ಬೆಂಗಳೂರು: ಪುರಸಭೆಯ ಕಾಂಗ್ರೆಸ್ ಸದಸ್ಯ ರವಿ ಹಂತಕನ ಕಾಲಿಗೆ ಗುಂಡು ಹಾರಿಸಿ, ಸಿನಿಮೀಯ ಶೈಲಿಯಲ್ಲಿ ಆನೆಕಲ್ ಪೊಲೀಸರು ಹಂತಕನನ್ನು ಬಂಧಿಸಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ (Anekal) ನಡೆದಿದೆ. ಹಂತಕನನ್ನು ಕಾರ್ತಿಕ್ ಅಲಿಯಾಸ್ ಜೆಕೆ ಎಂದು ಗುರುತಿಸಲಾಗಿದೆ.
Advertisement
ಸಿನಿಮೀಯ ಸ್ಟೈಲ್‌ನಲ್ಲಿ ಅರೆಸ್ಟ್:
ಇತ್ತೀಚೆಗಷ್ಟೇ ನಡುರಸ್ತೆಯಲ್ಲೇ ಪುರಸಭಾ ಸದಸ್ಯ ರವಿ ಅವರನ್ನ ಬರ್ಬರವಾಗಿ ಕೊಲೆ ಮಾಡಿದ್ದ ಘಟನೆ ಆನೇಕಲ್ ಪಟ್ಟಣದ ಬಹದ್ದೂರ್‌ಪುರದ ಬಳಿ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡ ಆನೇಕಲ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದನ್ನೂ ಓದಿ: Wayanad Landslides: ನಾಲ್ವರು ಕನ್ನಡಿಗರು ದುರ್ಮರಣ – ಬೆಂಗಳೂರಿನ ಇಬ್ಬರು ಪ್ರವಾಸಿಗರು ಕಣ್ಮರೆ!
Advertisement
Advertisement
ಆರೋಪಿ ಕಳೆದ ಒಂದು ವಾರದಿಂದಲೂ ಕಣ್ತಪ್ಪಿಸಿಕೊಂಡು ಓಡಾಡುತ್ತಿದ್ದ. ಈತನ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನ ನಿಯೋಜಿಸಲಾಗಿತ್ತು. ಬುಧವಾರ (ಇಂದು) ಮುಂಜಾನೆ ಮೈಸೂರಮ್ಮನದೊಡ್ಡಿ ಬಳಿ ಆರೋಪಿ ಅಡಗಿರುವುದು ಗೊತ್ತಾಗಿ, ಆತನನ್ನ ಬಂಧಿಸಲು ಮುಂದಾಗಿದ್ದರು. ಇದನ್ನೂ ಓದಿ: ಕೆಆರ್‌ಎಸ್‌ನಿಂದ 1.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ – ಕಬಿನಿಯಿಂದ 80,000 ಕ್ಯುಸೆಕ್ ನೀರು ಹೊರಕ್ಕೆ
Advertisement
ಪೊಲೀಸರು ಬಂಧಿಸಲು ಮುಂದಾದಾಗ ಪೇದೆ ಸುರೇಶ್ ಮೇಲೆಯೇ ಆರೋಪಿ ಕಾರ್ತಿಕ್ ಹಲ್ಲೆ ನಡೆಸಿದ್ದ. ಇದರಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ ಪೊಲೀಸರು ಶರಣಾಗುವಂತೆ ಸೂಚನೆ ಕೊಟ್ಟರು. ಆದರೂ ಮಾರಕಸ್ತ್ರ ಹಿಡಿದು ಮುನ್ನುಗುತ್ತಿದ್ದ ವೇಳೆ ಆನೇಕಲ್ ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಅವರು, ಆರೋಪಿ ಕಾರ್ತಿಕ್ ಕಾಲಿಗೆ ಗುಂಡು ಹಾರಿಸಿದರು. ಆರೋಪಿ ಬಲಗಾಲಿಗೆ ಗುಂಡು ತಾಗಿತು. ಬಳಿಕ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಇದನ್ನೂ ಓದಿ: ಮೂಳೆ ಶಸ್ತ್ರಚಿಕಿತ್ಸೆಯಾಗಿದೆ ಮನೆ ಊಟ ಕೊಡಿ – ಮ್ಯಾಜಿಸ್ಟ್ರೇಟ್‌ಗೆ ಮೂರು ಪತ್ರ ಬರೆದ ದರ್ಶನ್!