ಮುಂಬೈ: ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ದೀಪಿಕಾ ತನ್ನ ನಿಶ್ಚಿತಾರ್ಥದಲ್ಲಿ ತೊಟ್ಟ ಉಂಗುರದ ಬೆಲೆ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಬುಧವಾರ ಕೊಂಕಣಿ ಹಾಗೂ ಗುರುವಾರ ಸಿಂಧ್ ಸಂಪ್ರದಾಯದಲ್ಲಿ ಮದುವೆಯಾದ ದೀಪ್‍ವೀರ್ ತಮ್ಮ ಮದುವೆಯ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಬಳಿಕ ಗುರುವಾರ ಸಂಜೆ ದಿಪ್‍ವೀರ್ ತಮ್ಮ ಮದುವೆ ಫೋಟೋ ರಿವೀಲ್ ಮಾಡಿದ್ದಾರೆ. ಸದ್ಯ ಈಗ ದೀಪಿಕಾ ಅವರ ಉಂಗುರ ಹಾಗೂ ಅವರ ಮದುವೆಯ ಉಡುಪಿನ ಬಗ್ಗೆ ಚೆರ್ಚೆಯಾಗುತ್ತಿದೆ.
Advertisement
The only thing i care about #DeepVeerKiShadi is deepika's ring. I mean.. look at that rock! pic.twitter.com/Jo6OFGS5XL
— ???????????????? ???????? (@wawinnnnnnn) November 16, 2018
Advertisement
ದೀಪಿಕಾ ತಾವು ಮದುವೆಗೆ ಧರಿಸಿದ ಉಡುಗೆಯ ದುಪ್ಪಟ್ಟಾದಲ್ಲಿ ಶ್ಲೋಕವಿದೆ. ಅಲ್ಲದೇ ದೀಪಿಕಾ ತಮ್ಮ ಎಡಗೈ ಬೆರಳಿಗೆ ದೊಡ್ಡದಾದ ವಜ್ರದ ರಿಂಗ್ ತೊಟ್ಟಿದ್ದಾರೆ. ಈ ವಜ್ರದ ಉಂಗುರ ಸುಮಾರು 1.3 ಕೋಟಿ ರೂ. ಯಿಂದ 2.7 ಕೋಟಿ ರೂ. ಇರಲಿದೆ ಎಂದು ಹೇಳಲಾಗುತ್ತಿದೆ.
Advertisement
Deepika Padukone’s wedding ring ????????#DeepVeerKiShaadi #DeepikaWedsRanveeer pic.twitter.com/Dp2hNKYiSl
— Ranveer Planet (@RanveerPlanet) November 15, 2018
Advertisement
ಸದ್ಯ ದೀಪಿಕಾ ಸಿಂಧ್ ಸಂಪ್ರದಾಯದ ಮದುವೆಯಾಗುವಾಗ ವಜ್ರದ ಉಂಗುರ ತೊಟ್ಟಿದ್ದಾರೆ. ಈ ಉಂಗುರ ಅವರ ಸಿಂಧ್ ಮದುವೆಯ ಫೋಟೋದಲ್ಲಿ ಕಾಣಿಸುತ್ತದೆ. ಈ ಉಂಗುರವನ್ನು ನೋಡಿದ ರಣ್‍ವೀರ್ ಅಭಿಮಾನಿಗಳು ನಿಮಗೆ ಒಳ್ಳೆಯ ಸೆಲೆಕ್ಷನ್ ಇದೆ ಎಂದು ಹೊಗಳಿದ್ದಾರೆ.
ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಬರೋಬ್ಬರಿ 1 ಕೋಟಿ ರೂ. ಉಂಗುರವನ್ನು ನಿಶ್ಚಿತಾರ್ಥಕ್ಕೆ ತೊಡಿಸಿದ್ದರು. ಸದ್ಯ ದೀಪಿಕಾ ಅವರ ಈ ಉಂಗುರ ಅನುಷ್ಕಾ ಉಂಗುರಕ್ಕಿಂತ ಹೆಚ್ಚಿನ ಬೆಲೆಯದ್ದು ಎಂದು ಹೇಳಲಾಗುತ್ತಿದೆ.
https://twitter.com/moumita03/status/1063086240700997632?ref_src=twsrc%5Etfw%7Ctwcamp%5Etweetembed%7Ctwterm%5E1063086240700997632&ref_url=https%3A%2F%2Fwww.ndtv.com%2Fentertainment%2Fthe-internets-obsessing-over-deepika-padukones-ring-reportedly-worth-a-couple-of-crores-1948496
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews