ಬೆಳಗಾವಿ: ಗಡಿಜಿಲ್ಲೆಯಲ್ಲಿ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದ 13 ಆರೋಪಿಗಳ ಗ್ಯಾಂಗ್‌ವೊಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳಾದ ಮಾರುತಿ ಸುತಾರ, ಸೋಮನಾಥ ಚೌಗಲೆ, ಸಂತೋಷ ನಾಯಕ, ಮಾರುತಿ ಗುಡದ್ಯಾಗೋಳ, ಬಾಳು ನಾಯಕ, ಲಕ್ಷ್ಮಣ ಗುಜನಾಳ, ಬಸವರಾಜ ಸಾಲೋಟಗಿ, ಬಸವಂತ ಯರಮಾಳಕರ, ಲಕ್ಷ್ಮಣ ಗುರವ, ಮರಿಯಪ್ಪ ನಾಯಕ, ವಿಶ್ವನಾಥ ದೇಸಾಯಿ ಬಂಧಿತರು. ಇದನ್ನೂ ಓದಿ: ರಾಜ್ಯಕ್ಕೆ ಜೂ.5 ರಂದು ಮುಂಗಾರು ಪ್ರವೇಶ – ಹಲವೆಡೆ ಇಂದಿನಿಂದ ಐದು ದಿನ ಮಳೆ ಮುನ್ಸೂಚನೆ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದ್ದ ಕೊಲೆ ಕೇಸ್‌ನ ತನಿಖೆ ನಡೆಸುತ್ತಿದ್ದ ವೇಳೆ ಪೊಲೀಸರಿಗೆ ಕಂಟ್ರಿ ಪಿಸ್ತೂಲ್‌ನಿಂದ ಕೊಲೆ ಮಾಡಿರುವುದು ಗೊತ್ತಾಗಿತ್ತು. ಬಳಿಕ ಕಂಟ್ರಿ ಪಿಸ್ತೂಲ್ ಮೂಲ ಬೆನ್ನುಬಿದ್ದ ಪೊಲೀಸರಿಗೆ ಖಾನಾಪುರದ ಕಾಟಗಾಳಿ ಗ್ರಾಮದಲ್ಲಿ ಆರೋಪಿಗಳು 2024ರಿಂದ ಅಕ್ರಮವಾಗಿ ತಯಾರಿಸುತ್ತಿರುವ ಸ್ಫೋಟಕ ಅಂಶ ಬೆಳಕಿಗೆ ಬಂದಿತ್ತು.

ಆರೋಪಿ ಮಾರುತಿ ಸಿಂಗಲ್ ಲೋಡೆಡ್, ಡಬಲ್ ಲೋಡೆಡ್ ಕಂಟ್ರಿ ಪಿಸ್ತೂಲ್ ತಯಾರಿಸುತ್ತಿದ್ದು, ಇವುಗಳ ತಯಾರಿಕೆಗೆ ಆರೋಪಿ ಮರಿಯಪ್ಪ ನಾಯಕ ಹಣ ಕೊಡುತ್ತಿದ್ದ. ಇನ್ನೋರ್ವ ಆರೋಪಿ ವಿಶ್ವನಾಥ ದೇಸಾಯಿ ಬಂದೂಕಿನ ಬಿಡಿಭಾಗಗಳನ್ನ ಪೂರೈಸುತ್ತಿದ್ದ. ಜೊತೆಗೆ ಬುಕ್ ಸ್ಟಾಲ್‌ನಲ್ಲಿ ಬಂದುಕಿನ ಬಿಡಿಭಾಗಗಳು ಮತ್ತು ಮದ್ದುಗುಂಡುಗಳನ್ನು ಮಾರಾಟ ಮಾಡಿದ್ದ. ಈತನಿಂದ ಬಂದೂಕಿನ 21 ಟ್ರೀಗರಗಳು, 5 ಹೆಡ್‌ಗಳು, 15 ನಿಪ್ಪಲಗಳು, 1 ಸಿಲಿಂಗ್ ಬೆಲ್ಟ್, 34 ಮದ್ದು ತುಂಬಿದ ಪ್ಯಾಕೇಟ್, 499 ಸೀಸಿನ ಗೋಲಿಗಳು, 420 ಕೇಪಗಳು, 48 ಜೀವಂತ ಕಾಡತೂಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸದ್ಯ ಪೊಲೀಸರು 13 ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ತಯಾರಿಸುತ್ತಿದ್ದ 1 ಹಾಗೂ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದ 8 ಕಂಟ್ರಿ ಪಿಸ್ತೂಲ್ ಸೇರಿ ಒಟ್ಟು 9 ಕಂಟ್ರಿ ಪಿಸ್ತೂಲ್ ಜಪ್ತಿ ಮಾಡಿದ್ದಾರೆ. ಪಿಸ್ತೂಲ್‌ಗಳನ್ನು ಬೇಟೆಗೆ ಬಳಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಸಂಬಂಧ ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ತ್ವಿಶಾ ಶರ್ಮಾ ಕೇಸ್ | ಸಾಕ್ಷಿಯ ಮೇಲೆ ಪತಿ ಸ್ನೇಹಿತರಿಂದ ಹಲ್ಲೆ – ವಿಡಿಯೋ ವೈರಲ್
