Connect with us

Dina Bhavishya

ದಿನ ಭವಿಷ್ಯ: 20-08-2020

Published

on

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ, ದ್ವಿತೀಯ,
ಗುರುವಾರ, ಪೂರ್ವ ಪಾಲ್ಗುಣಿ ನಕ್ಷತ್ರ
ರಾಹುಕಾಲ: 2:00 ರಿಂದ 3:34 ರವರೆಗೆ
ಗುಳಿಕಕಾಲ: 9:19 ರಿಂದ 10:53 ರವರೆಗೆ
ಯಮಗಂಡಕಾಲ 6:12 ರಿಂದ 7:45 ರವರೆಗೆ

ಮೇಷ: ಆರ್ಥಿಕ ಅನುಕೂಲ, ಕುಟುಂಬದಲ್ಲಿ ಗೊಂದಲಗಳು, ಸಂಗಾತಿಯ ಹಟಮಾರಿತನ, ಸ್ವಂತ ಉದ್ಯಮದಲ್ಲಿ ಪ್ರಗತಿ, ದುಡುಕಿನ ಮಾತು, ಪಾಲುದಾರಿಕೆಯಲ್ಲಿ ಸಮಸ್ಯೆ.

ವೃಷಭ: ವ್ಯವಹಾರದಲ್ಲಿ ಗೊಂದಲಗಳು, ದೈವ ನಿಂದನೆ,ಧರ್ಮನಿಂದನೆ, ಗುಪ್ತ ವ್ಯಾಧಿ, ಕಫ ಸೋಂಕು, ಆರ್ಥಿಕವಾಗಿ ಮೋಸ ಸಾಧ್ಯತೆ, ಆತುರದ ನಿರ್ಧಾರ, ಕೆಲಸಗಾರರಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ.

ಮಿಥುನ: ಪ್ರೀತಿ-ಪ್ರೇಮದಲ್ಲಿ ಗೊಂದಲ, ದುಶ್ಚಟಗಳಿಂದ ತೊಂದರೆ, ಜೂಜಿನಲ್ಲಿ ನಷ್ಟ, ಮಕ್ಕಳಲ್ಲಿ ಮೊಂಡುತನ, ವಿದ್ಯಾಭ್ಯಾಸದಲ್ಲಿ ಗೊಂದಲಗಳು, ಮೋಜು ಮಸ್ತಿಯಿಂದ ತೊಂದರೆ, ಸೌಂದರ್ಯವರ್ಧಕಗಳಿಂದ ತೊಂದರೆ.

ಕಟಕ: ಲಾಭದ ಪ್ರಮಾಣ ಕುಂಠಿತ, ಸ್ಥಿರಾಸ್ತಿ,ವಾಹನದಲ್ಲಿ ಮೋಸ, ಮಿತ್ರರು ದೂರವಾಗುತ್ತಾರೆ, ಮಾನಸಿಕ ಗೊಂದಲಗಳು, ಸ್ವಂತ ವ್ಯವಹಾರದಲ್ಲಿ ಅಲ್ಪ ಚೇತರಿಕೆ, ಮಾತಿನಿಂದ ಸಮಸ್ಯೆ, ಮಹಿಳೆಯರಿಂದ ನೋವು ನಿರಾಸೆ.

ಸಿಂಹ: ಉದ್ಯೋಗ ಲಾಭ, ಬಂಧುಗಳ ಆಗಮನ, ಮಿತ್ರರಿಂದ ಅನುಕೂಲ, ನೆರೆಹೊರೆಯವರಿಂದ ಕಿರಿಕಿರಿ, ಸ್ಥಳ ಬದಲಾವಣೆಯಿಂದ ಸಮಸ್ಯೆ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸ ಪ್ರಗತಿ.

ಕನ್ಯಾ: ಪ್ರಯಾಣದಲ್ಲಿ ಅನುಕೂಲ, ದೂರದಿಂದ ಧನಾಗಮನ, ಉದ್ಯೋಗದಲ್ಲಿ ಅನುಕೂಲ, ಪ್ರಯಾಣದಲ್ಲಿ ಕಾರ್ಯ ಜಯ, ಮಾತಿನಲ್ಲಿ ಹಿಡಿತ ಇರುವುದು ಒಳಿತು, ಆತುರದ ನಿರ್ಧಾರದಿಂದ ಕಾರ್ಯ ವಿಘ್ನ.

