ಮಗನಿಂದಾಗಿ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಂದು ಪತಿ ಎಸ್ಕೇಪ್!

Public TV
2 Min Read
MURDER FTR

ನವದೆಹಲಿ: ಮಗನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ತಾರಕಕ್ಕೇರಿ ಪತಿ ತನ್ನ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ.

28 ವರ್ಷದ ದಿವ್ಯ ತನ್ನ ಪತಿ ಅಫ್ತಬ್ ಅಹ್ಮದ್(32) ನಿಂದ ಕೊಲೆಗೀಡಾಗಿದ್ದಾಳೆ. ಪತಿಗೆ ಅಕ್ರಮ ಸಂಬಂಧ ಇರುವ ಶಂಕೆಯೇ ಈಕೆಯ ಕೊಲೆಗೆ ಕಾರಣವಾಗಿದೆ.

ಘಟನೆ ವಿವರ:
ದಿವ್ಯಾ ಹಾಗೂ ಅಫ್ತಬ್ ಮನೆಯ ವಿರೋಧದ ನಡುವೆಯೇ ಮದುವೆಯಾಗಿದ್ದು, ಬಳಿಕ ದೆಹಲಿಯ ನಜಾಫ್ ಗ್ರಹ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೆಲ ದಿನಗಳವರೆಗೆ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಕ್ಲುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಸಣ್ಣಪುಟ್ಟ ಮಾತುಕತೆಗಳು ನಡೆಯುತ್ತಿತ್ತು. ತದನಂತರ ದಿವ್ಯ, ಪತಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾಳೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಿನಕಳೆದಂತೆ ಇಬ್ಬರ ಮಧ್ಯೆ ಮೈನಸ್ಸು ಮೂಡಿತ್ತು. ಹೀಗಾಗಿ ಬುಧವಾರ ರಾತ್ರಿ ಅಕ್ರಮ ಸಂಬಂಧ ವಿಚಾರವಾಗಿ ನಡೆದ ಗಲಾಟೆ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಕತ್ತು ಸೀಳಿ ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

MURDER 1

ಪ್ರಕರಣ ಸಂಬಂಧ ಆರೋಪಿ ಪತಿ ಅಫ್ತಬ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದು, ಅಫ್ತಬ್ ಪತ್ತೆಗೆ ಬಲೆ ಬೀಸಲಾಗಿದೆ. ಈ ಘಟನೆ ನಜಾಫ್ ಗ್ರಹ್ ನ ರಣಜಿ ಎನ್ಕ್ಲೇವ್ ಎಂಬ ಪ್ರದೇಶದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ. ಆರೋಪಿ ಅಫ್ತಬ್ ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದನು.

ದಂಪತಿಗೆ 3 ವರ್ಷದ ಮಗನಿದ್ದಾನೆ. ಅಫ್ತಬ್ ಗೆ ಅಕ್ರಮ ಸಂಬಂಧವಿದೆಯೆಂದು ದಿವ್ಯ ಸಂಶಯ ವ್ಯಕ್ತಪಡಿಸಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ಮಧ್ಯೆ ಆಗಾಗ ಜಗಳ ನಡೆಯುತಿತ್ತು. ಕಳೆದ ಎರಡು ವಾರಗಳ ಹಿಂದೆ ತನ್ನ ಮಗನನ್ನ ಅಫ್ತಬ್ ತಂದೆ-ತಾಯಿ ಮನೆಯಲ್ಲಿ ಬಿಟ್ಟು ಮಂಗಳವಾರವಷ್ಟೇ ವಾಪಸ್ಸಾಗಿದ್ದನು. ಆದ್ರೆ ಮಗನನ್ನು ತನ್ನ ಹೆತ್ತವರ ಮನೆಯಲ್ಲಿ ಬಿಟ್ಟು ಬಂದಿರೋ ವಿಚಾರವನ್ನು ಅಫ್ತಬ್, ಪತ್ನಿ ದಿವ್ಯಳ ಬಳಿ ಹೇಳಿರಲಿಲ್ಲ ಅಂತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

MURDER

ಅಫ್ತಬ್ ಮಂಗಳವಾರ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಜೊತೆ ಮಗ ಇಲ್ಲದಿರುವುದನ್ನು ಕಂಡು ರೊಚ್ಚಿಗೆದ್ದ ದಿವ್ಯ, ಪತಿ ಜೊತೆ ಖ್ಯಾತೆ ತೆಗೆದಿದ್ದಾಳೆ. ಅಲ್ಲದೇ ನನ್ನ ಮಗನನ್ನು ಮಾರಾಟ ಮಾಡಿದ್ದಿ ಅಂತ ಹೇಳಿ ತಗಾದೆ ತೆಗೆದಿದ್ದಾಳೆ. ಪತ್ನಿಯ ಗಲಾಟೆಯಿಂದ ಬೇಸತ್ತ ಅಫ್ತಬ್, ಪಕ್ಕದಲ್ಲೇ ಇದ್ದ ಸುತ್ತಿಗೆಯನ್ನು ತೆಗೆದುಕೊಂಡು ದಿವ್ಯ ತಲೆಗೆ ಹೊಡೆದಿದ್ದಾನೆ. ಅಲ್ಲದೇ ಚಾಕುವಿನಿಂದ ಕುತ್ತಿಗೆಯನ್ನು ಸೀಳಿದ್ದಾನೆ. ಪರಿಣಾಮ ದಿವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬಳಿಕ ಆತ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಬುಧವಾರ ಸಂಜೆಯಾಗುತ್ತಿದ್ದಂತೆಯೇ ದಿವ್ಯ ಕಾಣದಿದ್ದರಿಂದ ಸಂಶಯಗೊಂಡ ನೆರೆಮನೆಯವರು ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆ ಬಾಗಿಲು ಒಡೆದು ನೋಡಿದಾಗ ದಿವ್ಯ ರಕ್ತದ ಮಡುವಿನಲ್ಲಿ ಬಿದ್ದಿದ್ದಾಳೆ. ಈ ಮೂಲಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

MURDER 2 copy

Share This Article
Leave a Comment

Leave a Reply

Your email address will not be published. Required fields are marked *