ಕಲಬುರಗಿ: ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharanprakash Patil) ತವರು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ (Sedam) ಜನ ಅಂತ್ಯಸಂಸ್ಕಾರಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಮಳೆಗಾಲ ಬಂದ್ರೆ ಸಾಕು ಸೇಡಂ ಪಟ್ಟಣದಲ್ಲಿನ ಕಮಲಾವತಿ ನದಿ ಉಕ್ಕಿ ಹರಿಯುತ್ತದೆ. ಆದರೆ, ಆ ನದಿ ಪಕ್ಕದಲ್ಲಿಯೇ ಸ್ಮಶಾನ ಭೂಮಿ ಇರುವ ಕಾರಣ ಉಕ್ಕಿ ಹರಿಯುವ ನದಿ ದಾಟಿ ಜನ ಅಂತ್ಯಸಂಸ್ಕಾರಕ್ಕೆ ತೆರಳಬೇಕಾದ ಪರಿಸ್ಥಿತಿ ಇದೆ.
ನಿನ್ನೆ ಸೇಡಂ ಪುರಸಭೆ ಮಾಜಿ ಸದಸ್ಯ ರಾಜು ಕಾಳಗಿಕರ್ (42) ನಿಧನ ಹೊಂದಿದ್ದ ಹಿನ್ನೆಲೆ ನದಿಯಾಚೆ ಇರುವ ಅವರ ಸಮುದಾಯದ ರುದ್ರಭೂಮಿಗೆ ಮೃತದೇಹವಿದ್ದ ಟ್ರ‍್ಯಾಕ್ಟರ್‌ನ ನದಿ ದಾಟಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಅಂತ್ಯಕ್ರಿಯೆಗೆ ಬಂದ ಜನ ಪರಸ್ಪರ ಒಬ್ಬರ ಕೈ ಒಬ್ಬರು ಹಿಡಿದು ನದಿ ದಾಟಿದ್ದಾರೆ. ಹೀಗಾಗಿ, ಆದಷ್ಟು ಬೇಗ ಕಮಲಾವತಿ ನದಿಗೆ ಬ್ರಿಡ್ಜ್ ನಿರ್ಮಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.



