ಮುಂಬೈ: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆಸಬೇಕು ಎಂದು ಒತ್ತಾಯಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ (ಎಂಎನ್‌ಎಸ್) ರಾಜ್ ಠಾಕ್ರೆ ವಿರುದ್ಧ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹಾಗೂ ಕಾಂಗ್ರೆಸ್‌ನ ಸಂಜಯ್ ನಿರುಪಮ್ ಕಿಡಿಕಾರಿದ್ದಾರೆ.
ರಾಜ್ ಠಾಕ್ರೆ ಅವರಿಗೆ ಅಷ್ಟು ಪ್ರಾಮುಖ್ಯತೆ ನೀಡಬಾರದು. ಸರಿಯಾದ ಸಮಯ ಬಂದಾಗ, ನಾನು ಖಂಡಿತವಾಗಿಯೂ ಉತ್ತರಿಸುತ್ತೇನೆ. ಪ್ರತಿ ಪ್ರಶ್ನೆಗೂ ನನ್ನ ಬಳಿ ಉತ್ತರವಿದೆ ಎಂದು ಅಜಿತ್ ಪವಾರ್ ತಿರುಗೇಟು ನೀಡಿದ್ದಾರೆ.
Advertisement
Advertisement
ಮುಂಬೈನ ಒಂದೇ ಒಂದು ಮಸೀದಿಯಿಂದಲೂ ಧ್ವನಿವರ್ಧಕಗಳನ್ನು ತೆಗೆದುಹಾಕಿದರೆ ಅದು ನಾಚಿಕೆಗೇಡಿನ ಸಂಗತಿ ಎಂದು ರಾಜ್ಯ ಸರ್ಕಾರಕ್ಕೆ ಸಂಜಯ್ ನಿರೂಪಮ್ ಎಚ್ಚರಿಕೆ ನೀಡಿದ್ದಾರೆ.
Advertisement
मुंबई की एक भी मस्जिद से लाउडस्पीकर हटाया गया तो यह सरकार के लिए शर्म की बात होगी।
हम सरकार और मुंबई पुलिस का जाहिर निषेध करेंगे।
हाँ,सरकार चाहे तो डेसीबल नियंत्रण के गाइडलाइन जारी करे।
सभी मस्जिदों में इसका पालन हो,इसे सुनिश्चित करे।#MumbaiCity
— Sanjay Nirupam (@sanjaynirupam) April 13, 2022
Advertisement
ಮಸೀದಿಯಿಂದ ಧ್ವನಿವರ್ಧಕಗಳನ್ನು ತೆಗೆಯದಂತೆ ನಾವು ಸರ್ಕಾರ ಮತ್ತು ಮುಂಬೈ ಪೊಲೀಸರನ್ನು ಕಟ್ಟುನಿಟ್ಟಾಗಿ ಹೇಳಿದ್ದೇವೆ. ಸರ್ಕಾರವು ಡೆಸಿಬಲ್ ನಿಯಂತ್ರಣ ಮಾರ್ಗಸೂಚಿಗಳನ್ನು ನೀಡಲು ಬಯಸಿದರೆ, ಅದನ್ನು ಮಾಡಬಹುದು. ಎಲ್ಲಾ ಮಸೀದಿಗಳಲ್ಲಿ ಇದನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿ ಸಂಜಯ್ ನಿರುಪಮ್ ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದವರು ಧ್ವನಿವರ್ಧಕಗಳ ಮೂಲಕ ಮಸೀದಿಗಳಲ್ಲಿ ಆಜಾನ್ ನುಡಿಸುತ್ತಿರುವುದು ಸರಿಯಲ್ಲ. ಅವರು ಬದಲಾಗದಿದ್ದರೆ ಮಸೀದಿಗಳ ಮುಂದೆ ಅವರ ಧ್ವನಿವರ್ಧಕದ ಎರಡು ಪಟ್ಟು ಹನುಮಾನ್ ಚಾಲೀಸಾ ಹಾಕ್ತಿವಿ ಎಂದು ರಾಜ್ ಠಾಕ್ರೆ ಹೇಳಿಕೆ ನೀಡಿದ್ದರು.
ಶಿವಸೇನೆ, ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಮಹಾರಾಷ್ಟ್ರ ಸರ್ಕಾರದ ಮೈತ್ರಿ ಕೂಟ)ಗಳು ರಾಜ್ ಠಾಕ್ರೆ ಅವರ ಬೇಡಿಕೆಯನ್ನು ಬಲವಾಗಿ ವಿರೋಧಿಸಿವೆ. ಇದು ಕರ್ನಾಟಕದಲ್ಲಿಯೂ ಆಜಾನ್ ಗದ್ದಲಕ್ಕೆ ಕಾರಣವಾಗಿದೆ. ಮಸೀದಿಗಳ ಹೊರಗಿನ ಧ್ವನಿವರ್ಧಕದ ಡೆಸಿಬಲ್ ಮಟ್ಟವನ್ನು ನಿಗದಿಪಡಿಸುವ ನಿಯಮಗಳನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದವು.