– ಬಟ್ಟೆ ಖರೀದಿಗೆ ಮುಗಿಬಿದ್ದ ಗ್ರಾಹಕರು
ಚಿಕ್ಕಬಳ್ಳಾಪುರ: ಚಿಂತಾಮಣಿ (Chikkaballapur)ನಗರದಲ್ಲಿ ಕೇವಲ 1 ರೂ.ಗೆ ಟೀ-ಶರ್ಟ್ ನೀಡುವ ಆಫರ್ ಘೋಷಿಸಿದ್ದ ಬಟ್ಟೆ(One Rupee T-Shirt Offer ) ಅಂಗಡಿಯ ಮುಂದೆ ಗ್ರಾಹಕರ ದಂಡೇ ನೆರೆದಿತ್ತು. ಈ ವಿಶೇಷ ಆಫರ್‌ಗಾಗಿ ಜನರು ಅಂಗಡಿಗೆ( Clothing Store) ಮುಗಿಬಿದ್ದ ಪರಿಣಾಮ ಕೆಲಕಾಲ ನೂಕುನುಗ್ಗಲು ಉಂಟಾಯಿತು.
ನಗರದ ಬೆಂಗಳೂರು ಮುಖ್ಯರಸ್ತೆಯಲ್ಲಿ ಅಲಕ್ಸಿ ಎಂಬ ಹೆಸರಿನ ಹೊಸ ಬಟ್ಟೆ ಅಂಗಡಿ ಓಪನ್ ಮಾಡಿರುವ ಹಿನ್ನೆಲೆ ಈ ವಿಶೇಷ ಆಫರ್ ನೀಡಲಾಗಿತ್ತು. ಮೊದಲ 100 ಗ್ರಾಹಕರಿಗೆ 1 ರೂ.ಗೆ ಒಂದು ಟೀ-ಶರ್ಟ್ ನೀಡುವುದಾಗಿ ಅಂಗಡಿ ಮಾಲೀಕರು ಘೋಷಿಸಿದ್ದರು. ಆಫರ್ ವಿಚಾರ ತಿಳಿಯುತ್ತಿದ್ದಂತೆ ಬೆಳಗ್ಗೆಯಿಂದಲೇ ಅಂಗಡಿ ಮುಂದೆ ಜನರು ಜಮಾಯಿಸಿದ್ದರು. ಟೀ-ಶರ್ಟ್ ಪಡೆಯಲು ಯುವಕರು ಮುಗಿಬಿದ್ದ ಕಾರಣ ಕೆಲಕಾಲ ನೂಕುನುಗ್ಗಲು ಉಂಟಾಯಿತು.ಇದನ್ನೂಓದಿ: ನಾಡಿದ್ದು ಹಸೆಮಣೆ ಏರಬೇಕಿದ್ದವಳು ಆತ್ಮಹತ್ಯೆ – ಡೆತ್‌ನೋಟ್ ಬರೆದಿಟ್ಟು ಪ್ರಾಣಬಿಟ್ಟ ತಂದೆ-ತಾಯಿ, ಮಗಳು
ಜನಸಂದಣಿ ಹೆಚ್ಚಾದ ಪರಿಣಾಮ ಬೆಂಗಳೂರು ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಕೆಲಕಾಲ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅಂಗಡಿ ಮಾಲೀಕರು ಹಾಗೂ ಗ್ರಾಹಕರಿಗೆ ಪೊಲೀಸರು ಸೂಚನೆ ನೀಡಿ ಜನರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.ಇದನ್ನೂಓದಿ: ಸಿಂಗಲ್ ಪೇರೆಂಟ್ ಇರೋದಕ್ಕೆ ಮನನೊಂದು ಯುವಕ ಆತ್ಮಹತ್ಯೆ
