Bengaluru CityDistrictsKarnatakaLatestMain Post

ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆ

ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆಯಲ್ಲೂ ಕಮಿಷನ್ ದಂಧೆಯ ಆರೋಪ ಕೇಳಿ ಬಂದಿದೆ. 40% ಮೀರಿ ದಂಧೆ ನಡೆಯುತ್ತಿದೆ ಎಂದು ಕೆ. ಎಸ್ ಆ್ಯಂಡ್ ಡಿಎಲ್ ಎಂಪ್ಲಾಯಿಸ್ ಯೂನಿಯನ್ ಗಂಭೀರ ಆರೋಪ ಮಾಡಿದೆ.

ಶ್ರೀಗಂಧ ಎಣ್ಣೆ ಖರೀದಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣದಲ್ಲಿ ಗೋಲ್ ಮಾಲ್ ನಡೆದಿದ್ದು, ಬ್ಲಾಕ್ ಲಿಸ್ಟ್ ನಲ್ಲಿರುವ ಕಂಪನಿಗಳ ಜೊತೆ ಕೋಟಿ ಕೋಟಿ ವ್ಯವಹಾರ ಆಗಿದೆ. ಕೋಟಿಗಟ್ಟಲೇ ಅಕ್ರಮ, ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕೆ. ಎಸ್ ಆ್ಯಂಡ್ ಡಿಎಲ್ ಎಂಪ್ಲಾಯಿಸ್ ಯೂನಿಯನ್ ದಾಖಲೆ ಬಿಡುಗಡೆ ಮಾಡಿದೆ.

ಈ ಭ್ರಷ್ಟಾಚಾರಕ್ಕೆಲ್ಲ ಕೆ.ಎಸ್ ಆ್ಯಂಡ್ ಡಿಎಲ್ ಎಂಡಿ ಮಹೇಶ್ ಶಿರೂರ ಕಾರಣ. ಕಳೆದ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಶ್ರೀಗಂಧ ಎಣ್ಣೆ ಮಾರಾಟ ಮಾಡಿದ್ದಾರೆ. ಬ್ಲಾಕ್ ಲಿಸ್ಟ್‍ನಲ್ಲಿರುವ ಕಂಪನಿಗಳ ಜೊತೆಗೂ ಶಿರೂರ ವ್ಯವಹಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ಪ್ರತಿಮೆ ನಿರ್ಮಾಣದಲ್ಲೂ ಶೇ.40 ಕ್ಕಿಂತ ಹೆಚ್ಚು ಕಮಿಷನ್ ಪಡೆಯುತ್ತಿದ್ದಾರೆ. 1 ಕೆಜಿ ಶ್ರೀಗಂಧಕ್ಕೆ 1 ಲಕ್ಷ ಹಣ ಹೆಚ್ಚುವರಿ ಕೊಟ್ಟು 2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿ ಮಾಡಲಾಗುತ್ತಿದೆ. ಕಾರ್ಖಾನೆಯಲ್ಲಿ ನಡೆದ ಬೃಹತ್ ಹಗರಣವನ್ನು ಎಸಿಬಿಗೆ ವಹಿಸುವಂತೆ ಯೂನಿಯನ್ ಆಗ್ರಹಿಸಿದೆ.

ಯಾವೇಲ್ಲಾ ಹಗರಣಗಳು ನಡೆದಿದೆ?
* ಕೆಎಸ್ ಮತ್ತು ಡಿಎಲ್ ಶ್ರೀಗಂಧ ಎಣ್ಣೆಯನ್ನು ಆಸ್ಟ್ರೇಲಿಯಾದಿಂದ ಮಧ್ಯಮ ವ್ಯಕ್ತಿಗಳಿಂದ ಖರೀದಿಸಲಾಗುತ್ತಿದೆ.
* ಆಸ್ಟ್ರೇಲಿಯಾದಿಂದ ಪ್ರತಿ ಕೆಜಿಗೆ 2 ಲಕ್ಷ 49 ಸಾವಿರ 899 ರೂ. ಗಳಿಗೆ ಅದಿತಿ ಇಂಟರ್ ನ್ಯಾಷನಲ್, ಮುಂಬೈ ಹಾಗೂ ಕರ್ನಾಟಕ, ಬೆಂಗಳೂರಿನ ಆರೋಮಾ ಖರೀದಿಗೆ 100% ಕಮಿಷನ್ ನಡೆದಿದೆ.
* ಶಿರೂರ ಅಧಿಕಾರಕ್ಕೆ ಬಂದ ಬಳಿಕ, ಇವರೆಗೆ 2 ಸಾವಿರ ಕೆಜಿ ಶ್ರೀಗಂಧ ಎಣ್ಣೆ ಖರೀದಿಯಾಗಿದೆ.
* ಕೃಷ್ಣರಾಜೇಂದ್ರ ಒಡೆಯರ್‍ರ ಪ್ರತಿಮೆಯನ್ನ 12 ಲಕ್ಷ ಹಣದಲ್ಲಿ ನಿರ್ಮಾಣಕ್ಕೆ ಅಸ್ತು. ಆದರೆ 13 ಲಕ್ಷ ಕಿಕ್ ಬ್ಯಾಕ್ ಪಡೆಯಲಾಗಿದೆ.
* ಕೆಎಸ್ ಮತ್ತು ಡಿಎಲ್‍ನಿಂದ ಪ್ರತಿಮೆ ನಿರ್ಮಾಣ ಮಾಡಲು ಟೆಂಡರ್ ಒಪ್ಪಿಕೊಂಡಿತ್ತು.
* ಬ್ಲಾಕ್ ಲಿಸ್ಟ್‍ನಲ್ಲಿರುವ ಬೆಂಗಳೂರಿನ ಆರೋಮಾ, ಕರ್ನಾಟಕ ಕೆಮಿಕಲ್ ಇಂಡಸ್ಟ್ರಿ ಕಂಪನಿಯಿಂದಲೇ ಶ್ರೀಗಂಧದ ಎಣ್ಣೆಯನ್ನು ಅಕ್ರಮವಾಗಿ ಕಮಿಷನ್ ಮೂಲಕ ಖರೀದಿ ಮಾಡಲಾಗಿದೆ.
* ಕಾರ್ಖಾನೆಗೆ ಬೇಕಿರುವ ನ್ಯೂಡಲ್ಸ್, ಶ್ರೀಗಂಧ ಎಣ್ಣೆಯಲ್ಲಿ 250 ಕೋಟಿ ಅವ್ಯವಹಾರವಾಗಿದೆ.
* ಅನಿವಾರ್ಯ ಇಲ್ಲದಿದ್ದರೂ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ.

ಬೆಂಗಳೂರು, 

Leave a Reply

Your email address will not be published.

Back to top button