ನವದೆಹಲಿ: ದೆಹಲಿಯಲ್ಲಿ (Delhi) ಕಟ್ಟಡ ಕುಸಿದು ಹಲವರ ಸಾವಿಗೆ ಕಾರಣವಾದ ಮಾಲೀಕರಿಗೆ ಅಡಿಪಾಯದ ಮಿತಿ ಬಗ್ಗೆ ಮೊದಲೇ ತಿಳಿದಿತ್ತು. ಹೆಚ್ಚುವರಿ ಭಾರವನ್ನು ಅಡಿಪಾಯ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಗೊತ್ತಿದ್ದರೂ, ಬಾಡಿಗೆ ಹಣದಾಸೆಗೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಾಗಿದೆ ಎಂದು FIRನಲ್ಲಿ ತಿಳಿದುಬಂದಿದೆ.
ಕಟ್ಟಡದ ಮಾಲೀಕ ಹರಿ ರಾಮ್ ಬನ್ಸಾಲ್ ಅಲಿಯಾಸ್ ಗುಪ್ತಾ ಹಾಗೂ ಅವರ ಸಹೋದರ ಅಸ್ತಿತ್ವದಲ್ಲಿದ್ದ ಅಡಿಪಾಯದ ಮಿತಿಗಳನ್ನು ತಿಳಿದಿದ್ದರೂ ನಾಲ್ಕು ಹೆಚ್ಚುವರಿ ಮಹಡಿಗಳನ್ನು ಸೇರಿಸಿದ್ದಾರೆ. ಇದರಿಂದ ಕಟ್ಟಡದ ರಚನಾತ್ಮಕ ಸ್ಥಿರತೆಗೆ ಧಕ್ಕೆಯಾಗಿದ್ದು ಇದೇ ಕುಸಿತಕ್ಕೆ ಪ್ರಮುಖ ಕಾರಣವೆಂದು FIRನಲ್ಲಿ ಉಲ್ಲೇಖಿಸಲಾಗಿದೆ.
ಕಟ್ಟಡ ನಿರ್ಮಾಣ ಅಥವಾ ದುರಸ್ತಿಯಲ್ಲಿ ನಿರ್ಲಕ್ಷ್ಯ ಹಾಗೂ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105, 290 ಮತ್ತು 125(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಡಿಪಾಯವು ಹೆಚ್ಚುವರಿ ಭಾರವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ತಿಳಿದಿದ್ದರೂ ನಾಲ್ಕು ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಹೇಗೆ ಅವಕಾಶ ನೀಡಲಾಯಿತು ಎಂಬ ಪ್ರಶ್ನೆ ಇದೀಗ ಎದ್ದಿದೆ. ಇದನ್ನೂ ಓದಿ: ಸೌದಿ ತೈಲ ಘಟಕಗಳ ಮೇಲೆ ಹೌತಿ ಬಂಡುಕೋರರಿಂದ ದಾಳಿ – 73 ಮಂದಿಗೆ ಗಾಯ
ಈ ಹೆಚ್ಚುವರಿ ನಿರ್ಮಾಣಕ್ಕೆ ಯಾರು ಅನುಮತಿ ನೀಡಿದರು? ಮಹಡಿಗಳನ್ನು ನಿರ್ಮಿಸುವ ಮೊದಲು ಅಧಿಕೃತ ಅನುಮೋದನೆ ಪಡೆಯಲಾಗಿತ್ತೇ? ಕಟ್ಟಡದ ರಚನಾತ್ಮಕ ಸುರಕ್ಷತೆಯನ್ನು ಪರಿಶೀಲಿಸಲಾಗಿತ್ತೇ? ಎಂಬುದನ್ನು ಪೊಲೀಸರು ತನಿಖೆ ನಡೆಸಲಿದ್ದಾರೆ. ಎಫ್‌ಐಆರ್‌ನಲ್ಲಿರುವ ಆರೋಪಗಳು ಸದ್ಯ ನಡೆಯುತ್ತಿರುವ ತನಿಖೆಯ ಭಾಗವಾಗಿವೆ. ಆರೋಪಗಳು ತನಿಖೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಸಾಬೀತಾಗಬೇಕಿದೆ.ಇದನ್ನೂ ಓದಿ: ದೊಡ್ಮನೆ ಫ್ಲೈಟ್‌ನಲ್ಲಿ ವಾರ್ ಸೈರನ್ – ವೈಷ್ಣವಿ, ಕಿರಣ್ ಶಾಸ್ತ್ರಿ ಮಧ್ಯೆ `ಜಳಕ’ದ ಜಗಳ
