CinemaDistrictsKarnatakaLatestMain PostSouth cinema

ಮಲಯಾಳಂ ಖ್ಯಾತ ನಟಿಯ ಜೀವ ಅಪಾಯದಲ್ಲಿದೆ ಎಂದು ಪೊಲೀಸರ ವಶವಾದ ಡೈರೆಕ್ಟರ್

ಲಯಾಳಂನಲ್ಲಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಸನಲ್ ಕುಮಾರ್ ಶಶಿಧರನ್ ಸದ್ಯ ಪೊಲೀಸ್ ವಶದಲ್ಲಿದ್ದಾರೆ. ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್ ಕುರಿತಾಗಿ ಅವರು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು ಎನ್ನುವ ಕಾರಣಕ್ಕಾಗಿ ಪೊಲೀಸ್ ರು ಸನಲ್ ಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಿಸುತ್ತಿದ್ದಾರೆ. ತಮ್ಮನ್ನು ಪೊಲೀಸ್ ರು ವಶಕ್ಕೆ ಪಡೆಯುತ್ತಿರುವ ದೃಶ್ಯವನ್ನು ಸನಲ್ ಕುಮಾರ್ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

ಮಂಜು ವಾರಿಯರ್ ಕೆಲ ಪಟ್ಟಭದ್ರ ಹಿತಾಸಕ್ತಿಗಳ ವಶದಲ್ಲಿದ್ದಾರೆ. ಅವರು ಜೀವನ ಅಪಾಯದಲ್ಲಿದೆ. ಅವರಿಂದಾಗಿ ಕೆಲವರಿಗೆ ತೊಂದರೆ ಕೂಡ ಆಗಲಿದೆ ಎಂದು ನಿರ್ದೇಶಕ ಸನಲ್, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದನ್ನು ಮಂಜು ವಾರಿಯರ್ ಗಂಭೀರವಾಗಿ ತಗೆದುಕೊಂಡು ದೂರು ನೀಡಿದ್ದರು. ತಮಗೆ ಆ ನಿರ್ದೇಶಕರಿಂದ ಬ್ಲ್ಯಾಕ್ ಮೇಲ್ ಆಗುತ್ತಿದೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾನಹಾನಿ ಆಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

ಮಂಜು ವಾರಿಯರ್ ಮೇಲೆ ಆರೋಪ ಮಾಡಿದ್ದ ನಿರ್ದೇಶಕ ಸನಲ್, ತಿರುವನಂತಪುಂನಲ್ಲಿದ್ದರು. ಅಲ್ಲಿಂದಲೇ ಪೊಲೀಸ್ ರು ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಮಂಜು ವಾರಿಯರ್ ಮತ್ತು ಸನಲ್ ಈ ಹಿಂದೆ ಕಯಟ್ಟಮ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆನಂತರ ಇಬ್ಬರ ಮಧ್ಯ ಮನಸ್ತಾಪ ಬಂದಿದೆ ಎನ್ನಲಾಗುತ್ತಿದೆ. ಅಲ್ಲಿಂದ ಮಂಜು ಅವರ ಬಗ್ಗೆ ಸನಲ್ ಆಗಾಗ್ಗೆ ಆರೋಪ ಮಾಡುತ್ತಾ ಬಂದಿದ್ದರು ಎಂದು ಹೇಳಲಾಗುತ್ತಿದೆ.

Leave a Reply

Your email address will not be published.

Back to top button