ಮಂಗಳೂರು: ದೈವಗಳು ಅಧರ್ಮಕ್ಕೆ ಬೆಂಬಲ ನೀಡುವುದಿಲ್ಲ ಎನ್ನುವುದು ಈ ಸಿನಿಮಾದ ಸಂದೇಶ ಎಂದು ಧರ್ಮಸ್ಥಳದ(Dharmasthala) ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ(Veerendra Heggade) ಅಭಿಪ್ರಾಯಪಟ್ಟಿದ್ದಾರೆ.
ಕಾಂತಾರ(Kantara) ಸಿನಿಮಾ ವಿಶ್ವದೆಲ್ಲೆಡೆ ಭಾರೀ ಸದ್ದು ಮಾಡಿದ್ದು ಈ ಸಿನಿಮಾವನ್ನು ನೋಡದ ಜನ ಇಲ್ಲ ಅನ್ನುವಂತಾಗಿದೆ. ಸಿನಿಮಾ ಅಷ್ಟರ ಮಟ್ಟಿಗೆ ಜನರನ್ನು ಸೆಳೆಯುತ್ತಿದೆ. ಶುಕ್ರವಾರ ರಾತ್ರಿ ಮಂಗಳೂರಿನ ಭಾರತ್ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯ ಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬ ಸಮೇತರಾಗಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದರು. ಸಿನಿಮಾ ವೀಕ್ಷಣೆ ಬಳಿಕ ಚಿತ್ರವನ್ನು ಹಾಗೂ ಚಿತ್ರ ತಂಡವನ್ನು ಹಾಡಿ ಹೊಗಳಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕಾಂತಾರ ನೋಡಿ, ಆದ್ರೆ ಓ.. ಎಂದು ಕೂಗ್ಬೇಡಿ – ಆಚಾರಕ್ಕೆ ಧಕ್ಕೆಯಾಗುತ್ತೆ ಎಂದ ರಿಷಬ್
Advertisement
Advertisement
ತುಳುನಾಡಿದ ದೈವಾರಾಧನೆಯನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿರುವ ರಿಷಬ್ ಶೆಟ್ಟಿ ದೈವಾರಾಧನೆಯ ಸೂಕ್ಷ್ಮತೆಯನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದಾರೆ. ದೈವಗಳು ಅಧರ್ಮಕ್ಕೆ ಬೆಂಬಲ ಕೊಡೋದಿಲ್ಲ ಎನ್ನುವುದು ಈ ಸಿನಿಮಾದ ಸಂದೇಶ. ಸಮಾಜದಲ್ಲಿ ಸ್ವಾರ್ಥಿಗಳು ಇರುತ್ತಾರೆ. ಆದರೆ ನಮ್ಮ ದೈವಗಳು ಯಾವುದಕ್ಕೂ ಬೆಂಬಲ ಕೊಡೋದಿಲ್ಲ ಎನ್ನುವುದನ್ನು ಈ ಸಿನಿಮಾ ಮತ್ತೆ ತೋರಿಸಿಕೊಟ್ಟಿದೆ. ಇದು ಒಳ್ಳೆಯ ಸಂದೇಶ ಅಂತ ಅನಿಸಿದೆ ಎಂದಿದ್ದಾರೆ.
Advertisement
ನಮ್ಮ ನಂಬಿಕೆ ಆಚರಣೆಗಳು ಸ್ವಾಭಾವಿಕವಾಗಿ ಬೆಳೆದು ಬಂದದ್ದು ಅದನ್ನು ಬಿಟ್ಟಿರಲು ಸಾಧ್ಯವಿಲ್ಲ. ನಾವೆಲ್ಲ ಇವತ್ತಿಗೂ ದೈವಾರಾಧನೆ ಮಾಡುತ್ತೇವೆ. ದೈವದ ನುಡಿಗೆ ಗೌರವ ಕೊಡುತ್ತೇವೆ. ದೈವ ಮೈಮೇಲೆ ಬಂದಾಗ ಅದಕ್ಕೆ ಗೌರವ ಕೊಡುತ್ತೇವೆ. ಇದನ್ನು ಹಿಂದೂ ಧರ್ಮಕ್ಕೆ ವಿಮರ್ಶೆ ಮಾಡುವ ಅಗತ್ಯ ಇಲ್ಲ ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟಿದ್ದಾರೆ.