ್ ಕೇಸ್ಪ್ರಜ್ವಲ್ ರೇವಣ್ಣಬೆಂಗಳೂರುಹೆಚ್ ಡಿ ಕುಮಾರಸ್ವಾಮಿ
Share This Article
Facebook Whatsapp Whatsapp Telegram

Cinema news

Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood

You Might Also Like

Maha Shivratri Mantralayam
Districts

ಮಂತ್ರಾಲಯದಲ್ಲಿ ಶಿವರಾತ್ರಿ ಸಂಭ್ರಮ – ಸುಬುಧೇಂದ್ರ ತೀರ್ಥ ಶ್ರೀಗಳಿಂದ ಮಹಾರುದ್ರಾಭಿಷೇಕ

Public TV
By Public TV
16 minutes ago
Bangladesh Election Results 2
Latest

ಫೆ.17 ರಂದು ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣ ಸ್ವೀಕಾರ – ಮೋದಿಗೆ ಆಹ್ವಾನ

Public TV
By Public TV
37 minutes ago
five youths die in horrific road accident in bengaluru
Bengaluru Rural

ಬೆಂಗಳೂರು | ಡಿವೈಡರ್‌ ಹಾರಿ ಬಸ್‌ಗೆ ಡಿಕ್ಕಿಯಾದ ಕಾರು – ಐವರು ದುರ್ಮರಣ

Public TV
By Public TV
48 minutes ago
TAMBITTU 1
Food

ಶಿವನಿಗೆ ಪ್ರಿಯವಾದ ತಂಬಿಟ್ಟು ಹೀಗೆ ಮಾಡಿ!

Public TV
By Public TV
50 minutes ago
Karnataka Student Missing In California
Crime

ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ

Public TV
By Public TV
60 minutes ago
Ind vs Pak
Cricket

T20 World Cup 2026: ಇಂಡೋ-ಪಾಕ್‌ ಕದನ ಯಾವಾಗಲೂ ಏಕೆ ರಣಕಣ? – ನೆನಪಿದೆಯಾ ಆ ಕರಾಳ ದಿನಗಳು?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?