Recent News

ಟ್ರಾಫಿಕ್ ಪೊಲೀಸರ ಮೇಲೆ ಜೋಡಿಯಿಂದ ಹಲ್ಲೆ!

ನವದೆಹಲಿ: ವಾಹನ ತಡೆದಿದ್ದಕ್ಕೆ ಯುವಕ- ಯುವತಿ ಇಬ್ಬರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಈಗ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಹಾಗೂ ಯುವತಿ ಟ್ರಾಫಿಕ್ ಪೊಲೀಸ್ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಪೊಲೀಸ್ ಮೇಲೆ ಕಿರುಚಾಡಿದ್ದಾರೆ. ಯುವತಿ ಟ್ರಾಫಿಕ್ ಪೊಲೀಸ್ ಮೇಲೆ ಬಾಟಲ್‍ನಿಂದ ಹೊಡೆದು ಹಲ್ಲೆ ಮಾಡಿದ್ದಾಳೆ.

ಡ್ಯೂಟಿಯಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿದಕ್ಕೆ ಹಾಗೂ ಅಸಭ್ಯವಾಗಿ ನಡೆದುಕೊಂಡಿದ್ದಕ್ಕೆ ಜೋಡಿಯನ್ನು ಬಂಧಿಸಲಾಗಿದೆ. ಜೋಡಿ ಪೊಲೀಸ್ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಮತ್ತೊಬ್ಬ ಟ್ರಾಫಿಕ್ ಪೊಲೀಸ್ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

ಯುವತಿ ತನ್ನ ಚಲನ್ ಮಿಶನ್‍ನನ್ನು ಒಡೆದು ಹಾಕಿದ್ದಾಳೆ. ಯುವಕ ನನ್ನ ಯೂನಿಫಾರಂನನ್ನು ಹರಿದುಹಾಕಿದ್ದಾನೆ ಎಂದು ಟ್ರಾಫಿಕ್ ಪೊಲೀಸ್ ದೂರಿದ್ದಾರೆ. ಸದ್ಯ ಯುವಕ ಹಾಗೂ ಯುವತಿ ವಿರುದ್ಧ ಐಪಿಸಿ ಸೆಕ್ಷನ್ 186, 353 ಹಾಗೂ 34 ಅಡಿಯಲ್ಲಿ ಎಫ್‍ಐಆರ್ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *