ಬೆಂಗಳೂರು: ಡಿಕೆ ಶಿವಕುಮಾರ್ ಅವರು ಬುಧವಾರ (ಜೂ.3) ಕರ್ನಾಟಕದ 25ನೇ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕುರ್ಚಿ ಕದನದಿಂದ ಹಿಡಿದು ಪ್ರಮಾಣ ವಚನ ಸ್ವೀಕರಿಸಿ ಸಿಎಂ ಆಗುವವರೆಗೂ ನಂಬಿ ನಡೆದಿರುವ ಡಿಕೆಶಿಯನ್ನು ಅಜ್ಜಯ್ಯ ಯಾವತ್ತಿಗೂ ಕೈಬಿಡಲಿಲ್ಲ. ಯಾರಿದು ಅಜ್ಜಯ್ಯ? ಡಿಕೆಶಿ ಇಷ್ಟೊಂದು ನಂಬುವುದ್ಯಾಕೆ? ಇದರ ಹಿನ್ನೆಲೆ ಇಲ್ಲಿದೆ.
ಹೌದು, ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವಾಗ ವೀರ ಗಂಗಾಧರ ಅಜ್ಜನ ಹೆಸರನ್ನು ನೆನೆದಿದ್ದಾರೆ. ಇದು ಇವತ್ತಿನಿಂದಲ್ಲ. ಕೆಲ ವರ್ಷಗಳಿಂದಲೂ ಡಿಕೆಶಿ ಅಜ್ಜಯ್ಯನ ಆಶೀರ್ವಾದ ಪಡೆದೇ ಮುಂದಿನ ಕೆಲಸಕ್ಕೆ ಕೈಹಾಕುತ್ತಾರೆ. ಪ್ರತಿಯೊಂದು ಯಾವುದೇ ನಿರ್ಧಾರ, ಶುಭಕಾರ್ಯಕ್ಕೂ ಮುನ್ನ ಡಿಕೆಶಿ ಯಾವಾಗಲೂ ಅಜ್ಜಯ್ಯನ ಸಲಹೆ, ಅಪ್ಪಣೆಯನ್ನು ಪಡೆದುಕೊಂಡೇ ಮುಂದೆ ನಡೆಯುತ್ತಾರೆ.ಇದನ್ನೂ ಓದಿ: ಸಿಎಂ ಆದ ಬೆನ್ನಲ್ಲೇ ಕುಟುಂಬ ಸಮೇತರಾಗಿ ಅಜ್ಜಯ್ಯನ ಆಶೀರ್ವಾದ ಪಡೆದ ಡಿಕೆಶಿ

ಡಿಕೆಶಿ ಕಣಕಣದಲ್ಲೂ ನೆಲೆಸಿರುವ, ಅತ್ಯಂತ ಭಕ್ತಿಯಿಂದ ನಂಬುವ `ಅಜ್ಜಯ್ಯ’ ಬೇರೆ ಯಾರೂ ಅಲ್ಲ. ಅವರೇ ಲಿಂಗೈಕ್ಯ ಶ್ರೀಮದ್ ವೀರಗಂಗಾಧರ ಜಗದ್ಗುರುಗಳು. ಅತ್ಯಂತ ಪ್ರಾಚೀನ ಪರಂಪರೆಯನ್ನು ಹೊಂದಿರುವ ಪಂಚಪೀಠಗಳಲ್ಲಿ ಒಂದಾದ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠದ 119ನೇ ಜಗದ್ಗುರುಗಳಾಗಿದ್ದ `1008 ಶ್ರೀಮದ್ ರಂಭಾಪುರಿ ವೀರ ಸಿಂಹಾಸನಾಧೀಶ್ವರ ಲಿಂಗೈಕ್ಯ ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು’ ಅವರೇ ಡಿಕೆಶಿ ಆರಾಧಿಸುವ ಪರಮಗುರು ಅಜ್ಜಯ್ಯ.