ತುಲಾ: ವ್ಯವಹಾರದಲ್ಲಿ ಯಶಸ್ಸು, ಅಧಿಕ ಸಿಟ್ಟು ಕೋಪತಾಪಗಳು, ಆಯುಷ್ಯದ ಭೀತಿ, ಸೋಂಕು, ಸುಸ್ತು, ಸೊಂಟ ಬಾಧೆ, ಆರ್ಥಿಕ ಚೇತರಿಕೆ, ಮಕ್ಕಳಿಂದ ನೋವು, ಪ್ರಯಾಣದಲ್ಲಿ ತೊಂದರೆ, ಸ್ವಯಂಕೃತ ಅಪರಾಧಗಳು.

ವೃಶ್ಚಿಕ: ದಾಂಪತ್ಯದಲ್ಲಿ ಕಲಹ, ಸಂಶಯಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ಆಕಸ್ಮಿಕ ಖರ್ಚುಗಳು, ತಪ್ಪು ವ್ಯವಹಾರ ಮತ್ತು ನಿರ್ಧಾರಗಳು, ಶುಭಕಾರ್ಯ ವಿಘ್ನ, ಮಕ್ಕಳ ಭವಿಷ್ಯದ ಚಿಂತೆ, ಅಪವಾದಗಳು.

ಧನಸ್ಸು: ಸಾಲಗಾರರ ಕಾಟ ಮತ್ತು ಚಿಂತೆ, ಅನಾರೋಗ್ಯದ ಸಮಸ್ಯೆ, ಸಂಗಾತಿಯೊಂದಿಗೆ ಮನಸ್ತಾಪ, ಪ್ರೀತಿ-ಪ್ರೇಮದಲ್ಲಿ ತೊಂದರೆಗಳು, ಬಾಡಿಗೆದಾರರಿಂದ ಸಮಸ್ಯೆ, ಕಾರ್ಮಿಕರಿಂದ ತೊಂದರೆ, ಸೇವಕರ ಅಲಭ್ಯ, ಶುಭಕಾರ್ಯ ಯಶಸ್ಸು, ಮಿತ್ರವಿಂದ ಅನುಕೂಲ.

ಮಕರ: ಭಾವನಾತ್ಮಕ ಸೋಲು, ಜೂಜಿನಲ್ಲಿ ಸೋಲು, ಪ್ರೀತಿಯಲ್ಲಿ ಗೊಂದಲ, ಮಕ್ಕಳು ದೂರ, ಸೇವಾ ಉದ್ಯೋಗದಲ್ಲಿ ಲಾಭ, ಒಳ್ಳೆಯತನದಿಂದ ಕಾರ್ಯ ಹಿನ್ನಡೆ.

ಕುಂಭ ಆಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಂದ ಲಾಭ, ಮಾನಸಿಕ ಗೊಂದಲಗಳು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಲ್ಲಿ ಯಶಸ್ಸು, ಪವಿತ್ರ ಕ್ಷೇತ್ರ ದರ್ಶನದ ಆಲೋಚನೆ, ಹಿರಿಯರಿಂದ ಅನುಕೂಲ, ವಿದ್ಯಾಭ್ಯಾಸ ಪ್ರಗತಿ, ಉನ್ನತ ಆಲೋಚನೆಗಳು.

ಮೀನ: ವಾಹನ ಅಪಘಾತಗಳು, ಕೋರ್ಟ್ ಕೇಸ್‍ಗಳಿಂದ ಆಘಾತ, ದುಡುಕಿನ ನಿರ್ಧಾರಗಳು, ನೀರಿನಿಂದ ತೊಂದರೆ, ಭವಿಷ್ಯದ ಆತಂಕಗಳು, ಅಪಕೀರ್ತಿ, ನಿರಾಸೆ, ಮಾನಹಾನಿ, ಉದ್ಯೋಗ ಬದಲಾವಣೆಯಿಂದ ತೊಂದರೆ.

Click to comment

Leave a Reply

Your email address will not be published. Required fields are marked *