ಮಡಿಕೇರಿ: ಜೆಡಿಎಸ್ (JDS) ಹಾಗೂ ಕಾಂಗ್ರೆಸ್‍ನವರು (Congress) ಯಾರಿಗೋ ಹುಟ್ಟಿದ ಮಗುವನ್ನು ನಮ್ಮದು ಎನ್ನುತ್ತಾರೆ ಎಂದು ಮಾಜಿ ಸಚಿವ ಈಶ್ವರಪ್ಪ (K.S.Eshwarappa) ವಾಗ್ದಾಳಿ ನಡೆಸಿದ್ದಾರೆ.
ಮಡಿಕೇರಿಯಲ್ಲಿ (Madikeri) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮೈಸೂರು ದಶಪಥ ರಸ್ತೆ ನಿರ್ಮಾಣಕ್ಕೆ ದೇವೇಗೌಡರು (H.D.Deve Gowda), ಸಿದ್ದರಾಮಯ್ಯ (Siddaramaiah) ಮತ್ತು ಮಹದೇವಪ್ಪನವರು ನಾವೇ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಇಬ್ಬರ ಜೊತೆ ಲಿವ್ ಇನ್ ರಿಲೇಶನ್‍ಶಿಪ್- ಮಕ್ಕಳು ಹುಟ್ಟಿದ ಬಳಿಕ ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ!
Advertisement
Advertisement
ಬೆಂಗಳೂರು (Bengaluru) -ಮೈಸೂರು (Mysuru) ದಶಪಥ ರಸ್ತೆ ನಿರ್ಮಾಣಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯ. ಆದರೂ ದಶಪಥ ರಸ್ತೆ ನಮ್ಮ ಕೊಡುಗೆ ಎನ್ನುವುದು ಒಳ್ಳೆಯದಲ್ಲ. ಎರಡು ಪಕ್ಷಗಳು ಈ ಯೋಜನೆಗೆ ಒಂದೇ ಒಂದು ರೂ. ಕೊಟ್ಟಿದ್ದರೆ ಅವರು ಹೇಳಿದ ಹಾಗೆ ಕೇಳುತ್ತೇನೆ ಎಂದಿದ್ದಾರೆ.
Advertisement
Advertisement
ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹಣ ಬಿಡುಗಡೆ ಮಾಡಿದ ಮೇಲೆ ಎರಡು ಪಕ್ಷದವರು ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಮೊದಲು ನಿಮ್ಮ ಕೂಸು ಯಾವುದು ಅದನ್ನು ಹುಡುಕಿಕೊಳ್ಳಲಿ. ಅದು ಬಿಟ್ಟು ಬೇರೆಯವರ ಕೂಸನ್ನು ನಮ್ಮದು ಎಂದು ಹೇಳುವುದು ಬೇಡ. ಇದು ನನ್ನ ಪ್ರಾರ್ಥನೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ದೇವರ ಹಣದಲ್ಲೂ ಕಮಿಷನ್ ಪಡೀತಿದ್ದಾರೆ: ಗೌರಿಶಂಕರ್ ವಿರುದ್ಧ ಸುರೇಶ್ ಗೌಡ ಆರೋಪ