ಅಜ್ಜಯ್ಯನವರ ಗದ್ದುಗೆಯು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಸಮೀಪದ ಮುಕ್ತಿ ಮಂದಿರದಲ್ಲಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಡಾ.ಕರಿವೃಷಭ ದೇಶಿ ಕೇಂದ್ರದ ಶಿವಯೋಗೀಶ್ವರ ಸ್ವಾಮೀಜಿ ಅವರು ಅಜ್ಜಯ್ಯನವರ ಪರಮ ಆರಾಧಕರಾಗಿದ್ದು, ಅವರನ್ನೇ ಪ್ರೀತಿಯಿಂದ ಡಿಕೆಶಿ ಅಜ್ಜಯ್ಯ ಎಂದು ಕರೆಯುತ್ತಾರೆ.ಇದನ್ನೂ ಓದಿ: ವಿಧಾನಸೌಧದ ಮೆಟ್ಟಿಲುಗಳಿಗೆ ಅಡ್ಡಬಿದ್ದು ಪ್ರಜಾ ದೇಗುಲ ಪ್ರವೇಶಿಸಿದ ಸಿಎಂ ಡಿಕೆಶಿ

ತಮ್ಮ ಜೀವನದ ಪ್ರತಿ ಹಂತದಲ್ಲೂ ಎದುರಾದ ಪ್ರತಿಯೊಂದು ಒಳಿತು, ಕೆಡಕುಗಳ ಸಂದರ್ಭದಲ್ಲಿ ಡಿಕೆಶಿ ಮೊದಲು ಅಜ್ಜಯ್ಯ ಅವರನ್ನೇ ನೆನಪಿಸಿಕೊಳ್ಳುತ್ತಾರೆ. ಡಾ.ಕರಿವೃಷಭ ದೇಶಿ ಕೇಂದ್ರದ ಶಿವಯೋಗೀಶ್ವರ ಸ್ವಾಮೀಜಿಗಳು ಭವಿಷ್ಯ ಹೇಳೋದ್ರಲ್ಲಿ ಸಿದ್ಧ ಹಸ್ತರು ಎಂದು ಖ್ಯಾತಿ ಪಡೆದಿದ್ದಾರೆ. ಇವರ ಬಳಿ ಬಂದರೇ ಜಾತಕ, ದೋಷ ನಿವಾರಣೆ, ಹರಕೆಗಳು ಫಲಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಡಿಕೆಶಿ ತಂದೆಯನ್ನ ಉಳಿಸಿದ್ದ ಅಜ್ಜಯ್ಯ ಕೊಟ್ಟ ಬಿಲ್ವಪತ್ರೆ:
ಅಜ್ಜಯ್ಯನನ್ನು ನಂಬಲು ಒಂದು ಬಲವಾದ ಕಾರಣವಿದೆ. ಈ ಹಿಂದೆ ಡಿಕೆಶಿ ತಂದೆಗೆ ತಂದೆಗೆ ಸ್ಟ್ರೋಕ್ ಆಗಿ, ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇನ್ನು ಎರಡು ಗಂಟೆ ಮಾತ್ರ ನಿಮ್ಮ ತಂದೆಯುವರು ಬದುಕುತ್ತಾರೆಂದು ವೈದ್ಯರು ಹೇಳಿದ್ದರಂತೆ. ಆಗ ಅಜ್ಜಯ್ಯ ಬಿಲ್ವಪತ್ರೆಯನ್ನು ಕೊಟ್ಟು 20 ನಿಮಿಷದಲ್ಲಿ ಇದನ್ನು ನಿಮ್ಮ ತಂದೆ ತಲೆಯ ಕೆಳಗಿಡಿ ಎಂದು ಕೊಟ್ಟಿದ್ದರಂತೆ. ಅದರಂತೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿ ಡಿಕೆಶಿ ತಂದೆಯ ತಲೆಯ ಕೆಳಗೆ ಬಿಲ್ವಪತ್ರೆ ಇಟ್ಟಿದ್ದರಂತೆ. ಆಗ ತಂದೆ ಗುಣಮುಖರಾಗಿದ್ದರು. ಅದಿನಿಂದ ಡಿಕೆಶಿ ಅಜ್ಜಯ್ಯನ ಪರಮ ಭಕ್ತರಾಗಿದ್ದಾರೆ.

