– ಕಾಂಗ್ರೆಸ್ ಪಕ್ಷವು ವಯನಾಡನ್ನ ರಾಜಕೀಯ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ
ನವದೆಹಲಿ: ವಯನಾಡಿನಲ್ಲಿ ನಡೆದ ಭೂಕುಸಿತ (Wayanad Landslide) ದುರಂತದ ಬಳಿಕ ಕಾಂಗ್ರೆಸ್ ( Congress) ಪಕ್ಷವು ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಇದುವರೆಗೆ ದುರಂತ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್ ಟೀಕಿಸಿದ್ದಾರೆ.
ಜುಲೈ 7ರಂದು ಕೇರಳದ ವಯನಾಡ್ ಜಿಲ್ಲೆಯ ಅನಕ್ಕಂಪೊಯಿಲ್-ಮೆಪ್ಪಾಡಿ ಅವಳಿ ಸುರಂಗ ಯೋಜನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಭೂಕುಸಿತ ಸಂಭವಿಸಿತ್ತು. ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಎಂಟಕ್ಕೆ ಏರಿದೆ. ರಕ್ಷಣಾ ತಂಡಗಳು ಕೊನೆಯ ವ್ಯಕ್ತಿಯ ಮೃತದೇಹವನ್ನು ಪತ್ತೆಹಚ್ಚಿದ ಬಳಿಕ ಶೋಧ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿವೆ.
ಈ ಬೆಳವಣಿಗೆಯ ನಡುವೆ ಎಕ್ಸ್ (X)ನಲ್ಲಿ ಪೋಸ್ಟ್ ಮಾಡಿರುವ ಸಿ.ಆರ್. ಕೇಶವನ್, ಪ್ರಿಯಾಂಕಾ ಗಾಂಧಿ ದುರಂತ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಮೃತಪಟ್ಟವರ ಕುಟುಂಬಗಳನ್ನು ಕೂಡ ಭೇಟಿಯಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿರುವುದನ್ನು ಬಿಟ್ಟರೆ, ಸಂತ್ರಸ್ತರ ಜೊತೆ ನಿಲ್ಲುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಬದರಿನಾಥ್ ದೇಣಿಗೆ ಕಳವು: ಪ್ರಮುಖ ಆರೋಪಿ ಡೆಹ್ರಾಡೂನ್‌ನಲ್ಲಿ ಅರೆಸ್ಟ್
ಸಂಸದರಾಗಿದ್ದ ಅವಧಿಯಲ್ಲೂ ರಾಹುಲ್ ಗಾಂಧಿ ಕ್ಷೇತ್ರಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಿರಲಿಲ್ಲ. ವಯನಾಡ್ ಕ್ಷೇತ್ರವು ಕಾಂಗ್ರೆಸ್‌ನ ಕುಟುಂಬಕ್ಕೆ ಕೇವಲ ರಾಜಕೀಯ ಕೈಗೊಂಬೆಯಾಗಿದೆ ಎಂದು ಟೀಕಿಸಿದ್ದಾರೆ.
ಲೋಕಸಭೆ ಚುನಾವಣೆಯ ಬಳಿಕ ರಾಹುಲ್ ಗಾಂಧಿ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಂಡು ವಯನಾಡ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದರ ಬಳಿಕ ಪ್ರಿಯಾಂಕಾ ಗಾಂಧಿ ವಯನಾಡ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ, ಸಂಕಷ್ಟದ ಸಮಯದಲ್ಲೂ ಅವರು ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಜಗಳದ ವೇಳೆ ಮೊಬೈಲ್‌ನಿಂದ ತಲೆಗೆ ಹೊಡೆದ ಪತ್ನಿ – ಚಿಕಿತ್ಸೆ ಬಳಿಕ ಮನೆಗೆ ಬಂದ ಪತಿ ಸಾವು
