ಬೆಂಗಳೂರು: ಸೋಶಿಯಲ್ ಮೀಡಿಯಾ (Social Media) ಹಾವಳಿಯಿಂದ ಬೇಸತ್ತ ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr. G Parameshwar) ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Advertisement
ಸೋಶಿಯಲ್ ಮೀಡಿಯಾದಲ್ಲಿ ಅವಹೇಳನ ಬರವಣಿಗೆ ವಿರುದ್ಧ ಪರಮೇಶ್ವರ್ ದೂರು ನೀಡಿದ್ದಾರೆ. ಫೇಸ್‍ಬುಕ್ (Facebook) ಮತ್ತು ಯೂಟ್ಯೂಬ್ (Youtube) ನಲ್ಲಿ ತಮ್ಮ ಮತ್ತು ತಮ್ಮ ಮಗಳ ಬಗ್ಗೆ ವೀಡಿಯೋ ಹಾಕಿ ಅವಹೇಳನ ಮಾಡಿದ್ದು, ಫೇಸ್ ಬುಕ್ ಮತ್ತು ಯೂಟ್ಯೂಬ್ ನಲ್ಲಿ ನಕಲಿ ಖಾತೆ ತೆರೆದು ವೀಡಿಯೋ ಅಪ್ಲೋಡ್ ಮಾಡಲಾಗ್ತಿದೆ. ರಾಜಕೀಯವಾಗಿ ತಗ್ಗಿಸಲು ಸಾಮಾಜಿಕ ಜಾಲತಾಣಗಳನ್ನ ಬಳಸಿಕೊಂಡಿದ್ದಾರೆ ಎಂದು ದೂರು ನೀಡಲಾಗಿದೆ. ಇದನ್ನೂ ಓದಿ: ಕಾಯಕಯೋಗಿಗಳಿಂದ ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜು
Advertisement
Advertisement
ಇಬ್ಬರ ಬಗ್ಗೆ ಅವಹೇಳನಕಾರಿ ವೀಡಿಯೋಗಳನ್ನ ಅಪ್ಲೋಡ್ ಮಾಡುವುದರ ಜೊತೆಗೆ ಪರಮೇಶ್ವರ್ ಘನತೆಗೆ ಕುಂದು ತರಲು ಯತ್ನಿಸಿದ್ದಾರೆ ಅಂತಾ ಪೊಲೀಸ್ ಠಾಣೆಗೆ ತಮ್ಮ ಆಪ್ತನ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ
Advertisement
ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‍ಐಆರ್ ದಾಖಲಾಗಿದೆ.