ನಾವು ಈ ಹಿಂದೆ ಸುಲಭವಾಗಿ ಮಾಡಬಹುದಾದಂತಹ ಚಾಕ್ಲೇಟ್ ಮಗ್ ಕೇಕ್ ವಿಧಾನವನ್ನು ಹೇಳಿಕೊಟ್ಟಿದ್ದೆವು. ಇಂದು ನಾವು ಫಟಾಫಟ್ ಅಂತ ಮಾಡಬಹುದಾದ ಹಾಗೂ ಸುಲಭವಾಗಿ ತಯಾರಿಸಬಹುದಾಗ ಸಸ್ಯಾಹಾರಿ ಮಗ್ ಪಿಜ್ಜಾ (Mug Pizza) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಪಿಜ್ಜಾ (Pizza) ಪ್ರಿಯರು ಹೊರಗಡೆ ಹೋಗಲು ಅಸಾಧ್ಯವಾದ ಸಮಯದಲ್ಲಿ ಖಂಡಿತವಾಗಿಯೂ ಇದನ್ನು ಮನೆಯಲ್ಲಿ ಮಾಡಲೇ ಬೇಕು.
ಬೇಕಾಗುವ ಪದಾರ್ಥಗಳು:
ಮೈದಾ – ಕಾಲು ಕಪ್
ಬೇಕಿಂಗ್ ಪೌಡರ್ – ಚಿಟಿಕೆ
ಅಡುಗೆ ಸೋಡಾ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ – 1 ಟೀಸ್ಪೂನ್
Advertisement
Advertisement
ಹಾಲು – 3 ಟೀಸ್ಪೂನ್
ಪಿಜ್ಜಾ ಸಾಸ್ – 2 ಟೀಸ್ಪೂನ್
ಮೊಝರೆಲ್ಲ ಚೀಸ್ – 1 ಟೀಸ್ಪೂನ್
ಕತ್ತರಿಸಿದ ಆಲಿವ್ – 1-2
ಹೆಚ್ಚಿದ ಕ್ಯಾಪ್ಸಿಕಮ್ – 1 ಟೀಸ್ಪೂನ್
ಚಿಲ್ಲಿ ಫ್ಲೆಕ್ಸ್ – ಚಿಟಿಕೆ
ಓರೆಗಾನೊ – ಚಿಟಿಕೆ ಇದನ್ನೂ ಓದಿ: ಓವನ್ ಬೇಡ – ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿ ಚಾಕ್ಲೇಟ್ ಮಗ್ ಕೇಕ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮೈಕ್ರೊವೇವ್ ಸುರಕ್ಷಿತ ಕಾಫಿ ಮಗ್ ತೆಗೆದುಕೊಳ್ಳಿ.
* ಅದರಲ್ಲಿ ಮೈದಾ, ಬೇಕಿಂಗ್ ಪೌಡರ್, ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
* ಈಗ 1 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ, 3 ಟೀಸ್ಪೂನ್ ಹಾಲು ಸೇರಿಸಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಮಿಶ್ರಣದ ಮೇಲೆ ಪಿಜ್ಜಾ ಸಾಸ್ ಹಾಕಿ, ಒಂದೇ ರೂಪದಲ್ಲಿ ಹರಡಿ.
* ಈಗ ಅದರ ಮೇಲೆ ಮೊಝರೆಲ್ಲಾ ಚೀಸ್, ಆಲಿವ್ ಹಾಗೂ ಕ್ಯಾಪ್ಸಿಕಮ್ ಹಾಕಿ ಅಲಂಕರಿಸಿ.
* ಚಿಟಿಕೆಯಷ್ಟು ಚಿಲ್ಲಿ ಫ್ಲೇಕ್ಸ್ ಮತ್ತು ಓರೆಗಾನೊ ಸಿಂಪಡಿಸಿ.
* ಈಗ ಮೈಕ್ರೋವೇವ್‌ನಲ್ಲಿ ಮಗ್ ಇಟ್ಟು 2 ನಿಮಿಷ ಅಥವಾ ಚೀಸ್ ಸಂಪೂರ್ಣವಾಗಿ ಕರಗುವವರೆಗೆ ಬೇಯಿಸಿ.
* ಇದೀಗ ಇನ್ಸ್ಟೆಂಟ್ ಮಗ್ ಪಿಜ್ಜಾ ತಯಾರಾಗಿದ್ದು, ನೇರವಾಗಿ ಆನಂದಿಸಿ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