ಮಂಡ್ಯ: ಕೇರಳದ ವಯನಾಡು ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರದ ಕಾರಣ ಕೆಆರ್‌ಎಸ್ (KRS)-ಕಬಿನಿ ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ತಿದೆ. ಹೀಗಾಗಿ ಮಂಗಳವಾರ ಸಂಜೆ 7 ಗಂಟೆಯಿಂದ 1.50 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಜೊತೆಗೆ ಕಬಿನಿಯಿಂದಲೂ (Kabini) 80 ಸಾವಿರ ಕ್ಯುಸೆಕ್ ನೀರು ಹರಿಸಲಾಗುತ್ತಿದೆ.
Advertisement
ಹೊರಹರಿವಿನ ಪ್ರಮಾಣ 2 ಲಕ್ಷ ಕ್ಯುಸೆಕ್‌ಗಿಂತಲೂ ಅಧಿಕವಾಗಿದೆ. ಹೀಗಾಗಿ ನದಿಪಾತ್ರದ ಕಾವೇರಿ ನಿಗಮ ಎಚ್ಚರಿಕೆಯ ಸಂದೇಶ ನೀಡಿದೆ. ನದಿ ಪಾತ್ರಕ್ಕೆ ಹೋಗ್ಬೇಡಿ. ಆಸ್ತಿಪಾಸ್ತಿ, ಜಾನುವಾರು ರಕ್ಷಿಸಿಕೊಳ್ಳಿ. ಸುರಕ್ಷಿತ ಪ್ರದೇಶದಲ್ಲಿರಿ ಎಂದು ಸೂಚನೆ ನೀಡಿದೆ. ಮಂಡ್ಯ ಜಿಲ್ಲಾಡಳಿತ ಸಹ ಜಾನುವಾರುಗಳು ಹಾಗೂ ಆಸ್ತಿ ಪಾಸ್ತಿ ರಕ್ಷಿಸಿಕೊಳ್ಳುವಂತೆ ಎಚ್ಚರಿಸಿದೆ. ಹೇಮಾವತಿ ಒಳಹರಿವು-ಹೊರಹರಿವು 80 ಸಾವಿರ ಕ್ಯೂಸೆಕ್‌ನಷ್ಟಿದೆ. ಮೆಟ್ಟೂರು ಡ್ಯಾಂ 119 ಅಡಿ ತಲುಪಿದ್ದು, ಬುಧವಾರ (ಜು.31) ಭರ್ತಿಯಾಗಲಿದೆ.