BollywoodCinemaDistrictsKarnatakaLatestMain PostTV Shows

ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

ಬಾಲಿವುಡ್ ನಲ್ಲಿ ಶತ್ರುಘ್ನಾ ಸಿನ್ಹಾ ಮೇಲಿನ ಲೈಂಗಿಕ ಹಗರಣ ದಂಧೆ ಆರೋಪ  ಕೋಲಾಹಲ ಸೃಷ್ಟಿ ಮಾಡಿದೆ. ನಟಿ, ಬಿಗ್ ಬಾಸ್ ಸ್ಪರ್ಧಿ ಪೂಜಾ ಮಿಶ್ರಾ ಮಾಡಿರುವ ಗಂಭೀರ ಆರೋಪವು ಸಿನ್ಹಾ ಕುಟುಂಬವನ್ನು ಕೆರಳಿಸಿದೆ. ಈ ಹಿಂದೆ ಸಲ್ಮಾನ್ ಖಾನ್ ಮೇಲೂ ಇಂಥದ್ದೊಂದು ಆರೋಪ ಮಾಡಿದ್ದ ಪೂಜಾ ಮೇಲೆ ಸಿನ್ಹಾ ಕುಟುಂಬ ಕಿಡಿಕಾರಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೂಜಾ ಮಿಶ್ರ, ‘ಸಿನ್ಹಾ ಕುಟುಂಬವು ನನ್ನ ಕನ್ಯತ್ವವನ್ನೇ ಮಾರಾಟ ಮಾಡಿತು. ನನ್ನನ್ನು ಲೈಂಗಿಕ ಹಗರಣ ದಂಧೆಗೆ ನೂಕಿತು. ಇದರಿಂದಾಗಿ ನನ್ನ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕು ಎರಡೂ ಹಾಳಾಯಿತು’ ಎಂದು ಸಿನ್ಹಾ ಮೇಲೆ ಆರೋಪ ಮಾಡಿದ್ದಾರೆ. ಇದರಲ್ಲಿ ಅವರ ಇಡೀ ಕುಟುಂಬವೇ ತೊಡಗಿಕೊಂಡಿತ್ತು ಎಂದು ಹೇಳಿದ್ದಾರೆ ಪೂಜಾ ಮಿಶ್ರಾ.

 

ಮುಂದುವರೆದು ಮಾತನಾಡಿರುವ ಪೂಜಾ, ‘ಶತ್ರುಘ್ನಾ ಸಿನ್ಹಾ ಮತ್ತು ನನ್ನ ತಂದೆ ಇಬ್ಬರೂ ಸ್ನೇಹಿತರು. ಸಿನಿಮಾ ರಂಗದಲ್ಲಿ ಮುಂದುವರೆಯಲು ಪರಸ್ಪರ ಒಪ್ಪಂದಗಳು ನಡೆಯುತ್ತವೆ. ಅದಕ್ಕೆ ನಿಮ್ಮ ಮಗಳು ಸಿದ್ಧಳಾಗಬೇಕು ಎಂದು ಹೇಳಿದ್ದರು. ತಮ್ಮ ಮಗಳಿಗೆ ಅವಕಾಶ ಕೊಡಿಸುವುದಕ್ಕಾಗಿ ನನ್ನನ್ನು ಬಳಸಿಕೊಂಡರು’ ಎಂದು ಪೂಜಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ, ತಮ್ಮ ತಂದೆಯಿಂದ ಸಿನ್ಹಾ ಕುಟುಂಬ 100 ಕೋಟಿ ರೂಪಾಯಿ ಸಾಲವನ್ನೂ ಪಡೆದಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

ಪೂಜಾ ಮಿಶ್ರಾ ಮಾತಿಗೆ ಸಿನ್ಹಾ ಕುಟುಂಬದ ಲವ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದು, ‘ಪೂಜಾ ಮಿಶ್ರಾ ಮಾನಸಿಕ ಅಸ್ವಸ್ಥೆ. ಅವರಿಗೆ ಚಿಕಿತ್ಸೆ ಅವಶ್ಯಕತೆ ಇದೆ. ವೃತ್ತಿಪರ ವೈದ್ಯರೇ ಅವರಿಗೆ ಸಹಾಯ ಮಾಡಬೇಕು. ಕುಟುಂಬದ ಪರವಾಗಿ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ’ ಎಂದು ಅವರು ಟ್ವಿಟ್ ಮಾಡಿದ್ದಾರೆ.

Leave a Reply

Your email address will not be published.

Back to top button