ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ (Director) ಸಿಂಗೀತಂ ಶ್ರೀನಿವಾಸ ರಾವ್ (Singeetham Srinivasa Rao) ನಿಧನಕ್ಕೆ ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿಗಳು ಹಾಗೂ ಹಿರಿಯ ಕಲಾವಿದರಾದ ಡಾ. ಉಮಾಶ್ರೀ (Umashree) ಸಂತಾಪ ವ್ಯಕ್ತಪಡಿಸಿದ್ದಾರೆ.
ಮೂಲತ: ಆಂಧ್ರದ ಉದಯಗಿರಿಯ ಸಿಂಗೀತಂ ಶ್ರೀನಿವಾಸ ರಾವ್ ಅವರು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 60ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಂಭಾಷಣೆ ಇಲ್ಲದ ಮೂಕ ಚಿತ್ರದ ಶೈಲಿಯಲ್ಲಿ ಮೂಡಿಬಂದ `ಪುಷ್ಪಕ ವಿಮಾನ’ ಅವರ ಸಾರ್ವಕಾಲಿಕ ಶ್ರೇಷ್ಠ ಚಿತ್ರ. `ಆದಿತ್ಯ 369′ ಮತ್ತು `ಭೈರವ ದ್ವೀಪ’ ಅವರ ಇತರ ಪ್ರಸಿದ್ಧ ಚಿತ್ರಗಳು. ಇದನ್ನೂ ಓದಿ: ಬಳ್ಳಾರಿಯಲ್ಲಿ ತಾರಕಕ್ಕೇರಿದ SIR ಹಗ್ಗ ಜಗ್ಗಾಟ; ಬಿಜೆಪಿ BLA 1 ಮೋತ್ಕರ್ ಶ್ರೀನಿವಾಸ್ ಮೇಲೆ ಸರ್ಚ್ ವಾರಂಟ್
ಕನ್ನಡ ಚಿತ್ರರಂಗಕ್ಕೆ ಅವರು ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಡಾ. ರಾಜ್ ಕುಟುಂಬದೊಂದಿಗೆ ನಿಕಟ ಒಡನಾಟ ಹೊಂದಿದ್ದ ಅವರು, `ಹಾಲು ಜೇನು’, ‘ಚಲಿಸುವ ಮೋಡಗಳು’, `ಜ್ವಾಲಾಮುಖಿ’, `ಶ್ರುತಿ ಸೇರಿದಾಗ’, `ದೇವತಾ ಮನುಷ್ಯ’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ವಿಶೇಷ ಎಂದರೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಅವರನ್ನು `ಆನಂದ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು. ಇದನ್ನೂ ಓದಿ: ಸುಂಟರಗಾಳಿ ಚಿತ್ರದ `ಸಾರಾಯಿ ಶಾರದೆ’ ಖ್ಯಾತಿಯ ನಟಿ ಲಲಿತಮ್ಮ ಇನ್ನಿಲ್ಲ
ಬಹುಭಾಷಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಮೂರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದರು, ಅವರ ನಿಧನದಿಂದ ಭಾರತೀಯ ಚಿತ್ರರಂಗಕ್ಕೆ ಅಪಾರ ನಷ್ಟ ಉಂಟಾಗಿದೆ. ಅಸಂಖ್ಯಾತ ಅಭಿಮಾನಿಗಳಿಗೂ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಡಾ. ಉಮಾಶ್ರೀ ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪೈಲಟ್ ಸ್ಮಿತ್ ಮಚ್ಚರ್ಗೆ ಇಸ್ರೇಲ್ನಿಂದ ಅತ್ಯುನ್ನತ ಗೌರವ – ಸ್ವಾತಂತ್ರ್ಯ ದಿನಾಚರಣೆಗೆ ನೆತನ್ಯಾಹು ಆಹ್ವಾನ

