ಮೈಸೂರು: ಕಾಂಗ್ರೆಸ್ (Congress) ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಬಾವುಟವನ್ನು ಉಲ್ಟಾ ಹಿಡಿದು ಪಥಸಂಚಲನ ನಡೆಸಿದ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.
ನೂತನ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ ಅವರಿಗೆ ಬಾವುಟ ಹಸ್ತಾಂತರಿಸುವ ವೇಳೆ ಈ ಯಡವಟ್ಟು ನಡೆದಿದೆ. ನಿರ್ಗಮಿತ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಅವರು ಬೀರಿಹುಂಡಿ ಬಸವಣ್ಣ ಅವರಿಗೆ ಕಾಂಗ್ರೆಸ್ ಬಾವುಟ (Congress Flag) ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಬಾವುಟ ಜೋಡಣೆಯಲ್ಲಿ ತಪ್ಪಾಗಿದೆ. ಇದನ್ನೂ ಓದಿ: ಯೋಧನ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್ ಅಪಘಾತ – ನಾಲ್ವರು ದುರ್ಮರಣ
ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಕ್ರಮದಲ್ಲಿರಬೇಕಿದ್ದ ಕಾಂಗ್ರೆಸ್ ಬಾವುಟವನ್ನು ಸೇವಾದಳದ ಕಾರ್ಯಕರ್ತರು ಹಸಿರು, ಬಿಳಿ ಹಾಗೂ ಕೇಸರಿ ಬಣ್ಣಗಳ ಕ್ರಮದಲ್ಲಿ ಉಲ್ಟಾ ಕಟ್ಟಿದ್ದರು. ಬಳಿಕ ಯಡವಟ್ಟು ಗಮನಕ್ಕೆ ಬಂದಿದ್ದು, ಸೇವಾದಳದ ಕಾರ್ಯಕರ್ತರು ಬಾವುಟವನ್ನು ಸರಿಪಡಿಸಿದ್ದಾರೆ. ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಬಾವುಟವನ್ನು ಸರಿಪಡಿಸಿ, ಮತ್ತೊಮ್ಮೆ ನೂತನ ಜಿಲ್ಲಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಇದನ್ನೂ ಓದಿ: ರಾಜ್ಯದ 217 ತಾಲೂಕುಗಳಲ್ಲಿ ಬರ ತಾಂಡವ – ವಿವಿಧ ಜಿಲ್ಲೆಗಳಲ್ಲಿ ಕೇಂದ್ರದ ತಂಡದಿಂದ ಬರ ಅಧ್ಯಯನ

