– ದರ್ಶನ್ ಸರ್ಗೆ ಜೈಲಿನಲ್ಲಿಯೂ ನೆಮ್ಮದಿ ಇಲ್ಲದಂತಾಗಿದೆ
ಬೆಂಗಳೂರು: ನಟ ಧನ್ವೀರ್ 11 ಕೋಟಿ ರೂ. ತಗೊಂಡಿದ್ರೂ ಇಲ್ಲ ಅಂತಾನೆ, ವಿಜಯಲಕ್ಷ್ಮಿ ಅವರ ವಿರುದ್ಧ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದು ಬಿಗ್ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ (Rajath Kishan) ಅವರು ಹೇಳಿದ್ದಾರೆ.
ನಟ ಧನ್ವೀರ್ ಹಾಗೂ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ಅವರ ನಡುವಿನ ಜಟಾಪಟಿ ತಾರಕಕ್ಕೇರಿದೆ. ಇದರ ನಡುವೆ ಧನ್ವೀರ್ದ್ದು ಎನ್ನಲಾದ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ `ಪಬ್ಲಿಕ್ ಟಿವಿ’ ಜೊತೆ ರಜತ್ ಕಿಶನ್ ಅವರು ಮಾತನಾಡಿ, ಅವರವರ ನಡುವಿನ ವ್ಯವಹಾರ ಏನೇ ಇರಲಿ. ಆದರೆ ಮತ್ತೊಬ್ಬರ ಬಗ್ಗೆ ಮಾತನಾಡಬಾರದು. 11 ಕೋಟಿ ರೂ. ಅನ್ನೋದು ಸಣ್ಣ ಮೊತ್ತ ಅಲ್ಲ. ಅಷ್ಟು ಹಣ ತೆಗೆದುಕೊಂಡಿದ್ದರೂ ತೆಗೆದುಕೊಂಡಿಲ್ಲ ಅಂತ ಹೇಳ್ತಾನೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನನ್ನ ಹೃದಯದಲ್ಲಿ ದರ್ಶನ್ಗಿರೋ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ: ಧನ್ವೀರ್
ಉದ್ದೇಶಪೂರ್ವಕವಾಗಿ ಧನ್ವೀರ್ ಅವರ ಆಡಿಯೋ ರೆಕಾರ್ಡ್ ಮಾಡ್ಕೊಂಡಿದ್ದಾರೆ. ಯಾಕೆಂದರೆ ಇವನು ತಗೊಂಡಿಲ್ಲ ಅಂತ ತಪ್ಪಿಸಿಕೊಳ್ತಿದ್ದ. ಆಮೇಲೆ ಇನ್ನೊಂದು ಆಡಿಯೋ ಕೂಡ ಇದೆ. ಅದರಲ್ಲಿ ದುಡ್ಡು ತಗೊಂಡಿದ್ದೀನಿ. ನಾಳೆನೇ ಕೊಡ್ತೀನಿ ಅಂತ ಹೇಳಿದ್ದಾನೆ. ಸತ್ಯ ಹೊರಗೆ ಬರುತ್ತೆ. ಸುಮ್ಮನೇ ದುಡ್ಡು ವಾಪಸ್ ಕೊಡಬೇಕಿತ್ತು. ಇದೆಲ್ಲ ಮಾಡ್ಕೋಬಾರದಿತ್ತು ಎಂದಿದ್ದಾರೆ.
ಇದೇ ವೇಳೆ ವಿಜಯಲಕ್ಷ್ಮಿ ಅವರ ಮೇಲೆ ಧನ್ವೀರ್ ಮಾಡುತ್ತಿರುವ ಆರೋಪದ ಬಗ್ಗೆ ಮಾತನಾಡಿ, ಎಲ್ಲ ಆರೋಪಗಳು ಸುಳ್ಳು. ಸುಮ್ಮನೇ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಯಾರಾದ್ರೂ ಧನ್ವೀರ್ ಪರ ನಿಂತಿದ್ದಾರಾ? ಎಲ್ಲಿದ್ದಾರೆ ಈಗ ಧನ್ವೀರ್ ಫ್ಯಾನ್? ಸುಮ್ಮನೇ ಜೀವನ ಹಾಳು ಮಾಡಿಕೊಳ್ತಿದ್ದಾರೆ. ಈ ಕಡೆ ಪಾಪ ದರ್ಶನ್ ಸರ್ಗೆ ಜೈಲಿನಲ್ಲಿಯೂ ನೆಮ್ಮದಿ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಧನ್ವೀರ್ ವಿರುದ್ಧ ಫಿಲ್ಮ್ ಚೇಂಬರ್ಗೆ ದೂರು ನೀಡಲಿದ್ದಾರೆ ಝೈದ್ ಖಾನ್
