ಬೆಂಗಳೂರು: ಸರ್ಕಾರದ ಚಿತಾವಣೆಯಿಂದ ಬಿಡದಿ ಟೌನ್‌ಶಿಪ್‌ಗೆ (Bidadi Township) ಸರ್ವೆ ಕಾರ್ಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಆರೋಪ ಮಾಡಿದ್ದಾರೆ.
ಬಿಡದಿಯಲ್ಲಿ ರೈತರ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಿಂದ ಕುಮಾರಸ್ವಾಮಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ವಯನಾಡಿನಲ್ಲಿ ಭೂಕುಸಿತವಾದರೂ ಪ್ರಿಯಾಂಕಾ ಗಾಂಧಿ ಏಕೆ ಬರಲಿಲ್ಲ? – ಬಿಜೆಪಿ ಪ್ರಶ್ನೆ
500 ದಿನಗಳಿಂದ ಬಿಡದಿಯಲ್ಲಿ ರೈತರು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರು. ಏಕಾಏಕಿಯಾಗಿ ಅಧಿಕಾರಿಗಳು ಸರ್ವೆ ಮಾಡಲು ಬಂದಿದ್ದರು. ಈ ವೇಳೆ ಅಹಿತಕರ ಘಟನೆಗಳು ನಡೆದಿವೆ. ಇದಕ್ಕೆ ಸರ್ಕಾರದ ಚಿತಾವಣೆ ಕಾರಣ ಎಂದು ಆರೋಪಿಸಿದರು. ಇದನ್ನೂ ಓದಿ: ಬದರಿನಾಥ್ ದೇಣಿಗೆ ಕಳವು: ಪ್ರಮುಖ ಆರೋಪಿ ಡೆಹ್ರಾಡೂನ್‌ನಲ್ಲಿ ಅರೆಸ್ಟ್
ಕೆಟ್ಟ ಘಟನೆಗಳಿಗೆ ಅವಕಾಶ ಕೊಡಬೇಡಿ ಎಂದು ರೈತರಿಗೆ ಮನವಿ ಮಾಡುತ್ತೇನೆ. ಶಾಂತಿಯುತ ಹೋರಾಟ ಮುಂದುವರೆಸಿ. ಕಾನೂನು ಪರವಾಗಿ ನಿಮ್ಮ ಪರ ಹೋರಾಟ ಮಾಡೋಕೆ ಅನೇಕ ಜನ ನಿಮ್ಮ ಪರ ಇದ್ದಾರೆ. ನಿಮ್ಮ ಹೋರಾಟದಲ್ಲಿ ಸರ್ಕಾರದ ದೌರ್ಜನ್ಯ, ದುರ್ಬಳಕೆಗೆ ನಿಮ್ಮ ಹೋರಾಟದಲ್ಲಿ ವಿರೋಧ ಆಗಬಾರದು ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಶಿವಮೊಗ್ಗದ ಮುಪ್ಪಾನೆ – ಹಲ್ಕೆ ನಡುವಿನ ಲಾಂಚ್ ಸೇವೆ ಪುನಾರಂಭ
ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ಶಾಂತಿಯುತವಾಗಿ ಮಾಡುತ್ತಿರುವ ಹೋರಾಟಕ್ಕೆ ಸರ್ಕಾರ ತಮ್ಮನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಪೊಲೀಸರು ಸರ್ಕಾರದ ಸೂಚನೆಗೆ ಹೆದರಿ ರೈತ ವಿರೋಧಿ ನೀತಿ ಮಾಡಬೇಡಿ. ಒಂದು ವೇಳೆ ಹಾಗೆ ಮಾಡಿದ್ರೆ ಸರ್ಕಾರದ ಕೆಟ್ಟ ನಡವಳಿಯ ಪಾಲು ನಿಮಗೂ ಹಂಚಿಕೊಳ್ಳೋ ದಿನ ಬರುತ್ತದೆ. ಹೀಗಾಗಿ ಪೊಲೀಸರು ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ – ಸರ್ವೆಗೆ ಬಂದ ಅಧಿಕಾರಿಗಳಿಗೆ ಪೊರಕೆ ಏಟು!
