ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಹಾಗೂ ಜೇಮ್ಸ್ ನಡುವೆ ಹೋಲಿಕೆ ಮಾಡಿ ತಂದು ಹಾಕುವುದು ಬೇಡ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮನವಿ ಮಾಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಶ್ಮೀರ ಫೈಲ್ ಸಿನಿಮಾವು ಸತ್ಯಾಂಶಗಳ ಮೇಲೆ ತೆಗೆದಿರುವ ಸಿನಿಮಾವಾಗಿದೆ. ಇದು ಸಹ ಸಂದೇಶ ಇರುವ ಸಿನಿಮಾ. ಇದಕ್ಕೂ ಸಹ ತೆರಿಗೆ ವಿನಾಯಿತಿ ಕೊಡಲಿ. ಆದರೆ ಎರಡು ಸಿನಿಮಾಗಳನ್ನು ಹೋಲಿಕೆ ಮಾಡುವುದು ಬೇಡ ಎಂದರು. ಇದನ್ನೂ ಓದಿ: ಗುರುವಾರಕ್ಕೂ ಪುನೀತ್ ಸಿನಿಮಾ ರಿಲೀಸಿಗೂ ಏನದು ನಂಟು?
Advertisement
Advertisement
ಪುನೀತ್ ರಾಜ್‍ಕುಮಾರ್ ಅವರ ಹುಟ್ಟುಹಬ್ಬ ಸಂಭ್ರಮಿಸಿ ಕುಣಿದಾಡಬೇಕಿದ್ದ ಅಭಿಮಾನಿಗಳು ದುಃಖದಲ್ಲಿ ಅವರ ಹುಟ್ಟು ಹಬ್ಬ ಆಚರಿಸಿಕೊಳ್ಳಬೇಕಿದೆ. ಪುನೀತ್ ರಾಜಕುಮಾರ್ ಒಬ್ಬ ಮಾದರಿ ವ್ಯಕ್ತಿ. ಅವರ ನಡೆಯನ್ನು ಅಭಿಮಾನಿಗಳು ಅನುಸರಿಸಿದರೆ ಅದೇ ನಾವು ಅವರಿಗೆ ಕೊಡುವ ಗೌರವ ಅವರ ನಡೆಯಲ್ಲಿ ನಾವೆಲ್ಲಾ ನಡೆಯಬೇಕಿದೆ. ಕಾಶ್ಮೀರ ಫೈಲ್ ರೀತಿ ತೆರಿಗೆ ವಿನಾಯಿತಿ ಕೊಡುವ ವಿಚಾರ ಎರಡು ಸಿನಿಮಾಗಳಿಗೆ ತಂದು ಹಾಕುವ ಕೆಲಸ ಬೇಡ ಎಂದು ತಿಳಿಸಿದರು. ಇದನ್ನೂ ಓದಿ: ಟಿವಿಯಲ್ಲಿ ಬಂದಾಗ ಜೇಮ್ಸ್ ಚಿತ್ರ ನೋಡ್ತೀನಿ: ಸಿದ್ದರಾಮಯ್ಯ