ರಾಮನಗರ: ನಮ್ಮ ಆಸೆ, ಅಭಿಲಾಷೆಯನ್ನ ಭಗವಂತ ಈಡೇರಿಸುತ್ತಿದ್ದಾನೆ, ಪ್ರಾರ್ಥನೆ ನೆರವೇರುವ ಕಾಲ ಬಂದಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.
ಡಿಕೆ ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವ ವಿಚಾರ ಕುರಿತು ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಸೋಮವಾರ ಗೋಧೂಳಿ ಮುಹೂರ್ತದಲ್ಲಿ ಡಿಕೆ ಶಿವಕುಮಾರ್ ಪಟ್ಟಾಭಿಷೇಕ?

ಎಲ್ಲರಿಗೂ ಆಸೆ ಇರುತ್ತದೆ, ನನಗೂ ಆಸೆ, ಅಭಿಲಾಷೆ ಇದೆ. ಪಕ್ಷದ ಲಕ್ಷಾಂತರ ಕಾರ್ಯಕರ್ತರು, ಮುಖಂಡರುಗಳಿಗೂ ಒಂದು ಆಸೆ ಇತ್ತು. ಆ ಆಸೆಯನ್ನ ಭಗವಂತ ಈಡೇರಿಸುತ್ತಿದ್ದಾನೆ. ನಾನು ಮೌನ ಮುರಿದು ಮಾತಾಡಿದ್ದೆ ಅಷ್ಟೇ. ಕೆಲವರು ಮೌನವಾಗಿಯೇ ಪ್ರಾರ್ಥನೆ ಮಾಡಿದ್ದರು. ಅದು ಈಡೇರುವ ಕಾಲ ಹತ್ತಿರ ಬಂದಿದೆ. ನಮ್ಮ ನಾಯಕರಿಗೆ ಒಂದು ಅವಕಾಶ ಸಿಗ್ತಾ ಇದೆ ಅಂತ ಭಗವಂತನಿಗೆ ಕೃತಜ್ಞತೆ ತಿಳಿಸಿದ್ದೇನೆ. ಇಂದು ಬಕ್ರೀದ್ ಹಬ್ಬ ಮಾಡ್ತಿದ್ದೇನೆ, ಹಬ್ಬದಲ್ಲಿ ರಾಜಕೀಯ ಬೆರೆಸಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಪರಮೇಶ್ವರ್‌ಗೆ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟ ವಿಚಾರ ಕುರಿತು ಮಾತನಾಡಿ, ಪರಮೇಶ್ವರ್ ಕೂಡ ನಮ್ಮ ನಾಯಕರೇ ಅಲ್ವಾ? ಅವರು ನಮ್ಮ ನಾಯಕರು, ಹಿರಿಯರು. ಅವರು ಕೇಳುವುದರಲ್ಲಿ ತಪ್ಪೇನಿದೆ? ಅವರು ಕೂಡ ಕೆಪಿಸಿಸಿ ಅಧ್ಯಕ್ಷರಾಗಿದ್ರು. ಅವಕಾಶ ಕೇಳುವುದರಲ್ಲಿ ತಪ್ಪೇನು ಇಲ್ಲ. ನಮ್ಮ ಜಿಲ್ಲೆಯವರು, ನಮ್ಮ ನಾಯಕರಾದಂತಹ ಡಿಕೆಶಿ ಅವರಿಗೆ ಅವಕಾಶ ಬೇಕು ಅಂತ ನಾವು ಕೇಳಿದ್ವಿ ಅಷ್ಟೇ ಎಂದಿದ್ದಾರೆ ಶಾಸಕರು. ಇದನ್ನೂ ಓದಿ: ಯತೀಂದ್ರ ಸಂಪುಟ ಸೇರ್ಪಡೆಗೆ ಕೊನೆಗೂ ಒಪ್ಪಿದ ಸಿದ್ದರಾಮಯ್ಯ
