– E20 ಪೆಟ್ರೋಲ್ ಬಗ್ಗೆ ಗ್ರಾಹಕರ ಆತಂಕಗಳನ್ನ ಪರಿಹರಿಸಲು ಕಾಂಗ್ರೆಸ್ ಒತ್ತಾಯ
ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (Congress Working Committee) ಸಭೆ ಇಂದು ಮುಕ್ತಾಯಗೊಂಡಿದ್ದು, ಸಭೆಯಲ್ಲಿ 4 ಪ್ರಮುಖ ವಿಚಾರಗಳ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸಂಸದ ನಾಸಿರ್ ಹುಸೇನ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಟನೆ, ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನದ ಆರೋಪ, E20 ಪೆಟ್ರೋಲ್ ಮಿಶ್ರಣ ಹಾಗೂ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾದ (China) ಅತಿಕ್ರಮಣದ ಆರೋಪಗಳ ಕುರಿತು ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
Glad to take part in the Congress Working Committee (CWC) meeting held under the leadership of AICC President Shri Mallikarjun Kharge at Indira Bhawan, New Delhi today.
CPP Chairperson Smt. Sonia Gandhi avaru, LoP Shri Rahul Gandhi avaru and other CWC members were present in… pic.twitter.com/TOpgCvgDAV
— DK Shivakumar (@DKShivakumar) August 19, 2026
ವಂದೇ ಮಾತರಂ (Vande Mataram) ವಿಚಾರದಲ್ಲೂ ಕಾಂಗ್ರೆಸ್ ತನ್ನ ನಿಲುವನ್ನ ಸ್ಪಷ್ಟಪಡಿಸಿದ್ದು, 1937ರಿಂದ ಯಾವ ರೀತಿ ಎರಡು ಚರಣಗಳನ್ನು ಹಾಡಿಕೊಂಡು ಬರಲಾಗುತ್ತಿದೆಯೋ ಅದನ್ನೇ ಮುಂದುವರಿಸುವುದಾಗಿ ನಾಸಿರ್ ಹುಸೇನ್ ಹೇಳಿದರಲ್ಲದೇ, ಈ ವಿಚಾರದಲ್ಲಿ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಾಲ್ಕು ನಿರ್ಣಯಗಳು
1. ಯುವಜನರ ಸಮಸ್ಯೆ:
ಪೇಪರ್ ಲೀಕ್, ನಿರುದ್ಯೋಗ ಮತ್ತು ವಿದ್ಯಾರ್ಥಿಗಳ ಮೇಲಿನ ದಮನದ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಟೀಕಿಸಿದೆ. 2014 ರಿಂದ ಕನಿಷ್ಠ 152 ಪೇಪರ್ ಲೀಕ್ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿರುವ CWC, ಈ ಸಮಸ್ಯೆಗಳ ವಿರುದ್ಧ ಹೋರಾಟ ಮುಂದುವರಿಸುವ ನಿರ್ಧಾರ ಕೈಗೊಂಡಿದೆ.
2. ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ:
ರಾಮಮಂದಿರ ಟ್ರಸ್ಟ್‌ನ ದೇಣಿಗೆ ಕಳ್ಳತನದ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಜೊತೆಗೆ ಟ್ರಸ್ಟ್‌ನ ಹಣಕಾಸು ಮತ್ತು ಆಸ್ತಿಗಳ ಸಮಗ್ರ ಲೆಕ್ಕಪರಿಶೋಧನೆ ನಡೆಸುವಂತೆ ಒತ್ತಾಯಿಸಿದೆ.

3. ಚೀನಾ ಮತ್ತು ರಾಷ್ಟ್ರೀಯ ಭದ್ರತೆ:
ಅರುಣಾಚಲ ಪ್ರದೇಶದಲ್ಲಿ ಚೀನಾದ ಪಿಎಲ್‌ಎ ಅತಿಕ್ರಮಣದ ಆರೋಪಗಳ ಬಗ್ಗೆ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ. ಭಾರತದ ಕೃಷಿ, ಇಂಧನ ಭದ್ರತೆ ಮತ್ತು ಕಾರ್ಯತಂತ್ರದ ಸಾರ್ವಭೌಮತ್ವವನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದೆ.
4. E20 ಹಾಗೂ ಮಹಿಳಾ ಮೀಸಲಾತಿ:
E20 ಪೆಟ್ರೋಲ್‌ನಿಂದ ಉಂಟಾಗಬಹುದಾದ ಮೈಲೇಜ್ ಕಡಿಮೆಯಾಗುವಿಕೆ, ವಾಹನಗಳ ಹೊಂದಾಣಿಕೆ ಮತ್ತು ಗ್ರಾಹಕರ ಆಯ್ಕೆಗೆ ಸಂಬಂಧಿಸಿದ ಆತಂಕಗಳನ್ನು ಪರಿಹರಿಸಬೇಕು ಎಂದು CWC ಒತ್ತಾಯಿಸಿದೆ. ಇದೇ ವೇಳೆ, 2029ರ ಲೋಕಸಭಾ ಚುನಾವಣೆಯಿಂದಲೇ ಮಹಿಳೆಯರಿಗೆ ಶೇ.33 ಮೀಸಲಾತಿ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

