ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಡೀಸೆಲ್ ಬೆಲೆ ಏರಿಕೆಯಾದ ಪರಿಣಾಮ ಭಾರತದಲ್ಲಿ ಬಲ್ಕ್ ಡೀಸೆಲ್ ಖರೀದಿದಾರರಿಗೆ ತೈಲ ತುಟ್ಟಿಯಾಗಿದೆ. ಡೀಸೆಲ್ ಲೀಟರ್‌ಗೆ 25 ರೂ. ಏರಿಕೆ ಕಂಡಿದೆ.
Advertisement
ಉಕ್ರೇನ್, ರಷ್ಯಾ ಯುದ್ಧ ಆರಂಭವಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಕಾಣುತ್ತಿದೆ. ಇತ್ತ ತೈಲಕ್ಕಾಗಿ ಅರಬ್ ದೇಶಗಳನ್ನು ನೆಚ್ಚಿಕೊಂಡಿರುವ ಭಾರತದಲ್ಲಿ ಇದೀಗ ತೈಲ ಏಫೆಕ್ಟ್ ಬೀರಿದ್ದು, ಬೃಹತ್ ಪ್ರಮಾಣದ (ಬಲ್ಕ್ ಖರೀದಿ) ಡೀಸೆಲ್ ಖರೀದಿದಾರರಿಗೆ ಅನ್ವಯವಾಗುವಂತೆ ಪ್ರತಿ ಲೀಟರ್ ಡೀಸೆಲ್ ಬೆಲೆ ಸುಮಾರು 25 ರೂ.ಗಳಷ್ಟು ಹೆಚ್ಚಳವಾಗಿದೆ. ಬಲ್ಕ್ ಖರೀದಿದಾರರೆಂದರೆ ಬಸ್ ಫ್ಲೀಟ್ ನಿರ್ವಾಹಕರು ಮತ್ತು ಮಾಲ್‍ಗಳಂತಹ ಬೃಹತ್ ಗ್ರಾಹಕರು ಪೆಟ್ರೋಲ್ ಪಂಪ್‍ಗಳಿಂದ ಇಂಧನವನ್ನು ಖರೀದಿ ಮಾಡದೆ, ನೇರವಾಗಿ ಪೆಟ್ರೋಲಿಯಂ ಕಂಪನಿಗಳಿಂದ ಇಂಧನವನ್ನು ಖರೀದಿಸುತ್ತಾರೆ. ಇದರಿಂದಾಗಿ ಚಿಲ್ಲರೆ ಇಂಧನ ಮಾರಾಟ ಕಂಪನಿಗಳಿಗೆ ನಷ್ಟ ಹೆಚ್ಚಾಗಿದೆ. ನೈರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‍ನಂತಹ ಕಂಪನಿಗಳು ಇದರಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತಕ್ಕೆ ಬರಲಿದೆ ರಷ್ಯಾ ತೈಲ – ಅಂತಿಮ ಹಂತದಲ್ಲಿ ಮಾತುಕತೆ
Advertisement
Advertisement
ಇದೀಗ ತೈಲ ದರ ಕೇವಲ ಬಲ್ಕ್ ಖರೀದಿದಾರರಿಗೆ ಮಾತ್ರ ಅನ್ವಯವಾಗಿದ್ದು, ಸದ್ಯ ಪೆಟ್ರೋಲ್ ಪಂಪ್‍ಗಳಲ್ಲಿ ಚಿಲ್ಲರೆ ದರದಲ್ಲಿ ಖರೀದಿಸುವ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮೂಲಗಳಿಂದ ವರದಿಯಾಗಿದೆ. ಬಲ್ಕ್ ಖರೀದಿದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆ ಲೀಟರ್‌ಗೆ 25 ರೂ.ಗಳಷ್ಟು ಏರಿಕೆಯಾಗಿರುವುದು ವಿವಿಧ ರೀತಿಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನೂ ಓದಿ: ಎರಡನೇ ಅವಧಿಗೂ ಬಿರೇನ್ ಸಿಂಗ್ ಮಣಿಪುರಕ್ಕೆ ಸಿಎಂ
Advertisement
ಮುಂಬೈನಲ್ಲಿ ಲೀ. 94.14 ರೂ. ಇದ್ದ ಡೀಸೆಲ್ ದರ 25 ರೂ. ಏರಿಕೆ ಕಂಡು, 122.05ಕ್ಕೆ ತಲುಪಿದೆ. ಇತ್ತ ದೆಹಲಿಯಲ್ಲಿ 86.67 ರೂ. ಇದ್ದ ಬೆಲೆ 115 ರೂ.ಗೆ ಏರಿಕೆ ಕಂಡಿದೆ.