– ಗಂಟೆಗೆ 150 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಅಬ್ಬರ
– ಗುಜರಾತಿನ 8 ಜಿಲ್ಲೆಗಳಲ್ಲಿ ಹೈಅಲರ್ಟ್
ನವದೆಹಲಿ: ಉಗ್ರಸ್ವರೂಪ ಪಡೆದುಕೊಂಡು ಮುನ್ನುಗ್ಗುತ್ತಿರುವ ಬಿಪರ್‌ಜಾಯ್ ಚಂಡಮಾರುತ (Cyclone Biparjoy) ಇಂದು ಸಂಜೆ ಗುಜರಾತ್‍ನ ಕಛ್ (Gujarat Kutch) ತೀರಕ್ಕೆ ಅಪ್ಪಳಿಸಲಿದೆ.
Advertisement
ಸಂಜೆ 4 ಮತ್ತು ರಾತ್ರಿ 8 ಗಂಟೆಯ ಒಳಗಡೆ ಚಂಡಮಾರುತ ಕಛ್ ತೀರಕ್ಕೆ ಅಪ್ಪಳಿಸಿ ಪಾಕಿಸ್ತಾನದ (Pakistan) ಕಡೆಗೆ ಸಾಗಲಿದೆ. ಕಳೆದ 58 ವರ್ಷಗಳಲ್ಲೇ ಜೂನ್ ತಿಂಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದೊಡ್ಡ ಚಂಡಮಾರುತ ಇದಾಗಿದ್ದು ಅರಬ್ಬಿ ಸಮುದ್ರದ ಸಮೀಪದ ಪ್ರದೇಶಗಳಲ್ಲಿ (Arabian Sea) ಭಾರೀ ಅನಾಹುತ ಸೃಷ್ಟಿಸಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.
Advertisement
Advertisement
ಗುಜರಾತ್‍ನ ಸೌರಾಷ್ಟ್ರ, ಕಛ್, ಜಾಮ್‍ನಗರ, ದ್ವಾರಕಾ ಸೇರಿ 8 ಜಿಲ್ಲೆಗಳಿಗೆ ಹೈಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಮುದ್ರ ತೀರದಿಂದ 10 ಕಿ.ಮೀ. ಅಂತರದಲ್ಲಿನ ಸುಮಾರು 74 ಸಾವಿರ ಮಂದಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ತಿಳಿಸಿ: ಸಾರ್ವಜನಿಕರಿಗೆ ಕೇಂದ್ರ ಕಾನೂನು ಆಯೋಗ ಮನವಿ
Advertisement
Updates on ESCS #CycloneBiparjoy
In a nerve-racking mission, @IndiaCoastGuard Ship Shoor & ALH Mk-III (CG 858) augmented for evacuation of 50 personnel from Jack up rig “Key Singapore” off #Okha, #Gujarat. All 50 crew (26 crew on 12th Jun and 24 crew today) evacuated safely. pic.twitter.com/JYbTsn8GbJ
— Indian Coast Guard (@IndiaCoastGuard) June 13, 2023
ಪಶ್ಚಿಮ ರೈಲ್ವೇ 76 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಗಾಳಿಯ ವೇಗ ಗಂಟೆಗೆ 125 ರಿಂದ 150 ಕಿ.ಮೀ ಇರಲಿದ್ದು, ಪ್ರವಾಹ ಪರಿಸ್ಥಿತಿಯೂ ಎದುರಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
#WATCH | Gujarat: Mandvi witnesses rough sea conditions and strong winds under the influence of #CycloneBiporjoy
As per IMD's latest update, VSCS (very severe cyclonic storm) Biparjoy to cross Saurashtra & Kutch & adjoining Pakistan coasts b/w Mandvi & Karachi near Jakhau Port… pic.twitter.com/QmebPZCsKQ
— ANI (@ANI) June 15, 2023
18 ಎನ್‍ಡಿಆರ್‌ಎಫ್,12 ಎಸ್‌ಡಿಆರ್‌ಎಫ್, 115 ರಾಜ್ಯ ರಸ್ತೆ ಹಾಗೂ ನಿರ್ಮಾಣ ಕೇಂದ್ರ ತಂಡಗಳು, 397 ವಿದ್ಯುತ್ ಇಲಾಖೆಯ ತಂಡಗಳನ್ನು ರಕ್ಷಣಾ ಕೆಲಸಕ್ಕೆ ನಿಯೋಜಿಸಲಾಗಿದೆ. ವಾಯುಪಡೆ, ನೌಕಾಪಡೆಗೆ ಯಾವುದಕ್ಕೂ ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ.
ಬಿರುಗಾಳಿಯಿಂದ ಈಗಾಗಲೇ ಗುಜರಾತ್ ತೀರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೊಬೈಲ್ ಹಾಗೂ ಸ್ಥಿರ ದೂರವಾಣಿಯಲ್ಲಿ ಸಂಪರ್ಕ ವ್ಯತ್ಯಯವಾಗಲಿರುವ ಕಾರಣ ರಕ್ಷಣಾ ತಂಡಗಳಿಗೆ ಸ್ಯಾಟಲೈಟ್ ಫೋನ್‌ಗಳನ್ನು ನೀಡಲಾಗಿದೆ. ಶಾಲೆ ಮತ್ತು ಇತರ ಸಭಾಭವನದಂತಹ ದೊಡ್ಡ ಕಟ್ಟಡಗಳಲ್ಲಿ ತಾತ್ಕಾಲಿಕ ಆಶ್ರಯ ಶಿಬಿರ ನಿರ್ಮಾಣ ಮಾಡಲಾಗಿದೆ.
ಚಂಡಮಾರುತರದಿಂದ ಸಮುದ್ರ ಪ್ರಕ್ಷುಬ್ಧವಾಗಿದು ಸೌರಾಷ್ಟ್ರ ಮತ್ತು ಕಛ್ ತೀರದಲ್ಲಿ 6 ಅಡಿ ಎತ್ತರದ ಅಲೆಗಳು ಏಳಲು ಆರಂಭಿಸಿದೆ. ಇಂದು ಅಲೆಗಳ ಎತ್ತರ 9 ಅಡಿಗೆ ಹೋಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಗುಜರಾತ್ ಜೊತೆಗೆ ಮಹಾರಾಷ್ಟ್ರ, ಗೋವಾ, ಕರ್ನಾಟಕದ ಕರಾವಳಿ ತೀರದ ಮೇಲೂ ನಿಗಾ ಇಡಲಾಗಿದೆ.