ChikkaballapurDistrictsKarnatakaLatestMain Post

ಯಡಿಯೂರಪ್ಪ ರಾಜಕಾರಣದಲ್ಲಿ ಸಕ್ರಿಯರಾಗಿರುತ್ತಾರೆ: ಕೆ. ಸುಧಾಕರ್

- ವಿಜಯೇಂದ್ರಗೆ ಬಿಜೆಪಿಯಲ್ಲಿ ಉಜ್ವಲ ಭವಿಷ್ಯ

Advertisements

ಚಿಕ್ಕಬಳ್ಳಾಪುರ: ಯಡಿಯೂರಪ್ಪ ನಮ್ಮ ಹಿರಿಯ ನಾಯಕರು ಹುಟ್ಟು ಹೋರಾಟಗಾರರು. ಯಡಿಯೂರಪ್ಪ ಸಕ್ರಿಯ ರಾಜಕಾರಣದಲ್ಲಿ 100ಕ್ಕೆ 100 ರಷ್ಟು ಇದ್ದೇ ಇರುತ್ತಾರೆ. ಅವರು ಯಾವತ್ತು ವಿಶ್ರಾಂತಿ ಪಡೆದವರಲ್ಲ ಪಡೆಯುವುದು ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಸಾರ್ವಜನಿಕ ಜೀವನದಲ್ಲಿ ಬಹಳ ಬದ್ದತೆಯಿಂದ ತೊಡಗಿಸಿಕೊಂಡಿದ್ದಾರೆ. ಜನಪರ ರೈತ ಪರ ಕಾಳಜಿ ಹೊಂದಿರುವ ನಾಯಕ ಯಡಿಯೂರಪ್ಪನವರು. ಅವರು ರಾಜಕೀಯದಲ್ಲಿ ಹೀಗೆ ಮುಂದುವರೆಯಬೇಕು ಎಂಬ ಒತ್ತಾಸೆ ನನ್ನದು ಇದೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಮೊದಲೇ ಗೊತ್ತಿತ್ತು ವರುಣಾ ರಹಸ್ಯ – ಸಿದ್ದುಗೆ ಗುಟ್ಟು ಬಿಟ್ಟುಕೊಟ್ಟಿದ್ರು ಬಿಎಸ್‍ವೈ

ಬಿ.ವೈ. ವಿಜಯೇಂದ್ರಗೆ ಕ್ಷೇತ್ರ ಬಿಟ್ಟು ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯುಕ್ತಿಕ ನಿರ್ಧಾರ. ಕುಟುಂಬಸ್ಥರು ಕ್ಷೇತ್ರದ ಕಾರ್ಯಕರ್ತರ ಜೊತೆ ಚರ್ಚಿಸಿ ಈ ತೀರ್ಮಾನ ಮಾಡಿರುತ್ತಾರೆ. ಅವರಿಗೂ ಆ ಕ್ಷೇತ್ರದ ಜನರಿಗೆ ಅವಿನಾಭಾವ ಸಂಬಂಧವಿದೆ. ಹೀಗಾಗಿ ಸ್ವಾಭಾವಿಕವಾಗಿ ತಮ್ಮ ಮಗನನ್ನೇ ಕ್ಷೇತ್ರದ ಅಭ್ಯರ್ಥಿಯಾಗಿ ಮುಂದುವರೆಸಿದ್ದಾರೆ, ಹೊರತು ಯಾವುದೇ ವಿಶೇಷತೆ ಇರಲ್ಲ. ವಿಜಯೇಂದ್ರ ಸಹ ಉದಯೋನ್ಮುಖ ಯುವ ನಾಯಕ. ವಿಜಯೇಂದ್ರಗೂ ಸಹ ಬಿಜೆಪಿಯಲ್ಲಿ ಉಜ್ವಲವಾದ ಭವಿಷ್ಯವಿದೆ. ನಾಡಿಗೆ ಅವರ ಸೇವೆ ಅಗತ್ಯ ಇದೆ. ಇನ್ನೂ ಬಿಜೆಪಿಗೆ ಯಡಿಯೂರಪ್ಪ ಅವರ ಆಳವಾದ ಅನುಭವದ ಮಾರ್ಗದರ್ಶನದ ಅಗತ್ಯ ಇದೆ. ಬಿಜೆಪಿಗೆ ಅವರು ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷ ಸಹ ಅವರಿಗೆ ಸೂಕ್ತ ಗೌರವದ ಜೊತೆಗೆ ಅವರ ಮಾರ್ಗದರ್ಶನ ಪಡೆಯಲಿದೆ ಎಂದು ಹೇಳಿದರು.

