ನವದೆಹಲಿ: ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಪೊಲೀಸರಿಗೆ ಫೇಕ್ ಕಾಲ್ ಮಾಡಿದವನನ್ನು ಅರೆಸ್ಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಮುಂಡ್ಕಾ ಪೊಲೀಸ್ ಠಾಣೆಗೆ ಕಾಲ್ ಮಾಡಿದ ಆರೋಪಿಯು, ತನ್ನ ಮೇಲೆ ಯಾರೂ ಪಿಸ್ತೂಲ್‍ನಿಂದ ಹಲ್ಲೆ ಮಾಡಲು ಬಂದಿದ್ದಾರೆ ಎಂದು ಪೊಲೀಸರಿಗೆ ನಕಲಿ ಕರೆ ಮಾಡಿದ್ದಾನೆ. ಈ ಹಿನ್ನೆಲೆ ಕಾಲ್ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಇದನ್ನೂ ಓದಿ: ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್
Advertisement
Advertisement
ಜುಲೈ 22 ರಂದು ಅರವಿಂದ್ ಕುಮಾರ್(39) ಬೈಕ್‍ನಲ್ಲಿ ಹೋಗುತ್ತಿದ್ದಾಗ ಕಾರೊಂದು ಕೊಚ್ಚೆಯ ಮೇಲೆ ಹರಿದಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಅರವಿಂದ್ ಮೇಲೆ ಕೊಚ್ಚೆ ನೀರು ಬಿದ್ದಿದೆ. ಇದರಿಂದ ತನ್ನ ಬಟ್ಟೆ ಹಾಳು ಮಾಡಿದ್ದಕ್ಕಾಗಿ ಚಾಲಕನಿಗೆ ಪಾಠ ಕಲಿಸಲು, ಅವನು ಪೊಲೀಸರಿಗೆ ನಕಲಿ ಕರೆ ಮಾಡಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ(ಹೊರ) ಸಮೀರ್ ಶರ್ಮಾ ಹೇಳಿದ್ದಾರೆ.
Advertisement
ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಕುಮಾರ್, ಮುಂಡ್ಕ ಪೊಲೀಸ್ ಠಾಣೆಗೆ ಕರೆ ಮಾಡಿ ಕಾರು ಚಾಲಕ ತನ್ನ ಮೇಲೆ ಪಿಸ್ತೂಲ್‍ನಿಂದ ಹಲ್ಲೆ ಮಾಡಲು ಬಂದಿದ್ದಾನೆ ಎಂದು ಆರೋಪಿಸಿದ್ದಾನೆ. ಆದರೆ, ಪೊಲೀಸರು ಸ್ಥಳಕ್ಕೆ ತಲುಪಿದಾಗ ಕುಮಾರ್ ಅಲ್ಲಿ ಇರಲಿಲ್ಲ ಮತ್ತು ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕಮರಿಗೆ ಬಿದ್ದ ಕಾರು: 5 ಸಾವು, ಇಬ್ಬರಿಗೆ ಗಂಭೀರ ಗಾಯ
Advertisement
ಮರುದಿನ, ಪೊಲೀಸರು ಕುಮಾರ್‌ನನ್ನು ಸಂಪರ್ಕಿಸಿದ್ದು, ವಿಚಾರಣೆಯ ಮಾಡಿದ್ದಾರೆ. ಈ ವೇಳೆ, ತಾನು ಕಾರು ಚಾಲಕನಿಗೆ ಬುದ್ಧಿ ಕಲಿಸಲು ನಕಲಿ ಕರೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.