LatestMain PostNationalOut of the boxSouth cinema

ರಶ್ಮಿಕಾ ನಟನೆಯ ಸಾಮಿ.. ಸಾಮಿ ಹಾಡಿಗೆ ಜಬರ್ದಸ್ತ್ ಹೆಜ್ಜೆ ಹಾಕಿದ ವೃದ್ಧೆ

ತ್ತೀಚೆಗೆ ಕೇವಲ ಯುವಕ- ಯುವತಿಯರು ಮಾತ್ರವಲ್ಲದೇ ವೃದ್ಧರು ಕೂಡ ರೀಲ್ಸ್ ಮಾಡಲು ಆರಂಭಿಸಿದ್ದಾರೆ. ಇಲ್ಲೊಬ್ಬರು ವೃದ್ಧೆ ರಶ್ಮಿಕಾ ಮಂದಣ್ಣ ನಟನೆಯ ಸಾಮಿ.. ಸಾಮಿ ಹಾಡಿಗೆ ಕುಣಿದು ಕುಪ್ಪಳಿಸಿದ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು ಪುಷ್ಪಾ ಸಿನಿಮಾದ ಸಾಮಿ.. ಸಾಮಿ ಎಂಬ ಹಾಡು ಸಾಕಷ್ಟು ಫೇಮಸ್ ಆಗಿದೆ. ಈ ಹಾಡಿಗೆ ಸಾಕಷ್ಟು ಮಂದಿ ಡ್ಯಾನ್ಸ್, ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡುತ್ತಿದ್ದಾರೆ. ಕೆಲವರಂತೂ ಈ ಹಾಡಿನಲ್ಲಿ ರಶ್ಮಿಕಾ ಹಾಕಿಕೊಂಡಿರುವ ಡ್ರೆಸ್‍ನಂತದ್ದೇ ಕಾಸ್ಟ್ಯೂಮ್ ಧರಿಸಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

ಇದೀಗ ಇದೇ ಫೇಮಸ್ ಹಾಡಿಗೆ ಅಜ್ಜಿಯೊಬ್ಬರು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಈ ಹಾಡು ಹಾಕಿರುವಂತೆ ವೀಡಿಯೋದಲ್ಲಿ ಗಮನಿಸಬಹುದು. ಹಾಡು ಶುರುವಾಗುತ್ತಿದ್ದಂತೆಯೇ ಸಾರಿ ಕಚ್ಚೆ ಧರಿಸಿರುವ ಅಜ್ಜಿ ತನ್ನ ಪಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಒಂದು ಚೂರು ವಿಶ್ರಾಂತಿ ಪಡೆದುಕೊಳ್ಳದೆ ಅಜ್ಜಿ ಕುಣಿದು ಕುಪ್ಪಳಿಸಿದ್ದಾರೆ. ಅಜ್ಜಿ ಕುಣಿಯುತ್ತಿರುವ ದೃಶ್ಯವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ. ಇದನ್ನೂ ಓದಿ: ಮಲಯಾಳಂ ಖ್ಯಾತ ನಟಿಯ ಜೀವ ಅಪಾಯದಲ್ಲಿದೆ ಎಂದು ಪೊಲೀಸರ ವಶವಾದ ಡೈರೆಕ್ಟರ್

ಈ ವೀಡಿಯೋವನ್ನು ಇನ್ ಸ್ಟಾಗ್ರಾಂ ಖಾತೆಯಲ್ಲಿ ಸೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ನೋಡಿದ ನೆಟ್ಟಿಗರು ಅಜ್ಜಿಯ ಡ್ಯಾನ್ಸ್ ನೋಡಿ ಫಿದಾ ಆಗಿದ್ದಾರೆ. ಸಾಕಷ್ಟು ಜನ ಈ ವೀಡಿಯೋಗೆ ಕಾಮೆಮಟ್ ಮಾಡುತ್ತಿದ್ದು, ಅಜ್ಜಿ ಎನರ್ಜಿಗೆ ಹಾಟ್ಸಾಪ್ ಅಂದಿದ್ದಾರೆ. ಹೀಗೆ ಅಜ್ಜಿಯ ನೃತ್ಯಕ್ಕೆ ನೆಟ್ಟಿಗರು ಮಾರು ಹೋಗಿದ್ದು, ಯುವಕರನ್ನೇ ನಾಚಿಸುವಂತಿದೆ ಅಜ್ಜಿ ನೃತ್ಯ ಎಂದು ಹೊಗಳಿದ್ದಾರೆ.

 

View this post on Instagram

 

A post shared by GiDDa CoMpAnY (@giedde)

Leave a Reply

Your email address will not be published.

Back to top button