ನಂತರ ಕಾಂಗ್ರೆಸ್ ನಾಯಕರಿಗೆ ಯಾಕೆ ಬಿಜೆಪಿ ಉಸಾಬರಿ. ಬಿಜೆಪಿ ಪಕ್ಷ ಹಾಗೂ ನಾಯಕರನ್ನು ನೋಡಿ ಹೇಗೆ ಇರಬೇಕು ಅಂತ ಕಾಂಗ್ರೆಸ್ ನಾಯಕರು ಕಲಿತುಕೊಳ್ಳಿ. ಶಿಕಾರಿಪುರ ಕ್ಷೇತ್ರವನ್ನು ತಮ್ಮ ಮಗ ವಿಜಯೇಂದ್ರಗೆ ಬಿಟ್ಟುಕೊಟ್ಟ ವಿಚಾರದಲ್ಲಿ ಯಡಿಯೂರಪ್ಪ ಅವರ ಬಗ್ಗೆ ಕಾಂಗ್ರೆಸ್‍ನವರು ಅನುಕಂಪ ವ್ಯಕ್ತಪಡಿಸುವುದು ಬೇಡ. ಮೊದಲು ಅವರ ನಾಯಕರ ಬಗ್ಗೆ ಅವರವರೇ ಅನುಕಂಪ ವ್ಯಕ್ತಪಡಿಸಿಕೊಳ್ಳಲಿ ಅಂತ ತಿರುಗೇಟು ನೀಡಿದರು. ಇದನ್ನೂ ಓದಿ: ಕಸ ಹಾಕಿದ್ದಕ್ಕೆ ಸಿಎಂ ನಿವಾಸಕ್ಕೆ 10,000 ರೂ. ದಂಡ ವಿಧಿಸಿದ ಕಾರ್ಪೊರೇಷನ್

ಡಿಕೆಶಿ ವ್ಯಕ್ತಿ ಪೂಜೆ ಬೇಡ ಪಕ್ಷ ಪೂಜೆ ಮಾಡಿ ಅಂತಾರೆ. ಆಸರೆ ಮಾಜಿ ಮಂತ್ರಿಗಳೊಬ್ಬರು ಈಗಲೂ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯ ಅಂತಲೇ ಹೇಳುತ್ತಾರೆ. ಎಂ.ಬಿ. ಪಾಟೀಲ್ ಸಹ ನಾನು ಸಿಎಂ ಕ್ಯಾಂಡಿಡೇಟ್ ಅಂತಾರೆ. ಮಾನ್ಯ ಪರಮೇಶ್ವರ್ ಅವರು ಸಹ ಈಗಲೇ ಸಿಎಂ ಯಾರು ಅಂತ ತೀರ್ಮಾನ ಮಾಡಲು ಆಗಲ್ಲ. ದಲಿತ ಸಿಎಂ ಅಂತ ಈಗಲೇ ಹೇಳುವುದು ಬೇಡ. ಚುನಾವಣೆ ಆದ ಮೇಲೆ ಹೈಕಮಾಂಡ್ ಏನು ಹೇಳುತ್ತೋ ಕಾದು ನೋಡೋಣ ಅಂತಾರೆ. ಮತ್ತೊಂದೆಡೆ ಖರ್ಗೆಯವರು ಸಹ ಕಾಂಗ್ರೆಸ್‍ನ ಬಹಳ ದೊಡ್ಡ ನಾಯಕರು ಅವರು ಸಹ ಈಗಲೇ ನಾನು ಸಿಎಂ, ನಾನು ಸಿಎಂ ಅಂತ ಹೇಳುವುದು ಬೇಡ ಅಂತಿದ್ದಾರೆ. ಇದು ಕಾಂಗ್ರೆಸ್‍ನ ಧ್ವಂದ ನಿಲುವುಗಳ ಜೇನುಗೂಡು ಇದ್ದಂತೆ ಇದೆ. ಹೀಗಾಗಿ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಉಸಾಬರಿ ಯಾಕೆ ಬೇಕು? ಬಿಜೆಪಿ ಶಿಸ್ತುಬದ್ಧ ಪಕ್ಷ ರಾಜಕೀಯದಲ್ಲಿ ಎಲ್ಲಾದರೂ ಅಪಸ್ವರ ಬಂತಾ? ಸಿಎಂ, ಮಾಜಿ ಸಿಎಂ, ರಾಜ್ಯ ಹಾಗೂ ಕೇಂದ್ರದಲ್ಲಿ ಎಲ್ಲಾದರೂ ಅಪಸ್ವರ ಬಂತಾ? ಹೀಗಾಗಿ ಬಿಜೆಪಿ ನೋಡಿ ಕಾಂಗ್ರೆಸ್ ನಾಯಕರು ಕಲಿತುಕೊಳ್ಳಿ ಎಂದು ಟಾಂಗ್ ನೀಡಿದರು.

Live Tv

Leave a Reply

Your email address will not be published.

Back to top button