ಇನ್ನೂ ಡಿಕೆಶಿ ಜೈಲಿಗೆ ಹೋಗುವ ಮೊದಲೇ ಅಜ್ಜಯ್ಯನ ಗದ್ದುಗೆಯಲ್ಲಿ ಸೂಚನೆಯೊಂದು ಸಿಕ್ಕಿತ್ತಂತೆ. ಡಿಕೆಶಿ ದರ್ಶನಕ್ಕಾಗಿ ಮುಕ್ತಿ ಮಂದಿರಕ್ಕೆ ಹೋದಾಗ ತಾವು ಹೊದ್ದುಕೊಂಡಿದ್ದ ರೇಷ್ಮೆ ಶಾಲಿಗೆ ಬೆಂಕಿ ತಗುಲಿತ್ತು. ಆಗ ಅಜ್ಜಯ್ಯನವರು ಡಿಕೆಶಿಗೆ ಮುಂದೆ ಕಾದಿರುವ ಅಪಶಕುನದ ಬಗ್ಗೆ ತೋರಿಸಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ 2019ರ ಅ.23ರಂದು 48 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು. ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಳಿಕ ಡಿಕೆ ಶಿವಕುಮಾರ್ ಮೊದಲು ನೊಣವಿನಕೆರೆ ಮಠಕ್ಕೆ ಬಂದಿದ್ದರು. ಆಗ ಅಜ್ಜಯ್ಯ ಬಂಡೆಯಂತೆ ಕಷ್ಟಗಳು ಕರಗಿ ಮುಖ್ಯಮಂತ್ರಿಯೂ ಆಗುತ್ತೀರಿ ಎಂದು ಭವಿಷ್ಯ ನುಡಿದಿದ್ದರು.ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿಯಾಗಲಿರುವ ಡಿಕೆಶಿ ಎಲ್ಲ ಮತ ಬಾಂಧವರ ಪ್ರೀತಿಯ ಮಗನಾಗಲಿ: ನೊಣವಿನಕೆರೆ ಶ್ರೀ
ಇದಾದ ಬಳಿಕ ಮಗಳ ಮದ್ವೆ ಸೇರಿ ಹಲವು ಕಾರ್ಯಕ್ರಮಗಳಿಗೆ ಡಿಕೆ ಶಿವಕುಮಾರ್ ಅಜ್ಜಯ್ಯರನ್ನ ಆಹ್ವಾನಿಸಿದ್ದರು. ಕಳೆದ ಸಾರ್ವತ್ರಿಕ ಚುನಾವಣೆಗೂ ಮುನ್ನ ಅಜ್ಜಯ್ಯರನ್ನ ಭೇಟಿ ಮಾಡಿದ್ದರು. ಅಜ್ಜಯ್ಯನ ಶಕ್ತಿಶಾಲಿ ಪೀಠವು 150 ಸ್ಥಾನಗಳಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂದು ತಿಳಿಸಿತ್ತು. ಆಗ 136 ಸೀಟುಗಳನ್ನು ಅಜ್ಜಯ್ಯ ಹೇಳಿದವ್ರಿಗೆ ನೀಡಿ, ಉಳಿದ 15 ಟಿಕೆಟ್ ಬೇರೆಯವರಿಗೆ ನೀಡಿದ್ದರು. ಅದರಂತೆ ಅಜ್ಜಯ್ಯನ ಮಾತು ಉಲ್ಲಂಘಿಸಿ ಟಿಕೆಟ್ ಕೊಟ್ಟವರು ಸೋಲನುಭವಿಸಿದ್ದರು. ಇದಕ್ಕೂ ಮುನ್ನ ಮಾಜಿ ಸಿಎಂ ಎಸ್.ಎಂ ಕೃಷ್ಣ ಕೂಡ ಈ ಮಠಕ್ಕೆ ಭೇಟಿ ಕೊಟ್ಟಿದ್ದರು.

ಪಾಶುಪತ ಅಥವಾ ವೀರಶೈವ ಸಂಪ್ರದಾಯಕ್ಕೆ ಸೇರಿದ್ದ ಈ ಮಠ ಕಾಡಿನ ಮಧ್ಯದಲ್ಲಿರುವುದರಿಂದ ಕಾಡಸಿದ್ದೇಶ್ವರ ಮಠ ಎಂದು ಹೆಸರಿಡಲಾಗಿದೆ. ಇದಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದ್ದು, ನೊಳಂಬ ರಾಜರ ಕಾಲದ ಶೈವ ಕೇಂದ್ರಗಳಲ್ಲಿ ಇದು ಒಂದಾಗಿತ್ತು.ಇದನ್ನೂ ಓದಿ: Photo Gallery | ಕನಕಪುರ ಬಂಡೆ ಈಗ ಕರ್ನಾಟಕದ ಸಿಎಂ – ಡಿಕೆಶಿ ಪ್ರಮಾಣ ವಚನದ ವಿಶೇಷ ಕ್ಷಣಗಳು ಇಲ್ಲಿವೆ













