ಬೆಂಗಳೂರು: ಹೊಸಕೋಟೆ ನಗರದ ಸಂತೆ ಸರ್ಕಲ್ನಲ್ಲಿ ಸಂಜೆ ಭೀಕರ ಅಗ್ನಿ ಅವಘಡ (Fire Incident) ಸಂಭವಿಸಿದೆ. ಲಾರಿ ಕಂಟೇನರ್ ತಯಾರಿಸುವ ಗ್ಯಾರೇಜ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಕಂಟೇನರ್ ಧಗಧಗನೇ ಹೊತ್ತಿ ಉರಿದಿದೆ.
ನಗರದ ಸಂತೆ ಸರ್ಕಲ್ ಬಳಿಯ ʼಕಾರ್ತಿಕ್ ಇಂಜಿನಿಯರಿಂಗ್ ವರ್ಕ್ಸ್ʼ ಗ್ಯಾರೇಜ್ನಲ್ಲಿ ಈ ಘಟನೆ ಸಂಭವಿಸಿದೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ ಅಗ್ನಿ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಲಾರಿ ಪೇಂಟಿಂಗ್ ಮಾಡಲು ಗ್ಯಾರೇಜ್ ಒಳಗೆ ಇಟ್ಟಿದ್ದ ಕೆಮಿಕಲ್ ಡಬ್ಬಿಗಳಿಗೆ ಬೆಂಕಿ ತಗುಲಿದ್ದರಿಂದ, ಬೆಂಕಿಯ ಜ್ವಾಲೆ ಇಡೀ ಗ್ಯಾರೇಜ್ ವ್ಯಾಪಿಸಿದೆ.
ಕಂಟೇನರ್ ತಯಾರಿಕೆಗೆ ತಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಘಟನೆಯಿಂದ ಸುಮಾರು 50 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ.ಇದನ್ನೂ ಓದಿ: ಸಿಂಗೀತಂ ಶ್ರೀನಿವಾಸ್ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ: ಡಿಕೆಶಿ ಸಂತಾಪ
ಬೆಂಕಿ ಹೊತ್ತಿಕೊಂಡ ತಕ್ಷಣ ಸುತ್ತಮುತ್ತ ದಟ್ಟ ಹೊಗೆ ಆವರಿಸಿಕೊಂಡಿತ್ತು. ಇದರಿಂದ ಕೆಲಕಾಲ ಸ್ಥಳೀಯರಲ್ಲಿ ಆತಂಕ ಮೂಡಿತ್ತು. ತಕ್ಷಣವೇ ವಿಷಯ ತಿಳಿದು ಸ್ಥಳಕ್ಕೆ ಬಂದ ಎರಡು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸೋಕೆ ಹರಸಾಹಸ ಪಟ್ಟಿದ್ದಾರೆ. ಸದ್ಯ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ನಿಧನ – ಉಮಾಶ್ರೀ ಸಂತಾಪ

