ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಹಾಗೂ ಸುರ್ಜೇವಾಲಾ ಅವರು ರಾಜೀನಾಮೆ ಅಂಗೀಕಾರ ಮಾಡಲ್ಲ ಅಂತ ಹೇಳಿದ್ದಾರೆ. ಆದ್ರೆ ಸದ್ಯಕ್ಕೆ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
ರಾಜೀನಾಮೆ ಹಿಂಪಡೆಯುವ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ನಾನು ಯಾರಿಗೂ ಸಿಗಲಿಲ್ಲ. ಸುರ್ಜೇವಾಲ ನಿನ್ನೆ ಕಾಲ್ ಮಾಡಿದ್ರು. ಬೆಳಗ್ಗೆ ಹೋಗಿ ಭೇಟಿ ಮಾಡಿ ಬಂದಿದ್ದೇನೆ. ನಿನ್ನೆ ಸಿಎಂ ಮನೆಗೆ ಬರ್ತೀನಿ ಅಂದ್ರು, ನಾನು ಹೋಟೆಲ್ ಅಲ್ಲಿ ಇದ್ದೆ. ಅಲ್ಲಿಗೆ ಸಿಎಂ ಬಂದಿದ್ರು. ರಾಜೀನಾಮೆ ಅಂಗೀಕಾರ ಮಾಡಲ್ಲ ಅಂತ ಹೇಳ್ತಿದ್ದಾರೆ. ನೀರಾವರಿ ಇಲಾಖೆ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಹಾಗಾಗಿ ಸಿಎಂ, ಸುರ್ಜೇವಾಲಾ ಅವರು ಏನು ನಿರ್ಧಾರ ತೆಗೆದುಕೊಳ್ತಾರೆ ಅಂತ ನೋಡಬೇಕು ಎಂದಿದ್ದಾರೆ. ಇದನ್ನೂ ಓದಿ: ನನ್ನ ನಿರ್ಧಾರ ತಿಳಿಸಿದ್ದೇನೆ, ಏನ್ ಮಾಡ್ತಾರೆ ನೋಡೋಣ – ಖಾತೆ ಬದಲಾವಣೆ ಗುಟ್ಟು ಬಿಡದ ರಾಮಲಿಂಗಾರೆಡ್ಡಿ

2023 ಮತ್ತು 2026 ರಲ್ಲಿ ಎರಡು ಬಾರಿ ನನಗೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡ್ತೀನಿ ಅಂದಿದ್ರು. ಈಗ ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕಾರ ಮಾಡಲ್ಲ ಅಂತ ಹೇಳಿದ್ದಾರೆ. ಇಂದು ಸಂಜೆಯೊಳಗೆ ಗೊಂದಲ ಬಗೆಹರಿಸುವ ವಿಶ್ವಾಸವಿದೆ. ನೆಗೆಟಿವ್ ಯೋಚಿಸೋದು ಬೇಡ, ಪಾಸಿಟಿವ್ ಆಗಿ ಇರೋಣ. ಸಿಎಂ ಸುರ್ಜೇವಾಲಾ ಚರ್ಚೆ ಮಾಡ್ತಿದ್ದಾರೆ. ಮತ್ತೆ ಕರೆದರೆ ಹೋಗ್ತೀನಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಕೊಟ್ಟ ರಾಮಲಿಂಗಾರೆಡ್ಡಿ ಭೇಟಿಯಾದ ಸಿಎಂ – ಮನವೊಲಿಕೆಗೆ ಯತ್ನ
