ಬಳ್ಳಾರಿ: ಜಿಲ್ಲೆಯಲ್ಲಿ ಎಸ್ಐಆರ್ (SIR) ಹಗ್ಗ ಜಗ್ಗಾಟ ತಾರಕಕ್ಕೇರಿದೆ. ಬಿಜೆಪಿಯ ಬಿಎಲ್ಎ 1 ಮೋತ್ಕರ್ ಶ್ರೀನಿವಾಸ್ ಮೇಲೆ ಸರ್ಚ್ ವಾರಂಟ್ ಹೊರಡಿಸಲಾಗಿದೆ.
ತಾಳೂರು ರಸ್ತೆಯಲ್ಲಿರುವ ಮೋತ್ಕರ್ ಶ್ರೀನಿವಾಸ್ ಕಚೇರಿ ಮೇಲೆ ಸರ್ಚ್ ವಾರಂಟ್ ಹೊರಡಿಸಲಾಗಿತ್ತು. FIR ದಾಖಲಾದ ಹಿನ್ನೆಲೆ ಪೊಲೀಸರು ಕೋರ್ಟ್ನಿಂದ ಸರ್ಚ್ ವಾರೆಂಟ್ ತಂದಿದ್ದರು.
7,561 ಮತದಾರರ ಅರ್ಹತೆ ಮರುಪರಿಶೀಲಿಸಿ ಎಂದು ಚುನಾವಣಾಧಿಕಾರಿಗೆ ಶ್ರೀನಿವಾಸ್ ದೂರು ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆ ಕಾಂಗ್ರೆಸ್ BLA 1 ಗೌತಮ್ ಎಂಬವರು ದೂರು ದಾಖಲಿಸಿದ್ದರು. ಬಳ್ಳಾರಿ ಬಿಜೆಪಿ ಬಿಎಲ್ಎ 1 ಮೋತ್ಕರ್ ಶ್ರೀನಿವಾಸ್ ವಿರುದ್ದ ಎಫ್ಐಆರ್ ದಾಖಲಾಗಿದೆ. ಈ ಹಿನ್ನೆಲೆ ಪೊಲೀಸರು ಕೋರ್ಟ್ನಿಂದ ಸರ್ಚ್ ವಾರಂಟ್ ತಂದಿದ್ದರು. ಪೊಲೀಸರ ನಡೆಗೆ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರು ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡ್ತಿದ್ದಾರೆ. ಸರ್ಚ್ ವಾರಂಟ್ಗೆ ನಾವು ಹೆದರೋದಿಲ್ಲ. ನಮ್ಮ ಕಾರ್ಯಕರ್ತರನ್ನ ಮುಟ್ಟಿದ್ರೆ ಪರಿಣಾಮ ಸರಿ ಇರೋದಿಲ್ಲ. ಯಾವ ಸ್ಟೇಷನ್ನಿಂದ ಈ ರೀತಿ ಮಾಡಿಸಲಾಗುತ್ತಿದೆಯೋ ಆ ಠಾಣೆಗೆ, ಆ ಅಧಿಕಾರಿ ಮನೆಗೆ ಮುತ್ತಿಗೆ ಹಾಕ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನಾಳೆ ಬಳ್ಳಾರಿಯಲ್ಲಿ ಬೃಹತ್ ಹೋರಾಟಕ್ಕೆ ಬಿಜೆಪಿ ಕರೆ ಕೊಟ್ಟಿದೆ. ಎಫ್ಐಆರ್ ದಾಖಲಾದ ಠಾಣೆಗಳಿಗೆ ಮುತ್ತಿಗೆ ಹಾಕಲು ಬಿಜೆಪಿ ಕರೆ ನೀಡಿದೆ. ನಾವು ಯಾವುದೇ ಸಮುದಾಯವನ್ನ ಟಾರ್ಗೆಟ್ ಮಾಡಿ ಪಟ್ಟಿ ಕೊಟ್ಟಿರಲಿಲ್ಲ. ಪರಿಶೀಲನೆ ಮಾಡಿ ಎಂದು ಲೆಟರ್ ಕೊಟ್ಟಿದ್ವಿ. ಹೀಗಾಗಿ, ನಾಳೆ ನಾವು ಠಾಣೆಗಳಿಗೆ ಮುತ್ತಿಗೆ ಹಾಕ್ತೇವೆ ಎಂದು ಎಚ್ವರಿಕೆ ನೀಡಿದ್ದಾರೆ. ರಾಯಲ್ ವೃತ್ತದಿಂದ ಪ್ರತಿಭಟನೆ ಆರಂಭಿಸಿ, ಬಳಿಕ ಬ್ರೂಸ್ ಪೇಟೆ ಹಾಗೂ ಎಪಿಎಂಸಿ ಠಾಣೆಗೆ ಮುತ್ತಿಗೆ ಹಾಕಲು ಬಿಜೆಪಿ ಯೋಜಿಸಿದೆ.

